ಅಡಿಕೆ ಎಲೆ ಹಳದಿ ರೋಗ ವ್ಯಾಪಕ: ಕಾದಿರಿಸಿದ 25 ಕೋಟಿ ರೂ. ವಿನಿಯೋಗವಾಗಿಲ್ಲ! 


Team Udayavani, Apr 29, 2022, 9:30 AM IST

Untitled-1

ಮಂಗಳೂರು: ಅಡಿಕೆ ಎಲೆ ಹಳದಿ ರೋಗದ ಹತೋಟಿಗೆ ರಾಜ್ಯ ಸರಕಾರ 2020-21ರ ಬಜೆಟ್‌ನಲ್ಲಿ 25 ಕೋಟಿ ರೂ. ಒದಗಿಸಿದ್ದರೂ ವಿನಿಯೋಗವಾಗಿಲ್ಲ. ಇದೀಗ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ರೋಗವು ವ್ಯಾಪಕವಾಗಿ ಹರಡುತ್ತಿದೆ.

ಎರಡು ವರ್ಷಗಳ ಹಿಂದೆ ಸುಳ್ಯದಲ್ಲಿ ರೋಗ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಾಗ ಆಗಿನ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮತ್ತು ಜಿ.ಪಂ. ಸಿಇಒ ಡಾ| ಸೆಲ್ವಮಣಿ ಸಭೆ ಕರೆದು ಸರ್ವೇಗೆ ಆದೇಶಿಸಿದ್ದರು. ಅದರಂತೆ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಗಳು ಹಾಗೂ ಅಡಿಕೆ ಸಂಶೋಧನ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್‌)ಗಳು ಸಂಯುಕ್ತವಾಗಿ ಸುಳ್ಯದ 10 ಗ್ರಾಮಗಳಲ್ಲಿ ಅಧ್ಯಯನ ನಡೆಸಿದ್ದು, 1,217 ಹೆಕ್ಟೇರ್‌ ಪ್ರದೇಶದಲ್ಲಿ ರೋಗ ಬಂದಿರುವುದನ್ನು ಪತ್ತೆಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸಿದ್ದವು. ಇದರನ್ವಯ 2020- 21ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ 25 ಕೋಟಿ ರೂ.ಗಳನ್ನು ರೋಗದ ಬಗ್ಗೆ ಸಂಶೋಧನೆ ಮತ್ತು ಪರ್ಯಾಯ ಬೆಳೆಗಾಗಿ ಕಾದಿರಿಸಿದ್ದರು. ಬಳಿಕ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳೂ ಸಮಿತಿಯಲ್ಲಿದ್ದಾರೆ. ಸಮಿತಿಯು 2-3 ಸಭೆಗಳನ್ನು ನಡೆಸಿದ್ದು, ಆ ಬಳಿಕ ಯಾವುದೇ ಪ್ರಗತಿ ಆಗಿಲ್ಲ.

ಸಿಪಿಸಿಆರ್‌ಪ್ರತ್ಯೇಕ ಸಂಶೋಧನೆ: 25 ಕೋಟಿ ರೂ.ಗಳಲ್ಲಿ 8 ಕೋಟಿ ರೂ.ಗಳನ್ನು ಸಂಶೋಧನೆಗೆ ಹಾಗೂ ಉಳಿದ ಮೊತ್ತವನ್ನು ಪರ್ಯಾಯ ಬೆಳೆಗೆ ಮೀಸಲಿಡಲಾಗಿದೆ. ಈ 8 ಕೋಟಿಯಲ್ಲಿ 3 ಕೋಟಿ ರೂ.ಗಳನ್ನು ಸಿಪಿಸಿಆರ್‌ಐಗೆ ಹಾಗೂ 5 ಕೋಟಿ ರೂ.ಗಳನ್ನು ಶಿವಮೊಗ್ಗದ ಕೃಷಿ ವಿ.ವಿ.ಗೆ ವಿಂಗಡಿಸಲಾಗಿದೆ. ಆದರೆ ಅನುದಾನ ಸದ್ಬಳಕೆ ಬಗ್ಗೆ ಯಾವುದೇ ನಿರ್ಧಾರ ಆಗದ ಕಾರಣ ಸಿಪಿಸಿಆರ್‌ಐ ವತಿಯಿಂದ ಪ್ರತ್ಯೇಕ ಅಧ್ಯಯನ ತನ್ನದೇ ಖರ್ಚಿನಲ್ಲಿ ಕಾಸರಗೋಡಿನಲ್ಲಿ ನಡೆಯುತ್ತಿದೆ. ಸಂಪಾಜೆ ಈ ರೋಗದ ಹಾಟ್‌ಸ್ಪಾಟ್‌ ಆಗಿದ್ದು, ಸಿಪಿಸಿಆರ್‌ಐ ಅಧಿಕಾರಿಗಳು ರೋಗ ಬಾರದ 14 ಅಡಿಕೆ ಮರಗಳನ್ನು ಗುರುತಿಸಿದ್ದರು. ಅವುಗಳನ್ನು ಮರು ಪರೀಕ್ಷೆಗೆ ಒಳಪಡಿಸಿದಾಗ ರೋಗ ಲಕ್ಷಣಗಳಿಲ್ಲದ ಕೇವಲ 9 ಮರಗಳು ಮಾತ್ರ ಸಿಕ್ಕಿವೆ. ಈ 9 ಮರಗಳ ಹಿಂಗಾರ ತೆಗೆದು ಟಿಶ್ಯೂ ಕಲ್ಚರ್‌ ಮಾಡಿ ಹೊಸ ಸಸಿಗಳನ್ನು ಉತ್ಪಾದಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಈ ಸಂಶೋಧನೆ ಫಲ ನೀಡಿದರೆ ರೋಗ ನಿರೋಧಕ ಸಸಿ ಲಭ್ಯವಾಗಲಿದೆ.

