ಮಾದರಿ ಶಾಲೆಗಳ ಪಟ್ಟಿ ಬಹುತೇಕ ಪೂರ್ಣ; ಸರಕಾರದ ಗ್ರಾ.ಪಂ.ಗೊಂದು ಮಾದರಿ ಸರಕಾರಿ ಶಾಲೆ ಯೋಜನೆ
Team Udayavani, May 3, 2022, 7:35 AM IST
ಉಡುಪಿ: ರಾಜ್ಯ ಸರಕಾರ ಪ್ರತೀ ಗ್ರಾ.ಪಂ.ನಲ್ಲಿ ಒಂದು ಸರಕಾರಿ ಶಾಲೆಯನ್ನು ಮಾದರಿಯನ್ನಾಗಿ ರೂಪಿಸಲು ಯೋಜನೆ ರೂಪಿಸಿರುವ ಬೆನ್ನಲ್ಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿಯಾಗಿ ರೂಪಿಸಬಹುದಾದ ಸರಕಾರಿ ಶಾಲೆಗಳನ್ನು ಗುರುತಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಉಡುಪಿ ಜಿಲ್ಲೆಯ ಸುಮಾರು 95 ಗ್ರಾ.ಪಂ.ಗಳಲ್ಲಿ ಮಾದರಿಯಾಗಿ ರೂಪಿಸ ಬಹುದಾದ ಶಾಲೆಗಳನ್ನು ಗುರುತಿಸಿ, ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಿಂದ ಸಿದ್ಧಪಡಿಸಿ, ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಸುಮಾರು 230 ಗ್ರಾ.ಪಂ.ಗಳಲ್ಲಿ ಇಂತಹ ಶಾಲೆಗಳನ್ನು ಗುರುತಿಸಲಾಗಿದೆ.
ಗ್ರಾ.ಪಂ.ಗೊಂದು ಮಾದರಿ ಶಾಲೆಯ ಪರಿಕಲ್ಪನೆಯನ್ನು ಇಲಾಖೆಯ ಅಧಿಕಾರಿಗಳಿಗೆ ಸರಕಾರ ಮತ್ತು ಶಿಕ್ಷಣ ಇಲಾಖೆ ಯಿಂದ ಸ್ಪಷ್ಟವಾಗಿ ನೀಡಲಾಗಿದೆ. ಶಾಲೆಗಳನ್ನು ಗುರುತಿಸುವ ಸಂದರ್ಭದಲ್ಲಿ ಸ್ಥಳೀಯರು ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂಬ ನಿರ್ದೇಶನ ನೀಡಲಾಗಿದೆ.
ಮಾದರಿ ಶಾಲೆಯ ಮಾನದಂಡವೇನು?
ಗ್ರಾ.ಪಂ. ವ್ಯಾಪ್ತಿಯಲ್ಲಿ ಐದಾರ ಕ್ಕಿಂತ ಕಡಿಮೆ ಅಥವಾ ಹೆಚ್ಚು ಸರಕಾರಿ ಶಾಲೆಗಳಿದ್ದು, ಎಲ್ಲ ಕಡೆ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದ್ದರೆ ಒಂದು ಶಾಲೆಯನ್ನು ಮಾದರಿಯಾಗಿ ಗುರುತಿಸಲಾಗುತ್ತದೆ. ಉಳಿದ ಶಾಲೆಗಳ ಮಕ್ಕಳನ್ನು ಈ ಶಾಲೆಗೆ ವರ್ಗಾಯಿಸಲಾಗುತ್ತದೆ. ಶಿಕ್ಷಕರನ್ನು ಕೂಡ ಹುದ್ದೆ ಸಹಿತ ವರ್ಗಾಯಿಸುವ ಸಾಧ್ಯತೆಯೂ ಇದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆ ಇದ್ದರೆ ಅಲ್ಲಿನ ವ್ಯವಸ್ಥೆ ಮತ್ತು ಶಿಕ್ಷಕರ ಸಂಖ್ಯೆಯನ್ನು ಪರಿಗಣಿಸಿ ಮಾದರಿ ಆಗಬಹುದಾದ ಶಾಲೆಯನ್ನು ಗುರುತಿಸಲಾಗುತ್ತದೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಗಳನ್ನು ಮುಚ್ಚುವುದು ಇದರ ಇನ್ನೊಂದು ಮುಖ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಎಷ್ಟು