ಕನ್ನಡ ಭವನಕ್ಕೆ ನಿವೇಶನ ದೇಣಿಗೆ
Team Udayavani, Apr 29, 2022, 3:07 PM IST
ಭಾಲ್ಕಿ: ತಾಲೂಕಿನ ಗಡಿ ಭಾಗದ ಮೇಹಕರ್ ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ದಾನಿಯೊಬ್ಬರು ನಿವೇಶನ ದೇಣಿಗೆ ನೀಡಿದ್ದಾರೆ. ಗ್ರಾಮದ ಕನ್ನಡದ ಅಭಿಮಾನಿ ಆಗಿರುವ ಸಿದ್ರಾಮಯ್ಯ ವೀರುಪಾಕ್ಷಯ್ಯ ಪುರಾಣಿಕ ಅವರು ಸ್ವಇಚ್ಛೆಯಿಂದ ಕನ್ನಡ ಭವನಕ್ಕೆ ಬೇಕಿರುವ ನಿವೇಶನ ಕೊಡುವುದಾಗಿ ಕರಾರು ಪತ್ರ ಬರೆದು ಕೊಟ್ಟಿದ್ದಾರೆ.
ಮೆಹಕರನಲ್ಲಿ ಮುಂದೆ ನಿರ್ಮಾಣ ಆಗುವ ಕನ್ನಡ ಭವನಕ್ಕೆ ವೀರುಪಾಕ್ಷಯ್ಯ ಪುರಾಣಿಕ ಸ್ಮರಣಾರ್ಥ ಎಂದು ನಾಮಕರಣ ಮಾಡುವಂತೆ ಬರೆದ ಕರಾರು ಪತ್ರವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಭೂಷಣ ಮಾಮಡಿ ಮತ್ತು ಗೌರವ ಕಾರ್ಯದರ್ಶಿ ರಮೇಶ ಚಿದ್ರಿ ಮೂಲಕ ರಾಜ್ಯಾಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ.
ಕರಾರು ಪತ್ರ ಸ್ವೀಕರಿಸಿದ ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಗಡಿ ಭಾಗದ ಮೇಹಕರ್ ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆ ಆಗಿತ್ತು. ಆದರೆ, ಇಷ್ಟು ದಿನ ನಿವೇಶನ ಕೊರತೆಯಿಂದ ಆ ಬೇಡಿಕೆ ಕಾರ್ಯಗತ ಆಗಲಿಲ್ಲ. ಇದೀಗ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಸಿದ್ರಾಮಯ್ಯ ವೀರುಪಾಕ್ಷಯ್ಯ ಪುರಾಣಿಕ ಅವರು ನಿವೇಶನ ನೀಡಲು ಮುಂದೆ ಬಂದಿರುವುದು ಖುಷಿ ತಂದು ಕೊಟ್ಟಿದೆ. ಜಿಲ್ಲಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟು ಆದಷ್ಟು ಬೇಗ ಈ ಭಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಹಣಮಂತ ಚಿದ್ರಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಷಡಕ್ಷರಿ ಹಿರೇಮಠ, ಗ್ರಾಮದ ಪ್ರಮುಖರಾದ ಧನರಾಜ ಮಂಗಣೆ, ಶಿವಪುತ್ರ ಯಾಲಾ, ಬಸವರಾಜ ಮಂಗಣೆ, ಪ್ರಭು ಮಂಗಣೆ, ಬಸವರಾಜ ಬಡದಾಳೆ, ಶಿವರಾಜ ಮೇಹತ್ರೆ, ಸಂತೋಷ ಸ್ವಾಮಿ ಇದ್ದರು.
ಗಡಿಯಲ್ಲಿ ಕನ್ನಡ ಮಾತನಾಡುವವರೇ ಕಮ್ಮಿ ಇರುವಾಗ, ಕನ್ನಡಾಭಿಮಾನಿಗಳು ನಿರಂತರ ಕನ್ನಡ ಕಾರ್ಯ ನಡೆಯುವ ನಿಟ್ಟಿನಲ್ಲಿ ದೇಣಿಗೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಕನ್ನಡಕ್ಕಾಗಿ ತನು ಮನ ಧನ ಅರ್ಪಿಸುವ ಕನ್ನಡಾಭಿಮಾನಿಗಳಿಗೆ ಗೌರವ ಪೂರ್ವಕ ಅಭಿನಂದನೆಗಳು. -ನಾಗಭೂಷಣ ಮಾಮಡಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.