ಕುಡುಕ ಗಂಡನ ಹಿಂಸೆ ತಾಳಲಾರದೆ ಮಗುವಿನೊಂದಿಗೆ ಬಾವಿಗೆ ಹಾರಿದ ಗೃಹಿಣಿ, ಮಗು ಸಾವು
Team Udayavani, May 1, 2022, 2:32 PM IST
ಹುಳಿಯಾರು: ಕುಡುಕ ಗಂಡನ ಹಿಂಸೆ ತಾಳಲಾರದೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಗೃಹಿಣಿ ಬಾವಿಗೆ ಹಾರಿದ ಘಟನೆ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಕೆಂಕೆರೆಯ ಜಗದೀಶ್ ಎಂಬುವವರ ಪತ್ನಿ ಪ್ರೇಮ (30) ತನ್ನ ಮಗುವಿನೊಂದಿಗೆ ಬಾವಿದ ಹಾರಿದ ಗೃಹಿಣಿ. ನಿತ್ಯ ಗಂಡ ಕುಡಿದು ಬಂದು ಗಲಾಟೆ ಮಾಡಿ ಹೊಡೆಯುತ್ತಿದ್ದರಿಂದ ಕಿರುಕುಳ ತಾಳಲಾರದೆ ಮನನೊಂದು ಸಾಯಲು ಗ್ರಾಮದಲ್ಲಿರುವ ಗಾಣಿಗರ ಬಾವಿಗೆ ಹಾರಿದ್ದಾಳೆ ಎನ್ನಲಾಗಿದೆ.
ಬಾವಿಗೆ ಇವರಿಬ್ಬರೂ ಬಿದ್ದ ಶಬ್ಧ ಕೇಳಿ ಗ್ರಾಮಸ್ಥರ ಬಾವಿಯ ಬಳಿ ದೌಡಾಯಿಸಿ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ತಾಯಿ ಪ್ರೇಮಾಳನ್ನು ಮಾತ್ರ ರಕ್ಷಿಸಲು ಸಫಲರಾಗಿದ್ದು, ಮಗು ರೂಪಾ ಬಾವಿಯಲ್ಲೇ ಅಸುನೀಗಿದೆ.
ಅಗ್ನಿಶಾಮಕ ದಳದವರು ಬಂದು ಮಗುವಿನ ಮೃತ ದೇಹವನ್ನು ಮೇಲೆತ್ತಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಮತ್ತೆ ಆತ್ಮಹತ್ಯೆಗೆ ಯತ್ನ: ಈ ಘಟನೆಯಿಂದ ಗ್ರಾಮದಲ್ಲಿರುವ ಕೆಲವರ ನಿಂದನೆ ಮಾತನ್ನು ಕೇಳಬೇಕಾಗುತ್ತದೆ ಎಂದು ಮನನೊಂದು ಪ್ರೇಮಾ ವಿಚಲಿತಳಾಗಿ ಶನಿವಾರ ಬೆಳಗ್ಗೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇದನು ಗಮನಿಸಿದ ಕುಟುಂಬದವರು ನೇಣಿನ ಕುಣಿಕೆಯಿಂದ ಬಿಡಿಸಿ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.