ರಾಜಧಾನಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಕರಂದಾಡಿ ಶಾಲೆಯಲ್ಲಿ ಸೇವಾ ಕಾರ್ಯ

ಬಣ್ಣ ಬಣ್ಣದ ವರ್ಣ ಚಿತ್ತಾರಗಳೊಂದಿಗೆ ಶೃಂಗಾರಗೊಂಡಿದೆ ಶಾಲೆ

Team Udayavani, May 3, 2022, 10:27 AM IST

3paint2

ಕಾಪು: ಗ್ರಾಮೀಣ ಭಾಗದಲ್ಲಿ ಆಧುನಿಕ ಸೌಕರ್ಯಗಳಿಲ್ಲದೇ ಕೊರಗುತ್ತಿರುವ ಕನ್ನಡ ಮಾಧಮ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮತ್ತು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಹಳ್ಳಿಗೆ ಬಂದು ಸೇವಾ ಕಾರ್ಯ ನಡೆಸುತ್ತಿರುವ ಪದವಿ ವಿದ್ಯಾರ್ಥಿಗಳ ಸೇವಾ ಕಾರ್ಯವು ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಮೊದಲಾದ ಕಡೆಗಳಿಂದ ಬಂದು ಜತೆ ಸೇರಿ ರಾಜಧಾನಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಅದೃಷ್ಯ ತಂಡದ ಸದಸ್ಯರು ಶತಮಾನ ಪೂರೈಸಿರುವ ಮಜೂರು ಗ್ರಾಮದ ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ, ಬಣ್ಣ ಬಳಿದು, ಶಾಲಾ ಗೋಡೆ, ತರಗತಿ ಕೋಣೆ ಮತ್ತು ಆವರಣ ಗೋಡೆಯಲ್ಲಿ ಚಿತ್ತಾಕರ್ಷಕವಾದ ವರ್ಣ ಚಿತ್ರ ಮತ್ತು ರೇಖಾ ಚಿತ್ರಗಳ ಸಹಿತವಾಗಿ ಕಲಿಕೆಗೆ ಪೂರಕವಾಗುವ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಏನೇನು ಚಿತ್ರಗಳಿವೆ

ಪೋಟ್ರೇಟ್ ಚಿತ್ರಗಳ ಸಹಿತವಾಗಿ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳ ಚಿತ್ರಗಳನ್ನು ಬಿಡಿಸಿದ್ದು ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ನುಡಿಮುತ್ತುಗಳು, ಭರತನಾಟ್ಯ, ಕಥಕ್, ಯಕ್ಷಗಾನ ಸಹಿತವಾದ ವಿವಿಧ ನೃತ್ಯ ಪ್ರಾಕಾರಗಳು, ನಲಿ ಕಲಿ, ಕಾಗುಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಪೂರಕವಾಗುವ ಚಿತ್ರಗಳು, ದೇಶ, ರಾಜ್ಯ ಜಿಲ್ಲೆಯ ಬಗ್ಗೆ ಮಾಹಿತಿ ನೀಡುವ ನಕ್ಷೆಗಳು, ವರ್ಲಿ ಆರ್ಟ್, ಮಂಡಲ ಆರ್ಟ್ ಇತ್ಯಾದಿಗಳನ್ನು ಬಿಡಿಸಿದ್ದು, ಹೊರಾಂಗಣದ ಆವರಣ ಗೋಡೆಯಲ್ಲಿ ಭಿತ್ತಿ ಚಿತ್ರಗಳ ಸಹಿತವಾಗಿ ಪರಿಸರ ಉಳಿಸಲು ಜಾಗೃತಿ ಮೂಡಿಸುವ ಪ್ರಯತ್ನವನ್ನು ನಡೆಸಿದ್ದಾರೆ.

