ಸೋಮವಾರ ರಂಜಾನ್ ರಜೆ: ಆದೇಶಕ್ಕೆ ಚಂದ್ರದರ್ಶನ ಸಮಿತಿ ಅತೃಪ್ತಿ
Team Udayavani, May 1, 2022, 6:50 AM IST
ಬೆಂಗಳೂರು: ಈದ್-ಉಲ್-ಫಿತ್ರ (ರಂಜಾನ್) ಹಬ್ಬ ಆಚರಣೆಗೆ ಸಂಬಂಧಿಸಿ ಸೋಮವಾರ (ಮೇ 2) ರಜೆ ಘೋಷಿಸಿ ಸರಕಾರ ಆದೇಶ ಹೊರಡಿಸಿದ್ದು, ಇದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮೇ 3 ರಂದು ರಂಜಾನ್ ರಜೆ ಪ್ರಕಟಿಸ ಲಾಗಿತ್ತು. ಆದರೆ ಹಬ್ಬವನ್ನು ಮೇ 2 ರಂದು ಆಚರಿಸಲು ಮೂನ್ ಕಮಿಟಿ ತೀರ್ಮಾನಿಸಿರುವುದರಿಂದ ಅದೇ ದಿನ ರಜೆ ಘೋಷಿಸಲಾಗಿದೆ ಎಂದು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ರಾಜ್ಯ ಶಿಷ್ಟಾ ಚಾರ) ಅಧೀನ ಕಾರ್ಯ ದರ್ಶಿ ಅಪೇಕ್ಷಾ ಸತೀಶ್ ಪವಾರ್ ಹೆಸರಲ್ಲಿ ಎ.30ರಂದು ಅಧಿಸೂಚನೆ ಹೊರಡಿಸಲಾಗಿದೆ.
ಸಮಿತಿ ಸ್ಪಷ್ಟನೆ
ರಾಜ್ಯದಲ್ಲಿ ಹಬ್ಬ ಯಾವಾಗ ಆಚ ರಿಸ ಲಾಗು ವುದು ಎಂಬ ಬಗ್ಗೆ ಚಂದ್ರ ದರ್ಶನ ಸಮಿತಿ ರವಿವಾರ ಸಂಜೆ ತೀರ್ಮಾನ ಕೈಗೊಳ್ಳುತ್ತದೆ. ಮೇ 2ರಂದು ಹಬ್ಬ ಆಚರಿಸಲು ಸಮಿತಿ ನಿರ್ಧರಿಸಿದೆ ಎಂದು ಸರಕಾರದ ಆದೇಶ ದಲ್ಲಿ ಹೇಳಿರುವುದು ಸರಿ ಯಲ್ಲ ಎಂದು ಕರ್ನಾಟಕ ರಾಜ್ಯ ಚಂದ್ರ ದರ್ಶನ (ಮೂನ್ ಕಮಿಟಿ) ಸಮಿತಿ ಮುಖ್ಯಸ್ಥ ಮೌಲಾನ ಮಕ್ಸೂದ್ ಇಮ್ರಾನ್ ರಷಾದಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಹಬ್ಬ ಆಚರಣೆಗೆ ಚಂದ್ರದರ್ಶನವೇ ಮಾನ ದಂಡವಾಗಿದ್ದು, ರವಿವಾರ ಸಂಜೆ ಸಮಿತಿ ಸಭೆ ನಡೆಯಲಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಾದಿ ಸಹ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.