ಪಾಳಾ ಆಪೂಸ್‌ಗೆ ವಿದೇಶಗಳಲ್ಲಿ ಭಾರೀ ಬೇಡಿಕೆ

­594 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಮಾವು ಬೆಳೆ

Team Udayavani, May 4, 2022, 12:21 PM IST

7

ಮುಂಡಗೋಡ: ತಾಲೂಕಿನಲ್ಲಿ ಈ ಬಾರಿ ಮಾವಿನ ಗಿಡಗಳು ಹೂವು ಚೆನ್ನಾಗಿ ಬಿಟ್ಟು ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಮತ್ತು ಮಾವಿನ ಹಣ್ಣಿನ ವ್ಯಾಪಾರಸ್ಥರ ಮುಖದಲ್ಲಿ ನಿರಾಸೆ ಮೂಡಿಸಿದೆ.

ತಾಲೂಕಿನಲ್ಲಿ ಈ ಬಾರಿ ಮಾವಿನ ಗಿಡಗಳು ಹೂವು ಚೆನ್ನಾಗಿ ಬಿಟ್ಟು ಮಾವು ಇಳುವರಿ ಹೆಚ್ಚಾಗುವ ಲಕ್ಷಣಗಳು ಗೋಚರಸಿ ರೈತರಲ್ಲಿ ಆಶಾದಾಯಕ ಭಾವನೆ ಮೂಡಿಸಿತ್ತು. ಆದರೆ ಶೇ.25-30 ರಷ್ಟು ಇಳುವರಿ ಬಂದಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 594 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಮಾವು ಬೆಳೆದಿದ್ದರು. ಅದರಲ್ಲಿಯೂ ತಾಲೂಕಿನ ಪಾಳಾ ಗ್ರಾಮದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಮಾವು ಬೆಳೆಯುತ್ತಾರೆ. ಪ್ರಸ್ತುತ ವರ್ಷದಲ್ಲಿ ಒಂದೂವರೆ ತಿಂಗಳು ತಡವಾಗಿ ಚೆನ್ನಾಗಿ ಹೂ ಬಿಟ್ಟಿತ್ತು. ಮಾವಿನ ಹೂವು ಚೆನ್ನಾಗಿ ಇದ್ದರು ಕಾಯಿ ಕಟ್ಟಲಿಲ್ಲ.

ಮಾವಿನ ತಳಿಗಳು: ತಾಲೂಕಿನಲ್ಲಿ ಶೇ.90 ರಷ್ಟು ರೈತರು ಆಪೂಸ್‌ ಬೆಳೆಯುತ್ತಾರೆ. ಪಾಳಾ ಮಣ್ಣಿನ ಗುಣ ಮತ್ತು ಹವಮಾನದ ಪೂರಕ ವಾತಾವರಣದಿಂದ ಇಲ್ಲಿನ ರೈತರು ಆಪೂಸ್‌, ರಸಪುರಿ, ತೋತಾಪುರಿ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇನ್ನುಳಿದಂತೆ ನೀಲಂ, ಸಿಂಧೂರಾ, ಬಿನಶಾ, ಮಲಗೋವಾ, ಮಾಂಕುರ, ಮಲ್ಲಿಕಾ, ಕೇಸರ ತಳಿಯ ಮಾವು ಬೆಳೆಯುತ್ತಾರೆ. ಕಳೆದ ಎರಡು ವರ್ಷದ ಹಿಂದೆ ಕೊರೊನಾ ಲಾಕ್‌ಡೌನ್‌ನಿಂದ ಆದ ನಷ್ಟದಲ್ಲಿದ್ದ ರೈತ ಈ ಬಾರಿ ಚೆನ್ನಾಗಿ ಹೂವು ಬಿಟ್ಟು ಉತ್ತಮ ಫಸಲು ಇದ್ದು ಯೋಗ್ಯ ಬೆಲೆಯ ನಿರೀಕ್ಷೆಯಲ್ಲಿದ್ದ. ನಿರೀಕ್ಷೆ ಮಟ್ಟಕ್ಕೆ ಮಾವು ಬಾರದೆ ಕಂಗಾಲ ಆಗುವಂತೆ ಮಾಡಿದೆ.

ಮಾವು ರಫ್ತು: ವಿಶೇಷವಾಗಿ ಪಾಳಾ ಭಾಗದಿಂದ ರಫ್ತಾಗುವ ಮಾವಿಗೆ ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಇದಲ್ಲದೆ ಹೊರದೇಶಗಳಾದ ಯುರೋಪ್‌ ಮತ್ತು ಗಲ್ಫ್ ದೇಶಗಳಿಗೂ ಇಲ್ಲಿನ ಮಾವು ರಫ್ತಾಗುತ್ತದೆ. ಪಾಳಾ ಗ್ರಾಮದ ಮಾವಿನ ಹಣ್ಣುಗಳಿಗೆ ಇಡೀ ಏಷ್ಯಾದಲ್ಲಿಯೇ ಹೆಚ್ಚಿನ ಬೇಡಿಕೆ ಇದೆ.

ನಮ್ಮ ಅಜ್ಜನ ಕಾಲದಿಂದಲೂ ಮಾವು ಮಾರಾಟ ಮಾಡುತ್ತಿದ್ದೇವೆ. ಕಳೆದ ಬಾರಿ ಉತ್ತಮ ಫಸಲು ಮತ್ತು ಯೋಗ್ಯ ಬೆಲೆ ಇತ್ತು. ನಂತರ ದಿನದಲ್ಲಿ ಕರೊನಾದಿಂದ ಲಾಕ್‌ಡೌನ್‌ ಆಗಿ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಇಳುವರಿ ಬಹಳ ಕಡಿಮೆ ಇದೆ. ಫಸ್ಟ್‌ ಕ್ವಾಲಿಟಿ ಆಪೂಸ್‌ ಕೆಜಿ 100 ರಿಂದ 150 ಕೇಳುತ್ತಿದ್ದಾರೆ. ದಿನ ಕಳೆದಂತೆ ಮಾವಿನ ಬೆಲೆ ಕಡಿಮೆಯಾಗುತ್ತದೆ.  ಮೆಹಬೂಬಲಿ ಪಾಟೀಲ, ಮಾವಿನ ಹಣ್ಣಿನ ವ್ಯಾಪಾರಸ್ಥ

ಈ ಬಾರಿ ಮಾವಿನ ಗಿಡಗಳು ಒಂದೂವರೆ ತಿಂಗಳು ತಡವಾಗಿ ಚೆನ್ನಾಗಿ ಹೂವು ಬಿಟ್ಟು ಅನುಕೂಲಕರ ವಾತಾವರಣವಿತ್ತು. ಆದರೆ ಹೂ ಬಿಡುವ ಸಂದರ್ಭದಲ್ಲಿ ಎಲೆಗಳ ಚಿಗುರು ಜಾಸ್ತಿಯಾಗಿ ಸಸ್ಯದ ಬೆಳೆವಣಿಗೆ ಆಯ್ತು ಹೊರತು ಕಾಯಿ ಕಟ್ಟಲಿಲ್ಲ. ನಿರೀಕ್ಷೆ ಮಟ್ಟಕ್ಕೆ ಇಳುವರಿ ಬರಲಿಲ್ಲ.  –ಅಣ್ಣಪ್ಪ ನಾಯ್ಕ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ­

ಮುನೇಶ ತಳವಾರ

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.