ರಾಜಸ್ಥಾನ್ ರಾಯಲ್ಸ್ ಎದುರಾಳಿ; ಕೆಕೆಆರ್‌ಗೆ ಡು ಆರ್ ಡೈ ಮ್ಯಾಚ್
Team Udayavani, May 2, 2022, 8:10 AM IST
ಮುಂಬಯಿ: ಕೋಲ್ಕತಾ ನೈಟ್‌ರೈಡರ್ ತೀವ್ರ ಸಂಕಟದಲ್ಲಿದೆ. ಸತತ 5 ಸೋಲುಗಳಿಂದ ದಿಕ್ಕೆಟ್ಟಿದೆ. ಇನ್ನೊಂದು ಸೋಲು ಎದುರಾದರೂ ನಿರ್ಗಮನ ಬಾಗಿಲಿಗೆ ಬಂದು ನಿಲ್ಲುವ ಸ್ಥಿತಿಗೆ ತಲುಪಲಿದೆ.
ಈ ಸಂಕಟದಿಂದ ಪಾರಾಗಬೇಕಾದರೆ ಶ್ರೇಯಸ್ ಅಯ್ಯರ್ ಬಳಗ ಸೋಮವಾರದ ಮುಖಾಮುಖಿಯಲ್ಲಿ ರಾಜಸ್ಥಾನ್ ತಂಡವನ್ನು ಮಣಿಸಲೇಬೇಕಿದೆ.
ರಾಜಸ್ಥಾನ್ ಡ್ಯಾಶಿಂಗ್ ಬ್ಯಾಟರ್‌ಗಳನ್ನೇ ಹೊಂದಿರುವ ತಂಡ. ಅದರಲ್ಲೂ ಓಪನರ್ ಜಾಸ್ ಬಟ್ಲರ್ ಅವರಂತೂ ಬೊಂಬಾಟ್ ಫಾರ್ಮ್ನಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ 103 ರನ್ ಬಾರಿಸಿದ ಭೀತಿಯಿಂದ ಇನ್ನೂ ಕೆಕೆಆರ್ ಪಾರಾದಂತಿಲ್ಲ. ಅಷ್ಟೇ ಅಲ್ಲ, ಮುಂಬೈ ಎದುರಿನ ಶನಿವಾರದ ಪಂದ್ಯದಲ್ಲಿ ಬಟ್ಲರ್ ಅವರದು ಏಕಾಂಗಿ ಹೋರಾಟವಾಗಿತ್ತು (67). ಆದರೆ ಮುಂಬೈಗೆ ಮೊದಲ ಗೆಲುವನ್ನು ಬಿಟ್ಟುಕೊಟ್ಟ ಸಂಕಟ ರಾಜಸ್ಥಾನ್ ತಂಡದ್ದಾಗಿದೆ. ದ್ವಿತೀಯ ಸ್ಥಾನದಲ್ಲಿದ್ದರೂ ಸ್ಯಾಮ್ಸನ್ ಪಡೆಗೆ ಇದೊಂದು ಹಿನ್ನಡೆಯೇ ಆಗಿದೆ. ಕೆಕೆಆರ್ ಇದರ ಲಾಭವೆತ್ತಬೇಕಿದೆ.
ಫಾರ್ಮ್ ನಲ್ಲಿಲ್ಲದ ಕೋಲ್ಕತಾ
ಸಮಸ್ಯೆಯೆಂದರೆ, ಐಪಿಎಲ್ ಅರ್ಧ ಮುಗಿದರೂ ಕೆಕೆಆರ್‌ನ ಸ್ಟಾರ್ ಆಟಗಾರರೆಲ್ಲ ಇನ್ನೂ ಫಾರ್ಮ್ ಕಂಡುಕೊಳ್ಳದಿರುವುದು. ಬ್ಯಾಟಿಂಗ್‌ನಲ್ಲಿ ನಾಯಕ ಶ್ರೇಯಸ್ ಅಯ್ಯರ್ (290 ರನ್), ನಿತೀಶ್ ರಾಣಾ; ಬೌಲಿಂಗ್‌ನಲ್ಲಿ ಉಮೇಶ್ ಯಾದವ್ ಹೊರತುಪಡಿಸಿ ಉಳಿದವರೆಲ್ಲರದೂ ಶೋಚನೀಯ ವೈಫಲ್ಯ. ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಫಿಂಚ್, ಕಮಿನ್ಸ್, ರಸೆಲ್, ಬಿಲ್ಲಿಂಗ್ಸ್… ಎಲ್ಲರೂ ಟಿ20 ಸ್ಪೆಷಲಿಸ್ಟ್‌ಗಳೇ. ಆದರೆ ಯಾರೂ ತಂಡದ ನೆರವಿಗೆ ನಿಲ್ಲುತ್ತಿಲ್ಲ.
