ದೇಶದಲ್ಲಿ ಶಾಂತಿ-ಸೌಹಾರ್ದ ಸ್ಥಾಪನೆಯಾಗಲಿ
Team Udayavani, Apr 30, 2022, 1:09 PM IST
ಬೀದರ: ಪವಿತ್ರ ರಂಜಾನ್ ಪ್ರಯುಕ್ತ ಉಪವಾಸ ನಿರತ ಮುಸ್ಲಿಂ ಬಾಂಧವರಿಗಾಗಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಇಫ್ತಿಯಾರ್ ಕೂಟ ಆಯೋಜಿಸಲಾಗಿತ್ತು.
ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ್ ಮಾತನಾಡಿ, ವಿಶ್ವದಲ್ಲಿ ಕಲ್ಮಶವಾಗುತ್ತಿರುವ ಶಾಂತಿ, ಸೌಹಾರ್ದತೆ ಹಾಗೂ ಸದ್ಭಾವನೆ ಪುನಃ ಬಲಪಡಿಸಲು ಹಾಗೂ ಸ್ವತ್ಛ ಹಾಗೂ ಸುಂದರ ಜೀವನ ಸಾಗಿಸಲು ಪ್ರತಿ ವರ್ಷ ರಂಜಾನ್ ತಿಂಗಳು ಉಪವಾಸ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವುದರ ಜೊತೆಗೆ ಸರ್ವ ಧರ್ಮಿಯರನ್ನು ಕೂಡಿ ಇಫ್ತಿಯಾರ್ ಕೂಟ ಆಯೋಜಿಸಲಾಗುತ್ತದೆ ಎಂದರು.
ಭಾರತ ಅನಾದಿ ಕಾಲದಿಂದಲೂ ಸಂಸ್ಕೃತಿ ಹಾಗೂ ಸಂಪ್ರದಾಯ ಜೊತೆಗೆ ಅಧ್ಯಾತ್ಮ ವಿಷಯದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಇಂದು ಬಹುತೇಕ ಐರೋಪ್ಯ ಹಾಗೂ ಮಧ್ಯ ಏಷಿಯಾದ ರಾಷ್ಟ್ರಗಳು ಭಾರತೀಯ ಸಂಸ್ಕೃತಿಯನ್ನು ಅನುಕರಿಸುತ್ತಿವೆ. ಜಗತ್ತಿನ ಅನೇಕ ಮುಸಲ್ಮಾನ ರಾಷ್ಟ್ರಗಳು ಭಾರತದೊಂದಿಗಿನ ಬಾಂಧವ್ಯ ವೃದ್ಧಿಸಿಕೊಳ್ಳಲು ಆಸಕ್ತಿ ತೋರುತ್ತಿವೆ. ಆದರೆ, ದೀಪದ ಬುಡದಲ್ಲಿಯೇ ಕತ್ತಲು ಎಂಬಂತೆ ಇಂದು ಕೆಲವು ಮತಿಯ ಶಕ್ತಿಗಳು ಕೋಮು ಸಾಮರಸ್ಯ ಕದಡುವ ಹುನ್ನಾರ ನಡೆಸುತ್ತಿರುವುದು ಬೇಸರದ ಸಂಗತಿ ಎಂದರು.
ಡಾ| ಜಗನ್ನಾಥ ಹೆಬ್ಟಾಳೆ, ಶಿವಯ್ಯ ಸ್ವಾಮಿ, ಶಂಕ್ರೆಪ್ಪ ಹೊನ್ನಾ, ಪ್ರೊ| ಎಸ್.ಬಿ ಬಿರಾದಾರ, ಎಂ.ಜಿ ದೇಶಪಾಂಡೆ, ಹಂಶಕವಿ, ಶಂಭುಲಿಂಗ ವಾಲೊªಡ್ಡಿ, ಡಾ| ರಾಜಕುಮಾರ ಹೆಬ್ಟಾಳೆ, ಕೆ.ಎಸ್ ಚಳಕಾಪುರೆ, ಪ್ರೊ | ಎಸ್.ವಿ.ಕಲ್ಮಠ, ಮಲ್ಲಿಕಾರ್ಜುನ ಸ್ವಾಮಿ, ರಾಜೇಂದ್ರಸಿಂಗ್ ಪವಾರ, ಡಾ| ಸುನಿತಾ ಕೂಡ್ಲಿಕರ್, ಡಾ| ಮಹಾನಂದಾ ಮಡಕಿ, ಮಲ್ಲಮ್ಮ ಸಂತಾಜಿ, ಶಿವಕುಮಾರ ಸ್ವಾಮಿ, ಶಿವಶರಣಪ್ಪ ಗಣೇಶಪುರ, ಧನರಾಜ ಅಣಕಲೆ, ಬಸವರಾಜ ಹೆಗ್ಗೆ, ಶಿವಕುಮಾರ ಸ್ವಾಮಿ, ಸಂಜುಕುಮಾರ ಜುಮ್ಮಾ, ಡಾ| ಉಮಾಕಾಂತ ಪಾಟೀಲ, ವೀರಭದ್ರಪ್ಪ ಉಪ್ಪಿನ್, ಶಿವರಾಜ ಪಾಟೀಲ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.