16ನೇ ಸೇವಾ ಕಾರ್ಯಕ್ಕೆ ಉಡುಪಿ ಆಯ್ಕೆ

ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ವಿಜಯಪುರ, ಹುಬ್ಬಳ್ಳಿ ಸಹಿತ ವಿವಿಧೆಡೆಯ ಸರಕಾರಿ ಶಾಲೆಗಳು, ಬೆಂಗಳೂರಿನ ಸಾರಕ್ಕಿ ವೀರಭದ್ರ ದೇವಸ್ಥಾನ, ದಾಸರಹಳ್ಳಿ ಹನುಮಂತ ದೇವಸ್ಥಾನ ಮತ್ತು ರಸ್ತೆ ಬದಿಯಲ್ಲಿ ಗೋಡೆ ಬರಹ, ಭಿತ್ತಿ ಚಿತ್ರ ಸಹಿತವಾಗಿ ವಿವಿಧ ಡ್ರಾಯಿಂಗ್‌ಗಳನ್ನು ಚಿತ್ರಿಸಿರುವ ಈ ತಂಡವು ತನ್ನ ಹದಿನಾರನೇ ಸೇವಾ ಕಾರ್ಯಕ್ಕೆ ಉಡುಪಿ ಜಿಲ್ಲೆಯ ಕರಂದಾಡಿ ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಶಾಲೆ ಮತ್ತು ದೇವಸ್ಥಾನಗಳು ಮಾತ್ರವಲ್ಲದೇ ಕೋವಿಡ್ ಮಹಾಮಾರಿಯ ಸಂದರ್ಭ ಜನರನ್ನು ಜಾಗೃತಗೊಳಿಸುವ ಚಿತ್ರಗಳನ್ನು ರಸ್ತೆ ಬದಿಯಲ್ಲಿ ಬಿಡಿಸುವ ಮೂಲಕ ಸ್ಥಳೀಯಾಡಳಿತ ಸಂಸ್ಥೆಗಳಿಂದ ಮೆಚ್ಚುಗೆ ಗಳಿಸಿದ್ದವು.

ಪದವಿ ವಿದ್ಯಾರ್ಥಿಗಳ ಮಾದರಿ ಸೇವೆ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಮೊದಲಾದ ಜಿಲ್ಲೆಗಳ ವಿದ್ಯಾರ್ಥಿಗಳನ್ನೊಳಗೊಂಡ 28 ಮಂದಿಯ ತಂಡದಲ್ಲಿ 17 ಮಂದಿ ಹುಡುಗಿಯರು, 11 ಮಂದಿ ಹುಡುಗರಿದ್ದಾರೆ. ಇಂಜಿನಿಯರಿಂಗ್, ಮೆಡಿಕಲ್, ಬಿ.ಕಾಂ., ಬಿಎಸ್ಸಿ, ಬಿಎ, ಬಿಸಿಎ, ಆರ್ಟಿಸ್ಟ್ ಸಹಿತವಾದ ವಿವಿಧ ಪದವಿ ಶಿಕ್ಷಣ ಪಡೆಯುತ್ತಿರುವ ಈ ತಂಡದಲ್ಲಿ ಬೆಂಗಳೂರು ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಎಲ್ಲರೂ ಸ್ವಯಂ ಸ್ಪೂರ್ತಿಯಿಂದ ನಿಸ್ವಾರ್ಥವಾಗಿ ಸರಸ್ವತೀ ಸೇವೆಯಲ್ಲಿ ನಿರತರಾಗಿದ್ದು, ವಾರಾಂತ್ಯದ ರಜಾ ದಿನಗಳಲ್ಲಿ ನಡೆಸುತ್ತಿರುವ ಸೇವಾ ಕಾರ್ಯಕ್ಕೆ ತಮ್ಮ ಹೆತ್ತವರು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ತಂಡದ ಪ್ರತಿನಿಧಿ ಬೆಂಗಳೂರು ಬಿಎಂಎಸ್ ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ.