ರಾಜಸ್ಥಾನ್ ಸಾಲು ಸಾಲು ಸ್ಟಾರ್ ಕ್ರಿಕೆಟಿಗರನ್ನು ಹೊಂದಿರುವ ತಂಡ. ಬ್ಯಾಟಿಂಗ್, ಬೌಲಿಂಗ್ ಸಾಟಿಯಿಲ್ಲದ್ದು. ಆದರೆ ಮುಂಬೈ ವಿರುದ್ಧ ಅನುಭವಿಸಿದ ಸೋಲಿನ ಆಘಾತದಿಂದ ತುರ್ತಾಗಿ ಚೇತರಿಸಿಕೊಳ್ಳಬೇಕಿದೆ.
ಬಿಗ್ ಗೇಮ್ ಗೆದ್ದ ರಾಜಸ್ಥಾನ್
ತಂಡಗಳ ನಡುವೆ ಎ. 18ರಂದು “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ದೊಡ್ಡ ಮೊತ್ತದ ಮೇಲಾಟ ನಡೆದಿತ್ತು. ಇದು ಈ ಋತುವಿನ “ಬಿಗ್ ಗೇಮ್’ಗಳಲ್ಲಿ ಒಂದಾಗಿತ್ತು. ಈ ಹೋರಾಟದಲ್ಲಿ ರಾಜಸ್ಥಾನ್ 7 ರನ್ನುಗಳ ರೋಚಕ ಗೆಲುವು ಸಾಧಿಸಿತ್ತು.
ಜಾಸ್ ಬಟ್ಲರ್ ಅವರ ಅಮೋಘ 103 ರನ್ ಸಾಹಸದಿಂದ ರಾಜಸ್ಥಾನ್ 5 ವಿಕೆಟಿಗೆ 217 ರನ್ ರಾಶಿ ಹಾಕಿತು. ಕೆಕೆಆರ್ ಕೂಡ ದಿಟ್ಟ ರೀತಿಯಲ್ಲೇ ಜವಾಬು ನೀಡಿತು. ಆರನ್ ಫಿಂಚ್ (58), ನಾಯಕ ಶ್ರೇಯಸ್ ಅಯ್ಯರ್ (85) ಮುನ್ನುಗ್ಗಿ ಬಾರಿಸಲಾರಂಭಿಸಿದರು. ಆದರೆ ಕೆಳ ಹಂತದ ಆಟಗಾರರು ಕೈಕೊಟ್ಟರು. ಅಂತಿಮವಾಗಿ ಕೆಕೆಆರ್ 19.4 ಓವರ್‌ಗಳಲ್ಲಿ 210ಕ್ಕೆ ಆಲೌಟ್ ಆಯಿತು.
ಯಜುವೇಂದ್ರ ಚಹಲ್ ಎಸೆದ 17ನೇ ಓವರ್ ಈ ಪಂದ್ಯಕ್ಕೆ ದೊಡ್ಡ ತಿರುವು ಕೊಟ್ಟಿತು. ಇದರಲ್ಲಿ ಅವರು ಹ್ಯಾಟ್ರಿಕ್ ಸೇರಿದಂತೆ 4 ವಿಕೆಟ್ ಉಡಾಯಿಸಿದರು. ಈ ಆಘಾತದಿಂದ ಕೋಲ್ಕತಾ ಇನ್ನೂ ಚೇತರಿಸಿಕೊಂಡಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.