ಜನಪ್ರತಿನಿಧಿಗಳಿಂದ ದಲಿತರ ಕಡೆಗಣನೆ; ಮುನಿಯಪ್ಪ
ಬೆಳ್ಳಿರಥಗಳಲ್ಲಿ ಪಲ್ಲಕ್ಕಿಗಳಲ್ಲಿ ಮೆರವಣಿಗೆ ಮಾಡುವುದರಿಂದ ಅಂಬೇಡ್ಕರ್‌ರವರಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ
Team Udayavani, May 3, 2022, 6:14 PM IST
ಕೋಲಾರ: ಮೀಸಲಾತಿಯಿಂದ ಬಂದಿರುವ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಅಧಿಕಾರ ವನ್ನು ದುರುಪಯೋಗಪಡಿಸಿಕೊಂಡು ಜನಾಂಗದ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲ ಎಂದು ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ವಿಷಾದಿಸಿದರು.
ತಾಲೂಕಿನ ತೊರದೇವಂಡಹಳ್ಳಿಯಲ್ಲಿ ಮಹಾ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸದ ಮುನಿಸ್ವಾಮಿ ಅಂಬೇಡ್ಕರ್ ನೀಡಿದ ಮೀಸಲಾತಿ ಭಿಕ್ಷೆಯಿಂದ ಸಂಸದರಾಗಿದ್ದರೂ, ಕನಿಷ್ಟ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಸಾಧನೆ ಮತ್ತು ಕೊಡುಗೆ ಬಗ್ಗೆ ಏನನ್ನು ಮಾತನಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 14 ರಂದು ಸರ್ಕಾರವು ಜಿಲ್ಲಾಡಳಿತವು ನಡೆಸಿದ ವಿಜೃಂಭಣೆಯ ಕಾರ್ಯಕ್ರಮಕ್ಕಿಂತ ಇಂದು ತೊರದೇವಂಡಹಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದ ಅವರು ಇಡೀ ಊರಿನ ಹಾಗೂ ಆಯೋಜಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಮಾಜ ಸೇನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿ, ಅಂಬೇಡ್ಕರ್ ಪ್ರತಿ ದಲಿತ ಮನೆಗಳಿಗೆ ತಲುಪಿದ್ದಾರೆ, ಆದರೆ ದುರದೃಷ್ಟ ಎಂದರೆ ಅವರ ಮನಗಳಲ್ಲಿ ತಲುಪಿಲ್ಲ. ಅಂಬೇಡ್ಕರ್ ವಿಚಾರಧಾರೆಗಳನ್ನು ಸಿದ್ಧಾಂತಗಳನ್ನು ಪ್ರತಿಯೊಬ್ಬ ದಲಿತರೂ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ಗೌರವ ಸಮರ್ಪಣೆ ಮಾಡಿ ದಂತಾಗುತ್ತದೆ ಎಂದರು.
ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ವೆಂಕಟಾಚಲಗೌಡ, ನಗರಸಭಾ ಸದಸ್ಯ ಅಂಬರೀಶ್, ಎಸ್‌ಎಫ್‌ಐ, ಅಂಬರೀಶ್, ಕುಪ್ಪನಹಳ್ಳಿ ಭೈರಪ್ಪ, ಮಾಜಿ ಗ್ರಾಪಂ ಸದಸ್ಯ ಮುನಿವೆಂಕಟಪ್ಪ, ಕಾಂಗ್ರೆಸ್ ಮುಖಂಡ ನಾಗರಾಜಗೌಡ, ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್, ಗ್ರಾಪಂ ಸದಸ್ಯೆ ಗಾಯತ್ರಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.
ಅಂಬೇಡ್ಕರ್‌ರನ್ನು ಬೆಳ್ಳಿರಥಗಳಲ್ಲಿ ಪಲ್ಲಕ್ಕಿಗಳಲ್ಲಿ ಮೆರವಣಿಗೆ ಮಾಡುವುದರಿಂದ ಅಂಬೇಡ್ಕರ್‌ರವರಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ. ಅವರು ಎಂದಿಗೂ ಆಡಂಬರದ ಜೀವನವನ್ನು ಅಪೇಕ್ಷೆ ಪಟ್ಟಿರಲಿಲ್ಲ. ಅಂಬೇಡ್ಕರ್ ವ್ಯಕ್ತಿ ಪೂಜೆಯನ್ನು ಬಯಸಿರಲಿಲ್ಲ. ಅವರು ಏನು ಹೇಳಿದ್ದಾರೆ ಅದನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕಿದೆ.
●ಸಿ.ಎಂ.ಮುನಿಯಪ್ಪ, ಹಿರಿಯ ದಲಿತ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.