ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ: ಶ್ರಮಜೀವಿಗಳ ಬವಣೆ ನೀಗಿಸಬಲ್ಲವೇ ಯೋಜನೆಗಳು?
Team Udayavani, May 1, 2022, 8:10 AM IST
ಇಂದು ಮೇ 1. ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಯಾವುದೇ ದೇಶವಿರಲಿ, ಅದರ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾದದ್ದು. ಇಂಥ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿ ಮಾಡಿವೆ. ಈ ಯೋಜನೆಗಳು ಅವರ ಕಷ್ಟ ಕಾರ್ಪಣ್ಯಗಳನ್ನು ನೀಗಿಸಬಲ್ಲವೇ? ಈ ಕುರಿತ ಒಂದು ನೋಟ ಇಲ್ಲಿದೆ.
ಕೇಂದ್ರ ಸರಕಾರದ ಕಾರ್ಮಿಕ ಯೋಜನೆಗಳು
ಗರೀಬ್ ಕಲ್ಯಾಣ ಯೋಜನೆ
ಕೊರೊನಾ ಕಾಲದಲ್ಲಿ ನಿರುದ್ಯೋಗಿಗಳಾಗಿದ್ದ ಜನರ ಅನುಕೂಲಕ್ಕಾಗಿ ತಂದ ಯೋಜನೆ ಇದು. 2020ರ ಜೂನ್‌ನಲ್ಲಿ ಆರಂಭವಾಗಿರುವ ಈ ಯೋಜನೆ, 2022ರ ಅಕ್ಟೋಬರ್‌ಗೆ ಮುಗಿಯಲಿದೆ. ಇದರಿಂದ ಲಕ್ಷಾಂತರ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.
2.ಪಿಎಂ ಮತ್ಸ್ಯ ಸಂಪದ ಯೋಜನೆ
ಮೀನುಗಾರಿಕೆ ನಡೆಸುವವರ ಅನುಕೂಲತೆಗಾಗಿ ಜಾರಿಗೊಳಿಸಲಾದ ಯೋಜನೆ ಇದು. 2020-24ರ ವರೆಗೆ ಇದು ಜಾರಿಯಲ್ಲಿರಲಿದ್ದು, ಕೇಂದ್ರ ಸರಕಾರವೇ 20 ಸಾವಿರ ಕೋಟಿ ರೂ. ಮೀಸಲಿರಿಸಿದೆ.
3.ಪಿಎಂ ಶ್ರಮ ಯೋಗಿ ಮನ್‌ಧನ್
ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ 2019ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಕಾರ್ಮಿಕರಿಗೆ 60 ವರ್ಷ ದಾಟಿದ ಬಳಿಕ ನೇರ ನಗದು ವರ್ಗಾವಣೆ ಮೂಲಕ ಪಿಂಚಣಿ ನೀಡುವುದು ಈ ಯೋಜನೆಯ ಉದ್ದೇಶ.
4.ಸ್ಟಾರ್ಟ್‌ಅಪ್ ಇಂಡಿಯಾ
2016ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಅತ್ಯಂತ ಮಹತ್ವದ ಯೋಜನೆ ಇದು. ಸಣ್ಣಪುಟ್ಟ ಕೈಗಾರಿಕೆಗಳು, ಆರಂಭಿಸುವವರಿಗಾಗಿ ಈ ಯೋಜನೆಯ ಮೂಲಕ ಸಾಲ ನೀಡಲಾಗುತ್ತದೆ. 2021ರ ಜುಲೈ ವೇಳೆಗೆ 1.16 ಲಕ್ಷ ಮಂದಿಗೆ ಸಾಲ ನೀಡಲಾಗಿದೆ. ವಿಶೇಷವೆಂದರೆ ಸಾಲ ಪಡೆದವರಲ್ಲಿ ಶೇ.81ರಷ್ಟು ಮಂದಿ ಮಹಿಳೆಯರು.
5.ಪಿಎಂ ಮುದ್ರಾ ಯೋಜನೆ
ಈ ಯೋಜನೆಯ ಅಡಿಯಲ್ಲಿಯೂ ಕೇಂದ್ರ ಸರಕಾರ ಸಣ್ಣಪುಟ್ಟ ಉದ್ಯೋಗಳಿಗೆ ಸಾಲ ಒದಗಿಸುತ್ತದೆ. ಇದುವರೆಗೆ 34,42,00,000 ಮಂದಿಗೆ 18.6 ಲಕ್ಷ ಕೋಟಿ ರೂ. ಹಣ ಸಾಲ ನೀಡಲಾಗಿದೆ.