ಖಾಸಗಿಯವರ ಪ್ರಾಯೋಜಕತ್ವ

ಕಾಲೇಜು ಶಿಕ್ಷಣದ ಜೊತೆಗೆ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗದಗ ಮೂಲದ ದೀಪಕ್ ಅವರ ಮಾರ್ಗದರ್ಶನದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಮುಂಚೂಣಿಯ ಕಾರ್ಯಕರ್ತ ಮಧುಸೂದನ್ ಅವರ ನೇತೃತ್ವದಲ್ಲಿ ಅದೃಷ್ಯ ತಂಡದ ಸದಸ್ಯರು ನಡೆಸುತ್ತಿರುವ ಸೇವಾ ಕಾರ್ಯಕ್ಕೆ ಎನ್ ಫೇಸ್ ಮತ್ತು ಇಂಡಿಯಾ ಸುಧಾರ್ ಕಂಪೆನಿಗಳು ಪ್ರಾಯೋಜಕತ್ವ ವಹಿಸಿವೆ. ಪೈಂಟಿಂಗ್ ಸಹಿತವಾಗಿ ವಿವಿಧ ರೀತಿಯ ಸಹಕಾರವನ್ನು ಒದಗಿಸುತ್ತಿದ್ದು, ಸೇವಾ ಕಾರ್ಯ ನಡೆಸುವ ಸಂದರ್ಭದಲ್ಲಿ ಸ್ಥಳೀಯರೂ ಅನ್ನ ಆಹಾರಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಇದನ್ನೂ ಓದಿ:ಇಲ್ಲಿ ಅವಕಾಶ ಎಲ್ಲರಿಗೂ ಸಿಗುವುದಿಲ್ಲ..; ಧೋನಿಗೆ ಮತ್ತೆ ಕುಟುಕಿದ ಯುವರಾಜ್

ಶಾಲಾಡಳಿತ ಮಂಡಳಿ, ಶಿಕ್ಷಕರು, ಪೋಷಕ ವರ್ಗದಿಂದಲೂ ಬೆಂಬಲ

ಅದೃಷ್ಯ ತಂಡದ ಸದಸ್ಯರು ಮೂರು ದಿನಗಳ ಕಾಲ ಕರಂದಾಡಿ ಶಾಲೆಯಲ್ಲೇ ಉಳಿದು ಹಗಲು ರಾತ್ರಿ ಕೆಲಸ ಮಾಡಿ, ಶಾಲೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಿದ್ದು ಇದಕ್ಕೆ ಮುಖ್ಯೋಪಾಧ್ಯಾಯ ಆರ್.ಎಸ್. ಕಲ್ಲೂರ, ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ, ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಶ್ಯಾನುಭೋಗ್, ಶಾಲಾಡಳಿತ ಮಂಡಳಿಯ ಪ್ರಮುಖರಾದ ಲೀಲಾಧರ ಶೆಟ್ಟಿ, ಶಶಿಶೇಖರ ಭಟ್, ನಾಗಭೂಷ ರಾವ್ ಮೊದಲಾದವರು ಬೆಂಗಾವಲಾಗಿ ನಿಂತು ತಂಡದ ಎಲ್ಲಾ ಬೇಡಿಕೆಗಳನ್ನೂ ಪೂರೈಸಿದ್ದಾರೆ.

ಮೊದಲಿನಿಂದಲೂ ಸಮಾಜ ಮತ್ತು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಸೆಯಿತ್ತು. ನಮ್ಮ ಆಸೆಗೆ ಮನೆಯವರಿಂದಲೂ ಪೂರ್ಣ ಸಹಕಾರ ದೊರಕುತ್ತಿದೆ. ನಾವು ಸೇವಾ ಕಾರ್ಯ ನಡೆಸಬೇಕಿರುವ ಶಾಲೆ, ಪರಿಸರಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ, ಸೇವೆ ನೀಡಲು ಸೂಕ್ತವೆನಿಸಿದರೆ ಮಾತ್ರ ಅಲ್ಲಿ ಹೋಗಿ ನಮ್ಮ ಸೇವೆಯನ್ನು ನೀಡುತ್ತೇವೆ. ದೇವಸ್ಥಾನಗಳಲ್ಲಿ ದೇವರಿಗೆ ಸಂಬಂಧಿಸಿದ, ಕಲೆ ಮತ್ತು ಸಂಸ್ಕೃತಿಗಳ ಅನಾವರಣಗೊಳಿಸುವ ಚಿತ್ರಗಳನ್ನು ಬಿಡಿಸಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಸೇವಾ ಚಟುವಟಿಕೆ ನಡೆಸುತ್ತಿದ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ಚಿತ್ರಗಳು ಮತ್ತು ರಸ್ತೆ ಬದಿಯಲ್ಲಿ ಜನ ಜಾಗೃತಿಗೆ ಪೂರಕವಾಗುವ ಹಾಗೂ ಕೋವಿಡ್ ಮತ್ತು ಪ್ಲಾಸ್ಟಿಕ್ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸಿದ್ದೇವೆ. ಮಧುಸೂಧನ್, ಅದೃಷ್ಯ ತಂಡದ ನಾಯಕ

