ಡೆಲ್ಲಿ ಗೆದ್ದದ್ದು 4 ಮ್ಯಾಚ್; ಎಲ್ಲದರಲ್ಲೂ ಕುಲದೀಪ್ ಮ್ಯಾನ್ ಆಫ್ ದ ಮ್ಯಾಚ್!
Team Udayavani, Apr 30, 2022, 5:30 AM IST
ಮುಂಬಯಿ: ಇದು ಈ ಐಪಿಎಲ್‌ನ ಸ್ವಾರಸ್ಯಗಳಲ್ಲೊಂದು. ಪ್ರಸಕ್ತ ಕೂಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯಿಸಿದ್ದು ನಾಲ್ಕೇ ಪಂದ್ಯ. ಈ ನಾಲ್ಕರಲ್ಲೂ ಪಂದ್ಯಶ್ರೇಷ್ಠರಾಗಿ ಮೂಡಿಬಂದವರು ಚೈನಾಮನ್ ಬೌಲರ್ ಕುಲದೀಪ್ ಯಾದವ್!
ಯೋಗ್ಯ ನಾಯಕರ ಕೈಯಲ್ಲಿ ಅವಕಾಶ ಲಭಿಸಿದರೆ ಕ್ರಿಕೆಟಿಗನೋರ್ವ ಯಾವ ಮಟ್ಟಕ್ಕೆ ಏರಬಲ್ಲ ಎಂಬುದಕ್ಕೆ ಕುಲದೀಪ್ ಯಾದವ್‌ಗಿಂತ ಉತ್ತಮ ನಿದರ್ಶನ ಬೇಕಿಲ್ಲ. ಹಿಂದಿನ ಐಪಿಎಲ್ ಋತುಗಳಲ್ಲಿ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿತ್ತು. ಟೀಮ್ ಇಂಡಿಯಾದ ಕೆಟ್ಟ ರಾಜಕೀಯಕ್ಕೂ ಬಲಿಪಶು ಆಗಿದ್ದರು. ಆದರೆ ಈ ಐಪಿಎಲ್‌ನಲ್ಲಿ ಕುಲದೀಪ್ ಸಾಮರ್ಥ್ಯ ದೊಡ್ಡ ಮಟ್ಟದಲ್ಲೇ ಅನಾವರಣಗೊಂಡಿದೆ.
ಮುಂಬೈ ವಿರುದ್ಧ 18ಕ್ಕೆ 4
ಡೆಲ್ಲಿ ತನ್ನ ಗೆಲುವಿನ ಖಾತೆ ತೆರೆದದ್ದು ಮುಂಬೈ ಇಂಡಿಯನ್ಸ್ ವಿರುದ್ಧ. ಅಂತರ 4 ವಿಕೆಟ್. ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 5 ವಿಕೆಟಿಗೆ 177 ರನ್ ಬಾರಿಸಿತು. ಐದರಲ್ಲಿ 3 ವಿಕೆಟ್ ಉರುಳಿಸಿದವರು ಕುಲದೀಪ್ ಯಾದವ್. ನೀಡಿದ್ದು ಬರೀ 18 ರನ್. ರೋಹಿತ್, ಅನ್ಮೋಲ್‌ಪ್ರೀತ್, ತಿಲಕ್ ವರ್ಮ ಮತ್ತು ಪೊಲಾರ್ಡ್ ಚೈನಾಮನ್ ಮೋಡಿಗೆ ಸಿಲುಕಿದರು.
ಕೆಕೆಆರ್ ವಿರುದ್ಧ 35ಕ್ಕೆ 4
ಡೆಲ್ಲಿಯ ಎರಡನೇ ಗೆಲುವು ದಾಖಲಾದದ್ದು ಕೆಕೆಆರ್ ವಿರುದ್ಧ. ಇಲ್ಲಿ ಡೆಲ್ಲಿ 5ಕ್ಕೆ 215 ರನ್ ಪೇರಿಸಿತ್ತು. ಕೆಕೆಆರ್ ದಿಟ್ಟ ರೀತಿಯಲ್ಲೇ ಜವಾಬು ನೀಡಲಾರಂಭಿಸಿತು. ಆದರೆ ಕುಲದೀಪ್ ಮ್ಯಾಜಿಕ್ ಮೊದಲ್ಗೊಂಡ ಬಳಿಕ ತಣ್ಣಗಾಯಿತು. ಶ್ರೇಯಸ್, ಕಮಿನ್ಸ್, ಸುನೀಲ್ ನಾರಾಯಣ್ ಮತ್ತು ಉಮೇಶ್ ಯಾದವ್ ವಿಕೆಟ್ ಕುಲದೀಪ್ ಪಾಲಾದವು.
ಪಂಜಾಬ್ ವಿರುದ್ಧ 24ಕ್ಕೆ 2
ಪಂಜಾಬ್ ಕೇವಲ 115ಕ್ಕೆ ಆಲೌಟ್ ಆಗಿತ್ತು. ಡೆಲ್ಲಿ 9 ವಿಕೆಟ್‌ಗಳಿಂದ ಗೆದ್ದಿತು. ಇದರಲ್ಲಿ ಕುಲದೀಪ್ ಸಾಧನೆ 24ಕ್ಕೆ 2. ಇವೇನೂ ಬಿಗ್ ವಿಕೆಟ್ ಆಗಿರಲಿಲ್ಲ. ಅಕ್ಷರ್ ಪಟೇಲ್ 10ಕ್ಕೆ 2 ವಿಕೆಟ್ ಹಾರಿಸಿದ್ದರು. ಆದರೂ ಪಂದ್ಯಶ್ರೇಷ್ಠ ಗೌರವ ಕುಲದೀಪ್‌ಗೆ ಲಭಿಸಿದ್ದೊಂದು ಅಚ್ಚರಿ. ಇದಕ್ಕೆ ಅಕ್ಷರ್ ಅರ್ಹರಾಗಿದ್ದರು ಎಂದು ಕುಲದೀಪ್ ಹೇಳಿದ್ದು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿ.
ಕೆಕೆಆರ್ ವಿರುದ್ಧ 14ಕ್ಕೆ 4
ಕೋಲ್ಕತಾ ಎದುರಿನ ದ್ವಿತೀಯ ಸುತ್ತಿನ ಪಂದ್ಯದಲ್ಲೂ ಕುಲದೀಪ್ 4 ವಿಕೆಟ್ ಉಡಾಯಿಸಿದರು. ನೀಡಿದ ರನ್ ಕೇವಲ 14. ಎಸೆದದ್ದು ಮೂರೇ ಓವರ್. ಇದು ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಸಾಧನೆ. ಅವರಿಗೆ ಇನ್ನೂ ಒಂದು ಓವರ್ ನೀಡಿದ್ದರೆ ವಿಕೆಟ್ ಬೇಟೆ ಹೆಚ್ಚುತ್ತಿತ್ತೋ ಏನೋ ಎಂಬುದು ಕ್ರಿಕೆಟ್ ಅಭಿಮಾನಿಗಳ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.