ಬೆಚ್ಚಿ ಬೀಳಿಸಿದ ಸರಣಿ ಮನೆಗಳ್ಳತನ
Team Udayavani, May 3, 2022, 5:57 PM IST
ರಾಯಚೂರು: ನಗರದಲ್ಲಿ ನೇತಾಜಿ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮೂರು ಮನೆಗಳ ಸರಣಿ ಕಳ್ಳತನ ನಡೆದಿದ್ದು, ನಗರವಾಸಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಬೇಸಿಗೆ ವೇಳೆ ಮನೆಯವರೆಲ್ಲ ಮೇಲೆ ಮಲಗುವುದರಿಂದ ಕಳವು ಪ್ರಕರಣಗಳು ನಡೆಯುವುದು ಸಾಮಾನ್ಯ. ಆದರೆ, ಹಗಲಲ್ಲೇ ಈ ರೀತಿ ನಡೆದಿರುವುದು ಪೊಲೀಸರಿಗೂ ಕಂಗೆಡಿಸಿದೆ.
ವಿವಿಧ ಬಡಾವಣೆಗಳಲ್ಲಿನ ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗಾಜಗಾರಪೇಟೆ, ನೇತಾಜಿ ನಗರ ವ್ಯಾಪ್ತಿಯಲ್ಲಿ ಬರುವ ಮೂರು ಮನೆಗಳಲ್ಲಿ ಕಳವಾಗಿದೆ. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು, ಬಾಗಿಲು ಮುರಿದು ಅಲಮಾರಿಗಳಲ್ಲಿದ್ದ ಚಿನ್ನಾಭರಣ, ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ನೇತಾಜಿ ನಗರದ ನಿವಾಸಿ ಗೋಪಾಲಾಚಾರ್ಯ ಅವರ ಮನೆಯಲ್ಲಿಟ್ಟಿದ್ದ 80,000 ರೂ. ನಗದು 4 ತೊಲ ಬಂಗಾರ, 1 ಕೆಜಿ ಬೆಳ್ಳಿ ಕಳುವಾಗಿದೆ. ಅದೇ ರೀತಿ ಗಾಜಗಾರಪೇಟೆಯ ನಿವಾಸಿ ಅಂಬರೀಶ ಮನೆಗೆ ನುಗ್ಗಿರುವ ಕಳ್ಳರು ಬಟ್ಟೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ಚಿನ್ನಾಭರಣ ತೆಗೆದುಕೊಂಡು ಹೊಗಿದ್ದಾರೆ. ಹೀಗೆ ಇತರೆ ಮನೆಗಳಿಗೆ ನುಗ್ಗಿದ ಅಪರಿಚಿತ ಕಳ್ಳರು ಹಾಡುಹಗಲೇ ಕೈ ಚಳಕ ತೋರಿದ್ದಾರೆ.
ಈಚೆಗೆ ತಾಲೂಕಿನ ಗಾರಲದಿನ್ನಿಯಲ್ಲೂ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ನಗರದಲ್ಲಿ ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿರುವುದು, ಅದರಲ್ಲೂ ಹಗಲಲ್ಲೇ ಕಳ್ಳತನ ನಡೆದಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ.
ಒಬ್ಬನೇ ಮಾಡಿರುವ ಶಂಕೆ: ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರಿಗೆ ಪ್ರಾಥಮಿಕ ಮಾಹಿತಿಯಲ್ಲಿ ಈ ಕಳ್ಳತನಗಳನ್ನು ಒಬ್ಬನೇ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳ್ಳತನ ನಡೆದ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, 25-30 ವರ್ಷದ ಯುವಕ ಅನುಮಾನಾಸ್ಪದವಾಗಿ ದೃಶ್ಯಗಳು ಸೆರೆಯಾಗಿವೆ. ಈ ರೀತಿ ಹಾಡಹಗಲಲ್ಲೇ ಕೃತ್ಯ ಎಸಗಿರುವುದನ್ನು ನೋಡಿದರೆ ಯುವಕ ಹಣದಾಹದಿಂದ ಈ ರೀತಿ ಮಾಡಿರುವ ಸಾಧ್ಯತೆಗಳಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ನೇತಾಜಿ ಠಾಣೆ ಪಿಎಸ್‌ಐ ಬಸವರಾಜ್ ನಾಯಕ ತಿಳಿಸಿದ್ದಾರೆ.
ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಿಪೇರಿ ಹೆಸರಿನಲ್ಲಿ ಮನೆಗಳ ಮುಂದೆ ಬರುವ ಜನರಿಂದ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಯು ಜಾಗೃತಿ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.