ನನಗೂ, ಕರಂದಾಡಿ ಪ್ರದೇಶಕ್ಕೂ ಹತ್ತಿರದ ಸಂಬಂಧ ಇರುವುದರಿಂದ ಈ ಬಾರಿಯ ಸೇವಾ ಕಾರ್ಯವನ್ನು ಕರಂದಾಡಿ ಶಾಲೆಯಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಅದೃಷ್ಯ ತಂಡದ ಮೂಲಕವಾಗಿ ಪ್ರಾಯೋಜಕರ ಸಹಕಾರದೊಂದಿಗೆ ವಿದ್ಯಾವರ್ಣ – ಶಾಲೆ ಬಣ್ಣಗಾರಿಕೆ ಯೋಜನೆಯಡಿ ಶಾಲೆಯ ಒಳಗೆ ಮತ್ತು ಹೊರಗೆ ಗೋಡೆ ಚಿತ್ರ – ಬರಹಗಳನ್ನು ಬಿಡಿಸಿದ್ದು ಈ ಮಾದರಿಯ ಸೇವಾ ಕಾರ್ಯದ ಮೂಲಕವಾಗಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಮಕ್ಕಳನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ. ದೀಪಕ್ ಅವರು ಆರ್ಟಿಸ್ಟ್ ಗೈಡ್ ಆಗಿದ್ದು ಮತ್ತು ಮಧುಸೂಧನ್ ಅವರು ನಮ್ಮ ತಂಡದ ನಾಯಕರಾಗಿ ಮಾರ್ಗದರ್ಶನ ನೀಡುತ್ತಿದ್ದು, ನಾವೆಲ್ಲರೂ ಭಾರತಾಂಬೆ ಮತ್ತು ಕನ್ನಡಾಂಬೆಯ ಜೊತೆಗೆ ಸರಸ್ವತಿ ಸೇವೆಯನ್ನು ನಡೆಸುತ್ತಿದ್ದೇವೆ.  ಕೀರ್ತನಾ, ತೋನ್ಸೆ ಮಲ್ಪೆ ಬಿಎ ವಿದ್ಯಾರ್ಥಿನಿ, ಬಿಎಂಎಸ್ ಕಾಲೇಜು

ಶತಮಾನ ಪೂರೈಸಿದ ನಮ್ಮ ಶಾಲೆಗೆ ಐದು ವರ್ಷಕ್ಕೊಮ್ಮೆ ಬಣ್ಣ ಬಳಿಯುವ ಚಿಂತನೆಯಿತ್ತು. ಕೊರೊನಾ ಕಾರಣದಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಕಷ್ಟವಾಗಿತ್ತು. ಆದರೆ ಈ ಬಾರಿ ಅದೃಷ್ಯ ತಂಡದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಯಂ ಸ್ಪೂರ್ತಿಯೊಂದಿಗೆ ಮುಂದೆ ಬಂದು, ನಿಸ್ವಾರ್ಥ ಭಾವನೆಯಿಂದ ಶಾಲೆಗೆ ಸುಣ್ಣ, ಬಣ್ಣ ಬಳಿಯುವ ಕಾಯಕ ನಡೆಸಿದ್ದಾರೆ. ಪರವೂರಿನ ವಿದ್ಯಾರ್ಥಿಗಳು ಹಳ್ಳಿಯ ಶಾಲೆಯನ್ನು ಗುರುತಿಸಿ, ಶಾಲೆಯನ್ನು ಸುಂದರಗೊಳಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ಶ್ಲಾಘನೀಯವಾಗಿದೆ. ಪಠ್ಯ ಪುಸ್ತಕಗಳಲ್ಲಿ ಇರುವುದನ್ನು ಗೋಡೆಗಳಲ್ಲಿ ಚಿತ್ರಿಸುವ ಮೂಲಕ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬುವ ಪ್ರಯತ್ನ ನಡೆಸಿದ್ದಾರೆ. -ನಿರ್ಮಲ್ ಕುಮಾರ್ ಹೆಗ್ಡೆ ನಿವೃತ್ತ ಮುಖ್ಯೋಪಾಧ್ಯಾಯರು, ಕರಂದಾಡಿ ಶ್ರೀ ರಾಮ ಹಿ. ಪ್ರಾ. ಶಾಲೆ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.