ಉತ್ತಮ ಆಡಳಿತಕ್ಕೆ ಇದು ಸಕಾಲ…ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಸುಳಿವು ಕೊಟ್ಟ ಪ್ರಶಾಂತ್ ಕಿಶೋರ್!
ಪ್ರಶಾಂತ್ ಕಿಶೋರ್ ಪಾಟ್ನಾದಲ್ಲಿ ಠಿಕಾಣಿ ಹೂಡಿದ್ದು, ಜನ್ ಯಾತ್ರಾ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
Team Udayavani, May 2, 2022, 1:34 PM IST
2024 ಸಾರ್ವತ್ರಿಕ ಚುನಾವಣೆ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಸವಾಲಿನದ್ದಾಗಿದೆ. ಏತನ್ಮಧ್ಯೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ತಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆ ಇದ್ದಿರುವುದಾಗಿ ಆಪ್ತ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಹೈದರಾಬಾದ್: ರಾಹುಲ್ ಗಾಂಧಿ ಕ್ಯಾಂಪಸ್ ಭೇಟಿಗೆ ಅನುಮತಿ ನಿರಾಕರಿಸಿದ ಉಸ್ಮಾನಿಯಾ ವಿವಿ
ಕಾಂಗ್ರೆಸ್ ಪಕ್ಷವನ್ನು ಸೇರುವ ಆಹ್ವಾನ ತಿರಸ್ಕರಿಸಿದ್ದ ಪ್ರಶಾಂತ್ ಕಿಶೋರ್ ಸೋಮವಾರ ಟ್ವೀಟರ್ ನಲ್ಲಿ, ಪ್ರಜಾಪ್ರಭುತ್ವದ ಪ್ರಭಾವಶಾಲಿಯಾದ ಜನರ ಬಳಿಗೆ ತೆರಳುವುದಾಗಿ ಉಲ್ಲೇಖಿಸುವ ಮೂಲಕ ಹೊಸ ರಾಜಕೀಯ ಪಕ್ಷದ ಸ್ಥಾಪನೆಯ ಕುರಿತ ಸುಳಿವನ್ನು ನೀಡಿರುವುದಾಗಿ ವರದಿ ವಿವರಿಸಿದೆ.
“ರಾಜಕೀಯದ ಸಾಹಸ ಯಾತ್ರೆ ಬಿಹಾರದಿಂದ ಆರಂಭಗೊಳ್ಳಲಿದೆ ಎಂದು ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ. ಈಗಾಗಲೇ ಪ್ರಶಾಂತ್ ಕಿಶೋರ್ ಪಾಟ್ನಾದಲ್ಲಿ ಠಿಕಾಣಿ ಹೂಡಿದ್ದು, ಜನ್ ಯಾತ್ರಾ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳುವ ಮತ್ತು ಜನಸ್ನೇಹಿ ನೀತಿ ರೂಪಿಸಲು ನನ್ನ ಹತ್ತು ವರ್ಷಗಳ ರಾಜಕೀಯ ಪಯಣ ನೆರವು ನೀಡಿದೆ. ಇದೀಗ ನಾನು ನನ್ನ ಪುಟವನ್ನು ತಿರುವಿ ಹಾಕಿದ್ದು, ಪ್ರಜಾಪ್ರಭುತ್ವದ ನಿಜವಾದ ಮಾಸ್ಟರ್ಸ್ಸ್ ಗಳಾದ ಜನರ ಬಳಿ ಹೋಗುವುದು ಉತ್ತಮ ಎಂದು ಭಾವಿಸಿದ್ದೇನೆ. ಜನ ಸುರಾಜ್ ( ಉತ್ತಮ ಆಡಳಿತಕ್ಕಾಗಿ) ಸ್ಥಾಪಿಸಲು ಇದು ಸಕಾಲ ಎಂಬುದಾಗಿ ಪ್ರಶಾಂತ್ ಕಿಶೋರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಜತೆ ಕೈಜೋಡಿಸಲು ಕಾಂಗ್ರೆಸ್ ಪಕ್ಷದ ಸಮಿತಿಯಲ್ಲಿ ಸೇರ್ಪಡೆಗೊಳ್ಳಬೇಕೆಂಬ ಆಹ್ವಾನವನ್ನು ಪ್ರಶಾಂತ್ ಕಿಶೋರ್ ತಿರಸ್ಕರಿಸಿದ ಒಂದು ವಾರದ ನಂತರ ಈ ದಿಢೀರ್ ಬೆಳವಣಿಗೆ ಟ್ವೀಟ್ ಸಂದೇಶ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿರುವುದಾಗಿ ವರದಿ ವಿಶ್ಲೇಷಿಸಿದೆ.