ಪರಿಣಾಮಕಾರಿ ಯಾಗಿದೆ ಎಂಬುದನ್ನು ಗಮನಿಸಲಾಗುತ್ತದೆ. ಹಳೇ ವಿದ್ಯಾರ್ಥಿ ಸಂಘದ ಸಕ್ರಿಯತೆ ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಅವರು ಎಷ್ಟು ತೊಡ ಗಿಸಿಕೊಂಡಿದ್ದಾರೆ ಎಂಬುದನ್ನೂ ಪರಿಗಣಿಸಲಾಗುತ್ತಿದೆ ಎಂದು ಅಧಿ ಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾರಿಗೆ ವ್ಯವಸ್ಥೆ
ಮಾದರಿ ಶಾಲೆಯನ್ನು 2022- 23ನೇ ಸಾಲಿನಿಂದಲೇ ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆ ಮಾಡಿದೆ. ಸ್ಥಳೀಯವಾಗಿ ಲಭ್ಯವಾಗುವ ಅಥವಾನಗರ ಪ್ರದೇಶದಲ್ಲಿ ಇರುವ ಸಂಸ್ಥೆಗಳ ಸಿಎಸ್‌ಆರ್ ಅನುದಾನ ದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಕೆಲವು ಗ್ರಾ.ಪಂ. ಗಳಲ್ಲಿ ಈಗಾಗಲೇ ಗುರುತಿಸಿರುವ
ಮಾದರಿ ಶಾಲೆಗೆ ಸಿಎಸ್‌ಆರ್ ಅನು ದಾನದಡಿ ಬಂದಿರುವ ವಾಹನಗಳನ್ನು ಹಸ್ತಾಂತರಿಸಲಾ ಗಿದೆ. ಈ ವಾಹನಗಳ ನಿರ್ವಹಣೆಯನ್ನು ಶಾಲೆಯಿಂದಲೇ ಮಾಡಬೇಕಾಗುತ್ತದೆ.
ಹಸ್ತಕ್ಷೇಪ ಆರೋಪ
ಮಾದರಿ ಶಾಲೆ ಗುರುತಿಸುವ ವಿಚಾರದಲ್ಲಿ ಕೆಲವು ಕಡೆ ಜನ ಪ್ರತಿನಿಧಿಗಳು ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಮಾದರಿ ಶಾಲೆ ಆದರೆ ಸರಕಾರ ದಿಂದ ಹೆಚ್ಚು ಸೌಲಭ್ಯ ಸಿಗುವ ಸಾಧ್ಯತೆ ಇರುವುದರಿಂದ ತಮ್ಮಲ್ಲಿ ಇರುವ ಶಾಲೆ ಯನ್ನೇ ಮಾದರಿಯಾಗಿ ಉಳಿಸಿ ಕೊಳ್ಳಲು ಬೇಕಾದ ಪ್ರಯತ್ನವನ್ನು ಸ್ಥಳೀಯ ಜನಪ್ರತಿನಿಧಿಗಳು ಶಾಸಕ, ಸಚಿವರ ಮೂಲಕ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಗ್ರಾ.ಪಂ.ಗೊಂದು ಮಾದರಿ ಶಾಲೆ ಗುರುತಿಸುವ ಪ್ರಾರಂಭಿಕ ಪ್ರಕ್ರಿಯೆ ಆರಂಭವಾಗಿದೆ. ಸ್ಥಳೀಯರಿಗೆ ಮಾಹಿತಿ ನೀಡುವ ಕಾರ್ಯವೂ ಆಗಬೇಕಿದೆ. ಅಂತಿಮ ಪಟ್ಟಿ ಇನ್ನೂ ಸಿದ್ಧವಾಗಿಲ್ಲ.
-ಸುಧಾಕರ್, ಡಿಡಿಪಿಐ, ದ.ಕ.
ಜಿಲ್ಲೆಯಲ್ಲಿ ಸುಮಾರು 95 ಗ್ರಾ.ಪಂ.ಗಳಲ್ಲಿ ಮಾದರಿ ಆಗಬಹುದಾದ ಶಾಲೆಗಳನ್ನು ಗುರುತಿಸಿದ್ದೇವೆ. 2022-23ನೇ ಸಾಲಿನಿಂದಲೇ ಮಾದರಿ ಶಾಲೆಗಳು ಕಾರ್ಯಾರಂಭ ಮಾಡಲಿವೆ. ಈ ಸಂಬಂಧ ಇಲಾಖೆಯಿಂದ ಬರುವ ಸೂಚನೆ, ಆದೇಶ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ.
-ಗೋವಿಂದ ಮಡಿವಾಳ, ಡಿಡಿಪಿಐ, ಉಡುಪಿ
- ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.