2014ರಲ್ಲಿ 14,490 ಹೆಕ್ಟೇರ್‌ನಲ್ಲಿ ಸಮೀಕ್ಷೆ ನಡೆಸಿದಾಗ 35,000 ಎಕರೆ ಪ್ರದೇಶದಲ್ಲಿ ಈ ರೋಗ ಕಾಣಿಸಿತ್ತು. ಈಗ ಹೆಚ್ಚಾಗಿರಬಹುದು ಎಂದು ಸಿಪಿಸಿಆರ್‌ಐ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

ಸಂಶೋಧನೆಗೆ ಪ್ರಯೋಗಾಲಯ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳಬೇಕು. ವಿಟ್ಲ ಸಿಪಿಸಿಆರ್‌ಐಯಲ್ಲಿ ಸಿಬಂದಿ ಕೊರತೆ ಇದೆ. ಹೊಸ ಸಿಬಂದಿ ನೇಮಕ ಮಾಡುತ್ತಿಲ್ಲ. ಹಾಗಾಗಿ ಕಾಸರಗೋಡಿನ ಸಿಪಿಸಿಆರ್‌ಐಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.ಡಾ| ಭವಿಷ್‌, ವಿಟ್ಲ ಸಿಪಿಸಿಆರ್‌ವಿಜ್ಞಾನಿ 

ರೋಗ ಮೊದಲ ಬಾರಿಗೆ 100 ವರ್ಷಗಳ ಹಿಂದೆ ಕೇರಳದಲ್ಲಿ ಕಾಣಿಸಿತ್ತು. ದ.ಕ.ದಲ್ಲಿ ಮೊದಲ ಬಾರಿಗೆ 1963ರಲ್ಲಿ ಸುಳ್ಯದ ಅರಂತೋಡಿನಲ್ಲಿ ಕಾಣಿಸಿಕೊಂಡಿತ್ತು. ಈಗ ಸುಳ್ಯ ಹಾಗೂ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹೆಚ್ಚು ಕಾಣಿಸುತ್ತಿದೆ. ಸಮರ್ಪಕ ಔಷಧ ಇಲ್ಲ. ನೀರು ನಿಲ್ಲುವ ಜಾಗದಲ್ಲಿ, ನೀರು ಬಸಿದು ಹೋಗದ ತೋಟದಲ್ಲಿ ಈ ರೋಗ ಹೆಚ್ಚು ಕಾಣಿಸುತ್ತಿದೆ.ಕೇಶವ ಭಟ್‌, ವಿಜ್ಞಾನಿ, ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ

ಸುಳ್ಯ ಪರಿಸರದಲ್ಲಿ ಶೇ. 50ರಷ್ಟು ಬೆಳೆ ಹಾನಿಯಾಗಿದೆ. ಮಡಿಕೇರಿ, ಕೊಪ್ಪ, ಶೃಂಗೇರಿಗಳಿಲ್ಲಿಯೂ ಹಾನಿಯಾಗಿದೆ. ಅಧಿಕ ನಷ್ಟ ಅನುಭವಿಸಿದವರಿಗೆ ಅವರ ಸಹಕಾರಿ ಸಾಲ ಮನ್ನಾ ಮಾಡ ಬೇಕು ಹಾಗೂ ಹೊಸ ಬೆಳೆ ಬೆಳೆಯಲು ಹೊಸ ಸಾಲ ನೀಡ ಬೇಕು. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.ಕಿರಣ್‌ ಕುಮಾರ್‌ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ

ಇದುವರೆಗಿನ ಸರಕಾರದ ನಿರ್ಣಯದಂತೆ ಬಜೆಟ್‌ ಅನುದಾನದಲ್ಲಿ ಪರ್ಯಾಯ ಬೆಳೆಗೆ ಮಾತ್ರ ಅವಕಾಶ. ನಷ್ಟ ಪರಿಹಾರಕ್ಕೆ ಅವಕಾಶವಿಲ್ಲ. ಆದರೆ ಅಡಿಕೆ ಬೆಳೆಗಾರರು ನಷ್ಟ ಪರಿಹಾರ ಕೊಡಿ ಎಂಬ ಬೇಡಿಕೆ ಮಂಡಿಸುತ್ತಿದ್ದಾರೆ.ದರ್ಶನ್‌, ತೋಟಗಾರಿಕೆ ಇಲಾಖೆ ಅಧಿಕಾರಿ

ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.