ಐಪಿಎಲ್ ಫಸ್ಟ್ ಮ್ಯಾಚ್-2014: ಓಪನಿಂಗ್ ಮತ್ತು ಫೈನಲ್… ಎರಡನ್ನೂ ಗೆದ್ದ ಕೆಕೆಆರ್
Team Udayavani, May 2, 2022, 8:45 AM IST
ಮತ್ತೊಂದು ಮಹಾಚುನಾವಣೆ 2014ರ ಐಪಿಎಲ್ ಆತಿಥ್ಯಕ್ಕೆ ತೊಡಕಾಗಿ ಪರಿಣಮಿಸಿತು. ಹೀಗಾಗಿ ಈ ಕೂಟವನ್ನೂ ದೇಶದಾಚೆ ನಡೆಸುವುದು ಅನಿವಾರ್ಯ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಮೊದಲೇ ಮಾಧ್ಯಮಗಳಿಗೆ ತಿಳಿಸಿದರು.
ನಮ್ಮ ಆದ್ಯತೆಯಲ್ಲಿರುವ ಮೊದಲ ರಾಷ್ಟ ದಕ್ಷಿಣ ಆಫ್ರಿಕಾ ಎಂದೂ ಹೇಳಿದರು. ಜತೆಗೆ ಬಾಂಗ್ಲಾದೇಶ, ಯುಎಇ ಮತ್ತು ಶ್ರೀಲಂಕಾದ ಆಯ್ಕೆಯನ್ನೂ ತೆರೆದಿರಿಸಿದರು. ಅಂತಿಮವಾಗಿ ಈ ಪಂದ್ಯದ ಆತಿಥ್ಯ ಯುನೈಟೆಡ್ ಅರಬ್ ಎಲಿರೇಟ್ಸ್ ಪಾಲಾಯಿತು.
ಆದರೆ 7ನೇ ಆವೃತ್ತಿಯ ಈ ಪಂದ್ಯಾವಳಿ ಪೂರ್ತಿಯಾಗಿ ಯುಎಇಯಲ್ಲಿ ಸಾಗಲಿಲ್ಲ. ಚುನಾವಣೆ ಮುಗಿದ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಮೇ 2ರ ನಂತರದ ಪಂದ್ಯಗಳನ್ನು ಭಾರತದಲ್ಲೇ ಆಯೋಜಿಸಲಾಯಿತು.
ಕೂಟದ ಉದ್ಘಾಟನಾ ಪಂದ್ಯ ನಡೆದದ್ದು ಅಬುಧಾಬಿಯ “ಶೇಖ್ ಜಾಯೇದ್ ಸ್ಟೇಡಿಯಂ’ನಲ್ಲಿ. ಇಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ಕಣಕ್ಕಿಳಿದವು. ಕೆಕೆಆರ್ 41 ರನ್ನುಗಳಿಂದ ಈ ಮುಖಾಮುಖಿಯನ್ನು ಗೆದ್ದು ಶುಭಾರಂಭ ಮಾಡಿತು. ಮುಂದೆ ಇದು ಫೈನಲ್ ಗೆಲುವಿಗೂ ನಾಂದಿಯಾಯಿತು. ಬೆಂಗಳೂರಿನಲ್ಲಿ ಏರ್ಪಟ್ಟ ಪ್ರಶಸ್ತಿ ಕಾಳಗದಲ್ಲಿ ಮೊದಲ ಹಾಗೂ ಏಕೈಕ ಸಲ ಫೈನಲ್ ಪ್ರವೇಶಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 3 ವಿಕೆಟ್‌ಗಳಿಂದ ಪರಾಭವಗೊಳಿಸಿದ ಕೋಲ್ಕತಾ 2ನೇ ಸಲ ಚಾಂಪಿಯನ್ ಪಟ್ಟ ಅಲಂಕರಿಸಿತು.
ಮಾಲಿಂಗ ಬಿಗಿ ದಾಳಿ
ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ಮೊದಲು ಬ್ಯಾಟಿಂಗ್ ನಡೆಸಿ 5 ವಿಕೆಟಿಗೆ 163 ರನ್ ಪೇರಿಸಿತು. ಇದರಲ್ಲಿ 136 ರನ್ ಜಾಕ್ ಕ್ಯಾಲಿಸ್ ಮತ್ತು ಮನೀಷ್ ಪಾಂಡೆ ಬ್ಯಾಟಿನಿಂದ ಹರಿದು ಬಂತು. ಇವರಿಂದ ದ್ವಿತೀಯ ವಿಕೆಟಿಗೆ 131 ರನ್ ಜತೆಯಾಟ ದಾಖಲಾಯಿತು. ಕ್ಯಾಲಿಸ್ ಸರ್ವಾಧಿಕ 72 ರನ್ ಹೊಡೆದರೆ (46 ಎಸೆತ, 5 ಬೌಂಡರಿ, 3 ಸಿಕ್ಸರ್), ಪಾಂಡೆ 64 ರನ್ ಮಾಡಿದರು (53 ಎಸೆತ, 6 ಬೌಂಡರಿ, 2 ಸಿಕ್ಸರ್). ನಾಯಕ ಗೌತಮ್ ಗಂಭೀರ್ ಖಾತೆಯನ್ನೇ ತೆರೆಯಲಿಲ್ಲ. ಲಸಿತ ಮಾಲಿಂಗ 23ಕ್ಕೆ 4 ವಿಕೆಟ್ ಕೆಡವಿ ಮುಂಬೈ ಬೌಲಿಂಗ್ ಹೀರೋ ಎನಿಸಿದರು.
