ಜೆಡಿಎಸ್ ಶಾಸಕ ಸಾರಾ ಮಹೇಶ್ ಮೇಲೆ ಎಫ್ ಐಆರ್ ದಾಖಲು ಆರೋಪ : ರಾತ್ರೋರಾತ್ರಿ ಠಾಣೆ ಎದುರು ಧರಣಿ
ತಮ್ಮನ್ನು ಬಂಧಿಸುವಂತೆ ಪ್ರತಿಭಟಿಸುತ್ತಿರುವ ಶಾಸಕ ಸಾರಾ ಮಹೇಶ್
Team Udayavani, Apr 30, 2022, 11:13 PM IST
ಮೈಸೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮೇಲೆ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯ ಸ್ವತಃ ಶಾಸಕ ಸಾ.ರಾ.ಮಹೇಶ್ ಅವರೇ ಠಾಣೆಗೆ ಆಗಮಿಸಿ ತಮ್ಮನ್ನು ಬಂಧಿಸುವಂತೆ ಪ್ರತಿಭಟಿಸುತ್ತಿರುವ ಘಟನೆ ನಡೆಯುತ್ತಿದೆ.
ಆರ್ ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ಸಾ.ರಾ.ಮಹೇಶ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಾ.ರಾ.ಮಹೇಶ್ ಸ್ವತಃ ಠಾಣೆಗೆ ಆಗಮಿಸಿದ್ದು, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡರ ಜತೆಗೂಡಿ ತಮ್ಮನ್ನೂ ಬಂಧಿಸುವಂತೆ ಧರಣಿ ನಡೆಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರಾ ಮಹೇಶ್ ಬೆಂಬಲಿಗರು ಪೊಲೀಸರ ನಡೆಯನ್ನು ಖಂಡಿಸಿ ರಾತ್ರೋರಾತ್ರಿ ಧರಣಿ ನಡೆಸಲಾರಂಭಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಸಹ ಆಗಮಿಸಿದ್ದು, ಯಾವ ಉದ್ದೇಶಕ್ಕೆ ಎಫ್ ಐಆರ್ ದಾಖಲಾಗಿದೆ. ಯಾವ ಪ್ರಕರಣ ದಾಖಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆದರೆ, ರಾತ್ರೋರಾತ್ರಿ ಶಾಸಕರ ಏಕಾಎಕಿ ಧರಣಿಗೆ ಪೊಲೀಸರು ತಬ್ಬಿಬ್ಬಾಗಿದ್ದು ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಸೋಮವಾರ ರಮ್ಜಾನ್ ರಜೆ : ಸರಕಾರದ ಆದೇಶದ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷರ ಆಕ್ಷೇಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.