ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರ ಉದ್ಘಾಟನೆ
ಶರಣಬಸವೇಶ್ವರರು ನಾಡಿನ ಭಕ್ತರ ಮನೋಭಿಲಾಷೆ ಈಡೇರಿಸಿ ಸಮೃದ್ಧ ಮಳೆ, ಬೆಳೆ ಕರುಣಿಸಲಿ
Team Udayavani, May 4, 2022, 2:40 PM IST
ಕಾರಟಗಿ: ಪಟ್ಟಣದ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕಲಬುರ್ಗಿಯ ಮಹಾ ದಾಸೋಹಿ, ಜ್ಞಾನಿ, ಕಾಯಕಯೋಗಿ ಶ್ರೀ ಶರಣಬಸವೇಶ್ವರರು 18ನೇ ಶತಮಾನದ ಸಂತರು ತಮ್ಮ ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಪ್ರೇರಣೆಯಾದಂತೆ ವಾಣಿಜ್ಯ ನಗರಿ ಕಾರಟಗಿ ಪಟ್ಟಣಕ್ಕೂ ಪ್ರೇರಣೆಯಾಗಿದ್ದಾರೆ. ಹಲವು ದಶಕಗಳ ಹಿಂದೆ ಪಟ್ಟಣದಲ್ಲಿ ದೇವಸ್ಥಾನ ನಿರ್ಮಾಣವಾಗಿ ನಿತ್ಯ ಪೂಜೆ, ಪ್ರತಿ ವರ್ಷ ಜಾತ್ರೆ, ಅನ್ನದಾಸೋಹ ನಡೆಸಿಕೊಂಡು ಬರಲಾಗಿದೆ. ಇಂದು ಆ ದೇವಸ್ಥಾನದ ಸುಂದರವಾದ ಮಹಾದ್ವಾರ (ಸ್ವಾಗತ ಕಮಾನ)ವನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯವರು ದಾನಿಗಳ ನೆರವಿನಿಂದ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಶ್ರೀ ಶರಣಬಸವೇಶ್ವರರು ಈ ನಾಡಿನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸಿ ಸಮೃದ್ಧ ಮಳೆ, ಬೆಳೆಯನ್ನು ಕರುಣಿಸಲಿ ಎಂದರು.
ದೇವಸ್ಥಾನ ಸಮಿತಿಯಿಂದ ಶಾಸಕ ಬಸವರಾಜ ಧಡೇಸುಗೂರ, ಮಾಜಿ ಸಚಿವ ಶಿವರಾಜ ತಂಗಡಗಿ, ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಗಿಲ್ಲೇಸೂಗೂರು, ಪುರಸಭೆ ಸದಸ್ಯೆ ಸೌಮ್ಯ ಮಹೇಶ್ ಕಂದಗಲ್ ದಂಪತಿ, ಪ್ರಮುಖರಾದ ಗುಂಡಪ್ಪ ಕುಳಗಿ, ಬೂದಿ ಗಿರಿಯಪ್ಪ, ಉದ್ಯಮಿ ವೀರೇಶಪ್ಪ ಚಿನಿವಾಲ್, ಶಿವರೆಡ್ಡಿ ನಾಯಕ್, ವೀರೇಶ ಸಾಲೋಣಿ, ಹಾಗೂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಸೋಮಶೇಖರ ಬೇರಿಗೆ, ರಾಜಶೇಖರ ಸಿರಿಗೇರಿ, ಅರ್ಚಕ ಮುತ್ತಯ್ಯ ಸ್ವಾಮಿ, ಪ್ರಮುಖರಾದ ಜಗದೀಶ ಅವರಾದಿ, ಕಿರಾಣಿ ವರ್ತಕರ ಸಂಘದ ಮಲ್ಲಿಕಾರ್ಜುನ ಕೊಟಗಿ, ಖಾಜಾ ಹುಸೇನ್ ಮುಲ್ಲಾ, ಅಮರೇಶಪ್ಪ ಸಾಲಗುಂದಾ, ಶರಣಪ್ಪ ಗದ್ದಿ, ಶರಣಪ್ಪ ದಿವಟರ್, ಬಾಬುಸಾಬ್ ಬಳಿಗಾರ್, ಬಸನಗೌಡ ಕಾಯಿ ಅಂಗಡಿ, ಕಲ್ಯಾಣಪ್ಪ ರೌಡಕುಂದಿ, ಪಾಲಾಕ್ಷಪ್ಪ ಕೆಂಡದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.