ಗರ್ಭಕೋಶ ಶಸ್ತ್ರಚಿಕಿತ್ಸೆ: ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಲಿ


Team Udayavani, Apr 30, 2022, 6:00 AM IST

ಗರ್ಭಕೋಶ ಶಸ್ತ್ರಚಿಕಿತ್ಸೆ: ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಲಿ

ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆಯರಿಗೆ ಹಣದಾಸೆಗಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿದ್ದ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶಿಸಿದ್ದು, ಸ್ವಾಗತಾರ್ಹವಾಗಿದೆ. ಜತೆಗೆ ತನಿಖೆ ಬಳಿಕ ಈ ಮಹಿಳೆಯರಿಗೆ ಪರಿಹಾರ ನೀಡುವ ಕುರಿತೂ ಮುಖ್ಯಮಂತ್ರಿಗಳು ಮಾಹಿತಿ ನೀಡಿರುವುದು ಉತ್ತಮ ನಡೆಯಾಗಿದೆ.

ಅಂದ ಹಾಗೆ ಈ ಪ್ರಕರಣ ನಾಲ್ಕೈದು ವರ್ಷಗಳ ಹಿಂದೆಯೇ ನಡೆದಿದ್ದು, ಆಗಲೇ ಸುದ್ದಿಯಾಗಿತ್ತು. ಆದರೆ ಈಗ ಇವರ ಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದ್ದಾರೆ. ಕಲಬುರಗಿ, ಹಾವೇರಿ, ಬೀದರ್‌, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶೇ. 40ರಷ್ಟು ಬಡ ಮತ್ತು ಲಂಬಾಣಿ ಹೆಣ್ಣು ಮಕ್ಕಳು ಗರ್ಭಕೋಶ ಕಳೆದುಕೊಂಡಿದ್ದರು. ನೋವಿನ ಸಂಗತಿ ಎಂದರೆ ಇಂದು ಇವರ್ಯಾರಿಗೂ ಸರಿಯಾಗಿ ದೈನಂದಿನ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಚಿಕಿತ್ಸೆಗೂ ಹಣವಿಲ್ಲದೇ ಪರದಾಡುವಂಥ ಸ್ಥಿತಿಯೂ ಈಗ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಗರ್ಭಕೋಶ ತೆಗೆಸಿಕೊಂಡವರಲ್ಲಿ 40 ವರ್ಷದೊಳಗಿನವರೇ ಹೆಚ್ಚು ಎಂಬುದು ಇನ್ನಷ್ಟು ದುಃಖಕರ ಸಂಗತಿಯಾಗಿದೆ.

ಈ ಹೆಣ್ಣು ಮಕ್ಕಳಲ್ಲಿ ಇಂದು ನೀರು ತುಂಬಿದ ಕೊಡ ಎತ್ತಲೂ ಆಗುತ್ತಿಲ್ಲ. ಜತೆಗೆ ಕೂದಲು ಉದುರುವುದು, ಸೋಂಟ ನೋವು, ನರ ದೌರ್ಬಲ್ಯ, ಬೆನ್ನು ನೋವಿನಂಥ ಸ್ಥಿತಿಯೂ ಉದ್ಭವವಾಗಿದೆ.

ಮುಗ್ಧರನ್ನು ನಮ್ಮ ವ್ಯವಸ್ಥೆಗಳು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಆಗ ಮುಗ್ಧ ಮತ್ತು ಅವಿದ್ಯಾವಂತ ಮಹಿಳೆಯರು ಹೊಟ್ಟೆನೋವು, ಮುಟ್ಟು ಸಮಸ್ಯೆ, ಬಿಳಿ ಮುಟ್ಟು, ಉರಿಮೂತ್ರದಂಥ ಸಹಜ ಸಮಸ್ಯೆಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದರು. ಆಗ ಕೆಲವು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್‌ ಮಾಡಿ, ಕೆಲವು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್‌ ಮಾಡದೆಯೆ ಗರ್ಭಊತ, ಅಪೆಂಡಿಕ್ಸ್‌, ಗರ್ಭ ಕ್ಯಾನ್ಸರ್‌, ಗರ್ಭಚೀಲದ ಮೇಲೆ ಗುಳ್ಳೆಯಾಗಿದ್ದು ಪ್ರಾಣಕ್ಕೆ ಅಪಾಯವಾಗಿದೆ ಎಂದು ಹೆದರಿಸಿ ಗರ್ಭಕೋಶವನ್ನೇ ತೆಗೆದಿದ್ದರು. ಅಲ್ಲದೆ ಗರ್ಭಕೋಶ ತೆಗೆಸಿಕೊಂಡ ಮಹಿಳೆಯರಿಗೆ ಸರಕಾರದ ಕಡೆಯಿಂದ ಒಂದೂವರೆಯಿಂದ ಎರಡು ಲಕ್ಷ ರೂ.ಗಳವರೆಗೆ ಸಹಾಯಧನ ಬರುತ್ತಿತ್ತು. ಈ ಬಗ್ಗೆ ಈ ಮಹಿಳೆಯರಿಗೆ ಮಾಹಿತಿಯೇ ಇರಲಿಲ್ಲ. ಆದರೆ ಇವರಿಗೆ ಗರ್ಭಕೋಶ ತೆಗೆಸಿ, ಆಸ್ಪತ್ರೆಗಳೇ ಹಣ ದೋಚಿವೆ ಎಂಬ ಆರೋಪವೂ ಕೇಳಿಬಂದಿತ್ತು.

ಈ ರೀತಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಕೇವಲ ಪರಿಹಾರ ಘೋಷಿಸಿದರೆ ಮಾತ್ರ ಸಾಲದು. ದೀರ್ಘಾವಧಿವರೆಗೆ ಇವರ ಜೀವನ ನಿರ್ವಹಣೆಗೂ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಮಹಿಳಾ ಸಂಘಟನೆಗಳು, ಸರಕಾರವು ಇವರಿಗೆ ಸ್ವ-ಉದ್ಯೋಗ ಅಥವಾ ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹವನ್ನೂ ಮಾಡಿವೆ.

ಇಡೀ ಪ್ರಕರಣ ನೋಡಿದರೆ, ನೊಂದ ಮಹಿಳೆಯರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೇ ಅನ್ನಿಸುತ್ತದೆ. ಅಷ್ಟೇ ಅಲ್ಲ, ಅದು ಸರಕಾರದ ಜವಾಬ್ದಾರಿ ಕೂಡ. ಜತೆಗೆ ಇಂಥ ಮುಗ್ಧ ಜನರ ಬದುಕಿನ ಜತೆ ಆಟವಾಡುವಂಥವರಿಗೆ ಕಠಿನ ಶಿಕ್ಷೆಯೂ ಆಗಬೇಕು. ಇಂಥ ಹೊತ್ತಿನಲ್ಲೇ ಸಿಎಂ ಅವರು ಸಮಗ್ರ ತನಿಖೆ ಮತ್ತು ಪರಿಹಾರದ ಮಾತು ಹೇಳಿರುವುದು ಉತ್ತಮ ನಡೆಯೇ ಆಗಿದೆ. ಆದರೆ ಇದು ಶೀಘ್ರ ಗತಿಯಲ್ಲಿ ಆಗಬೇಕು. ಆಗಷ್ಟೇ ನೊಂದವರಿಗೆ ನ್ಯಾಯ ಸಿಕ್ಕಂತಾಗುತ್ತದೆ.

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.