ಕಾಂಗ್ರೆಸ್ ಆಫರ್ ಅನ್ನು ತಿರಸ್ಕರಿಸಿದ ನಂತರ ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಪ್ರಶಾಂತ್ ಕಿಶೋರ್ ಜತೆ ಕಾರ್ಯನಿರ್ವಹಿಸಲು ಒಲವು ವ್ಯಕ್ತಪಡಿಸಿದ್ದವು. ಆದರೆ ತಮ್ಮದೇ ಸ್ವಂತ ರಾಜಕೀಯ ಪಕ್ಷ ಸ್ಥಾಪನೆಯ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲವಾಗಿತ್ತು. ಇದೀಗ ಟ್ವೀಟ್ ಸಂದೇಶದಿಂದ ತಾವು ಏಕಾಂಗಿಯಾಗಿ 2024ರ ಚುನಾವಣೆಯನ್ನು ಎದುರಿಸಲು ನಿರ್ಧರಿಸಿರುವ ಮುನ್ಸೂಚನೆ ನೀಡಿದಂತಾಗಿದೆ.
2014ರ ಸಾರ್ವತ್ರಿಕ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಪ್ರಧಾನಿ ನರೇಂದ್ರ ಮೋದಿ ಅವರ ಪಾಳಯದಲ್ಲಿ ಸೇರ್ಪಡೆಗೊಂಡು ಚುನಾವಣಾ ತಂತ್ರಗಾರ ಎಂದು ಗುರುತಿಸಿಕೊಂಡು, ಯಶಸ್ವಿಯಾಗಿದ್ದರು. ನಂತರ 2015ರಲ್ಲಿ ಬಿಹಾರ ಚುನಾವಣೆಯಲ್ಲಿ ಲಾಲುಪ್ರಸಾದ್ ಮತ್ತು ನಿತೀಶ್ ಮೈತ್ರಿಕೂಟ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಪ್ರಶಾಂತ್ ಕಿಶೋರ್ ಮಹತ್ತರ ಪಾತ್ರ ವಹಿಸಿದ್ದರು.
2017ರಲ್ಲಿ ಪಂಜಾಬ್ ನಲ್ಲಿಯೂ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ತಂತ್ರಗಾರನಾಗಿ ಕಾರ್ಯನಿರ್ವಹಿಸಿ ಕ್ಯಾ.ಅಮರೀಂದರ್ ಸಿಂಗ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. 2019ರಲ್ಲಿ ಆಂಧ್ರಪ್ರದೇಶದಲ್ಲಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿಗೂ ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸಿ ಅವರ ಪಕ್ಷ ಜಯಭೇರಿ ಬಾರಿಸಲು ಕಾರಣಕರ್ತರಾಗಿದ್ದರು.
2020ರ ದೆಹಲಿ ಮರು ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್, 2021ರಲ್ಲಿ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ಹಾಗೂ ಕಳೆದ ವರ್ಷ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಜತೆ ಕಿಶೋರ್ ಚುನಾವಣಾ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿ ಗೆಲುವು ಕಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.