ಜವಾಬು ನೀಡಲಾರಂಭಿಸಿದ ಮುಂಬೈಗೆ ಕೋಲ್ಕತಾದ ಬಿಗಿ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಅದು 7 ವಿಕೆಟಿಗೆ ಕೇವಲ 122 ರನ್ ಮಾಡಿ ಶರಣಾಯಿತು. ಅಂಬಾಟಿ ರಾಯುಡು ಸರ್ವಾಧಿಕ 48 ರನ್ ಹೊಡೆದರು. ಸುನೀಲ್ ನಾರಾಯಣ್ 20 ರನ್ನಿತ್ತು 4 ವಿಕೆಟ್ ಕೆಡವಿದರು.
ಸ್ಕೋರ್‌ಪಟ್ಟಿ
ಐಪಿಎಲ್ ಫಸ್ಟ್ ಮ್ಯಾಚ್-2014
ಕೋಲ್ಕತಾ ನೈಟ್‌ರೈಡರ್
ಗೌತಮ್ ಗಂಭೀರ್ ಬಿ ಮಾಲಿಂಗ 0
ಜಾಕ್ ಕ್ಯಾಲಿಸ್ ಸಿ ಆ್ಯಂಡರ್ಸನ್ ಬಿ ಮಾಲಿಂಗ 72
ಮನೀಷ್ ಪಾಂಡೆ ಬಿ ಮಾಲಿಂಗ 64
ರಾಬಿನ್ ಉತ್ತಪ್ಪ ಸಿ ರೋಹಿತ್ ಬಿ ಜಹೀರ್ 1
ಯೂಸುಫ್ ಪಠಾಣ್ ಔಟಾಗದೆ 4
ಶಕಿಬ್ ಅಲ್ ಹಸನ್ ಸಿ ರೋಹಿತ್ ಬಿ ಮಾಲಿಂಗ 1
ಸೂರ್ಯಕುಮಾರ್ ಯಾದವ್ ಔಟಾಗದೆ 13
ಇತರ 8
ಒಟ್ಟು (5 ವಿಕೆಟಿಗೆ) 163
ವಿಕೆಟ್ ಪತನ: 1-4, 2-135, 3-144, 4-145, 5-149.
ಬೌಲಿಂಗ್:
ಜಹೀರ್ ಖಾನ್ 4-0-23-1
ಲಸಿತ ಮಾಲಿಂಗ 4-0-23-4
ಕೋರಿ ಆ್ಯಂಡರ್ಸನ್ 3-0-33-0
ಪ್ರಗ್ಯಾನ್ ಓಜಾ 4-0-36-0
ಹರ್ಭಜನ್ ಸಿಂಗ್ 3-0-25-0
ಕೈರನ್ ಪೊಲಾರ್ಡ್ 2-0-19-0
ಮುಂಬೈ ಇಂಡಿಯನ್ಸ್
ಮೈಕಲ್ ಹಸ್ಸಿ ಬಿ ನಾರಾಯಣ್ 3
ಆದಿತ್ಯ ತಾರೆ ಸಿ ಮತ್ತು ಬಿ ಶಕಿಬ್ 24
ಅಂಬಾಟಿ ರಾಯುಡು ಸ್ಟಂಪ್ಡ್ ಉತ್ತಪ್ಪ ಬಿ ನಾರಾಯಣ್ 48
ರೋಹಿತ್ ಶರ್ಮ ಸಿ ಕ್ಯಾಲಿಸ್ ಬಿ ಮಾರ್ಕೆಲ್ 47
ಕೈರನ್ ಪೊಲಾರ್ಡ್ ಔಟಾಗದೆ 6
ಕೋರಿ ಆ್ಯಂಡರ್ಸನ್ ಬಿ ನಾರಾಯಣ್ 2
ಹರ್ಭಜನ್ ಸಿಂಗ್ ಬಿ ನಾರಾಯಣ್ 0
ಸಿ.ಎಂ. ಗೌತಮ್ ಸ್ಟಂಪ್ಡ್ ಉತ್ತಪ್ಪ ಬಿ ಚಾವ್ಲಾ 7
ಇತರ 5
ಒಟ್ಟು (7 ವಿಕೆಟಿಗೆ) 122
ವಿಕೆಟ್ ಪತನ: 1-24, 2-40, 3-101, 4-106, 5-113, 6-113, 7-122.
ಬೌಲಿಂಗ್:
ವಿನಯ್ ಕುಮಾರ್ 2-0-15-0
ಮಾರ್ನೆ ಮಾರ್ಕೆಲ್ 4-0-16-1
ಸುನೀಲ್ ನಾರಾಯಣ್ 4-0-20-4
ಶಕಿಬ್ ಅಲ್ ಹಸನ್ 4-0-29-1
ಜಾಕ್ ಕ್ಯಾಲಿಸ್ 3-0-23-0
ಪೀಯೂಷ್ ಚಾವ್ಲಾ 3-0-15-1
ಪಂದ್ಯಶ್ರೇಷ್ಠ: ಜಾಕ್ ಕ್ಯಾಲಿಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.