6. ಅಟಲ್ ಪಿಂಚಣಿ ಯೋಜನೆ
2010ರಲ್ಲಿ ಸ್ವಾವಲಂಬನಾ ಯೋಜನೆಯಾಗಿದ್ದ ಇದನ್ನು 2015ರಲ್ಲಿ ಅಟಲ್ ಪಿಂಚಣಿ ಯೋಜನೆ ಎಂದು ಬದಲಿಸಲಾಯಿತು. ಇದರಲ್ಲಿ ಕಾರ್ಮಿಕರ ಕೊಡುಗೆಯಷ್ಟೇ ಹಣವನ್ನು ಸರಕಾರ ಹಾಕುತ್ತದೆ. ಇದರ ಸೌಲಭ್ಯ ನಿವೃತ್ತಿಯ ಅನಂತರ ಸಿಗಲಿದೆ.
7.ಪಿಎಂ ಕೌಶಲ್ ವಿಕಾಸ್ ಯೋಜನೆ
ಉತ್ತಮ ಕೌಶಲವನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವೇ ಜನರಿಗೆ ತರಬೇತಿ ನೀಡುತ್ತಿದೆ. 2021ರ ವೇಳೆಗೆ ಇಲ್ಲಿ ಕಲಿತ ಶೇ.20 ಮಂದಿಗೆ ಉದ್ಯೋಗ ಲಭ್ಯವಾಗಿದೆ.
8.ರಾಷ್ಟ್ರೀಯ ಉದ್ಯೋಗ ಸೇವೆ
ಉದ್ಯೋಗ ಅರಸುವವರಿಗಾಗಿ ಆನ್‌ಲೈನ್ ಜಾಬ್ ಪೋರ್ಟಲ್ ಅನ್ನು ಕೇಂದ್ರ ಸರಕಾರವೇ ರಚಿಸಿದೆ. ಕೆಲಸ ಹುಡುಕುವವರಿಗೆ, ಉದ್ಯೋಗದಾತರಿಗೆ, ತರಬೇತಿ ನೀಡುವವರಿಗೆ, ಸರಕಾರಿ ಇಲಾಖೆಗಳಿಗೆ ಇದರಿಂದ ಅನುಕೂಲವಾಗುತ್ತಿದೆ.
ಜು.1ರಿಂದ ಕಾರ್ಮಿಕ ಕಾನೂನು ಬದಲು
ಕೇಂದ್ರ ಸರಕಾರವು ಜು.1ರಿಂದ ಹೊಸ ಕಾರ್ಮಿಕ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಆಗಿನಿಂದಲೇ ಕೆಲಸದ ಅವಧಿ, ಪಿಎಫ್ ಕೊಡುಗೆ ಹೆಚ್ಚಳ, ವೇತನ ಕಡಿತದಂಥ ನಿಯಮಗಳು ಜಾರಿಗೆ ಬರಲಿವೆ.
ಅಂದರೆ ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಕಾನೂನು ಸಂಹಿತೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ಕೇಂದ್ರದಿಂದ ಈ ಕುರಿತ ಎಲ್ಲ ಪ್ರಕ್ರಿಯೆ ಅಂತ್ಯವಾಗಿದ್ದರೂ ಕೆಲವು ರಾಜ್ಯಗಳು ಮಾತ್ರ ಇನ್ನೂ ಪೂರ್ಣ ಮಾಡಿಲ್ಲ. ಈ ಕೆಲಸ ಜೂನ್ ಅಂತ್ಯದ ವೇಳೆಗೆ ಮುಗಿಯುವ ಸಾಧ್ಯತೆ ಇದೆ.
ಕೆಲಸದ ಅವಧಿ
ಹೊಸ ಕಾನೂನು ಜಾರಿಗೆ ಬಂದ ಮೇಲೆ ಕೆಲಸದ ಅವಧಿ 8ರಿಂದ 9 ಅಥವಾ 12ಗಂಟೆವರೆಗೆ ವಿಸ್ತರಣೆಯಾಗಬಹುದು. ಆಗ ಕಂಪೆನಿಗಳು ವಾರಕ್ಕೆ 4 ದಿನ ಮಾತ್ರ ಕೆಲಸ ಮಾಡಿಸಿಕೊಳ್ಳಬಹುದು. ಇದರಿಂದಾಗಿ ವಾರಕ್ಕೆ 3 ದಿನ ರಜೆ ಸಿಕ್ಕಂತಾಗುತ್ತದೆ.
ವೇತನ ಮತ್ತು ಪಿಎಫ್
ಮೂಲ ವೇತನ ಶೇ.50ರಷ್ಟು ಹೆಚ್ಚಳವಾಗಲಿದೆ. ಆಗ ಪಿಎಫ್ಗೆ ಕಡಿತ ಮಾಡಿಕೊಳ್ಳುವ ಹಣವೂ ಹೆಚ್ಚಾಗುತ್ತದೆ. ಇದರಿಂದಾಗಿ ಟೇಕ್ ಹೋಮ್ ವೇತನ ಕಡಿಮೆಯಾಗಲಿದೆ. ಆದರೆ, ಪಿಎಫ್ ಮತ್ತು ಗ್ರಾಚ್ಯುಯಿಟಿಯಲ್ಲಿ ಹೆಚ್ಚಳವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.