ಸಂವಿಧಾನಕ್ಕೆ ಅಪಚಾರ ಮಾಡಿದ ಹೊರಟ್ಟಿ ರಾಜೀನಾಮೆ ನೀಡಬೇಕು : ಬಿ.ಕೆ. ಹರಿಪ್ರಸಾದ್
300 ಕೋಟಿ ರೂ. ಪಿಎಸ್ ಐ ನೇಮಕ ಹಗರಣ : ಅಣ್ಣಾ ಹಜಾರೆ ಎಲ್ಲಿ ಮಲಗಿದ್ದಾರೆ ?
Team Udayavani, May 5, 2022, 1:11 PM IST
ಬೆಂಗಳೂರು: ಸಭಾಪತಿ ಬಸವರಾಜ್ ಹೊರಟ್ಟಿಯವರು ಪಕ್ಷಾಂತರ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ, ಸಂವಿಧಾನದ ಪೀಠದಲ್ಲಿದ್ದು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಗುರುವಾರ ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಭಾಪತಿ ಬಸವರಾಜ್ ಹೊರಟ್ಟಿಯವರು ಇತ್ತೀಚಿಗೆ ಬಿಜೆಪಿಯ ಅಮಿತ್ ಶಾ ಅವರನ್ನ ಭೇಟಿಯಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ಘೋಷಿಸಿದ್ದಾರೆ. ಸಾಕಷ್ಟು ಹಿರಿಯರಾಗಿ, ಶಾಸಕರಾಗಿ ಅನುಭವ ಇರುವ ಹೊರಟ್ಟಿ ಅವರಿಂದ ನಾವು ನಿರೀಕ್ಷೆ ಮಾಡಿರಲಿಲ್ಲ. ಸಂವಿಧಾನದ ಪೀಠದಲ್ಲಿದ್ದು ಬಿಜೆಪಿ ಸೇರ್ಪಡೆಯ ಮಾತು ಸಂವಿಧಾನಕ್ಕೆ ಮಾಡಿದ ಅಪಚಾರ ಇದು. ಪಕ್ಷ ಸಿದ್ದಾಂತಗಳನ್ನ ಒಪ್ಪಿ ಯಾರು ಬೇಕಾದರೂ ಯಾವುದೇ ಪಕ್ಷವನ್ನ ಸೇರಬಹುದು, ಆದರೆ ಸಂವಿಧಾನ ಪೀಠದಲ್ಲಿರುವವರು ನಡೆದುಕೊಳ್ಳುವ ರೀತಿ ಇದಲ್ಲ ಎಂದರು.
ಹೊರಟ್ಟಿಯವರು ಪಕ್ಷಾಂತರ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ನಡೆದುಕೊಳ್ಳದೇ ಕಾಯ್ದೆಯನ್ನ ಉಲ್ಲಂಘಿಸಿದ್ದಾರೆ. ಸಂವಿಧಾನದ ಮೂಲಕ ಭಾರತ ನಡೆಯುತ್ತಿದೆ ಹೊರತು ಪಂಚಾಂಗದಲ್ಲಿ ನಡೆಯುವುದಿಲ್ಲ ಎಂದರು.
ಸಂವಿಧಾನದ ಪೀಠಕ್ಕೆ ಅವಮಾನ ಮಾಡಿರುವ ಹೊರಟ್ಟಿಯವರು ಕೂಡಲೇ ರಾಜೀನಾಮೆ ನೀಡಬೇಕು. ಸಭಾಪತಿಗಳ ಹುದ್ದೆ ಪಕ್ಷಾತೀತವಾದದ್ದು, ಆದರೆ ಹೊರಟ್ಟಿಯವರು ಬಿಜೆಪಿ ಸೇರ್ಪಡೆ ಆಗುತ್ತೇನೆ ಎಂದು ಹೇಳುವುದು ಪೀಠಕ್ಕೆ ಮಾಡಿದ ದ್ರೋಹ ಎಂದರು.
ಬಿಜೆಪಿಯವರ ದಂಡಂ ದಶಂಗುಣಂ ಮೂಲಕ ಹೆದರಿ ಹೊರಟ್ಟಿಯವರು ಹೋಗಿರಬಹುದು. ಬಿಜೆಪಿಗೆ ಸೇರಿ ಹೊರಟ್ಟಿಯವರು ಹರಕೆಯ ಕುರಿ ಆಗುವುದರಲ್ಲಿ ಅನುಮಾನವೇ ಇಲ್ಲ. ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ನಡೆಯುವ ಬಿಜೆಪಿಗೆ ಹೊರಟ್ಟಿ ಸೇರಿರುವುದು ದುರದೃಷ್ಟಕರ. ಆಸೆ ಆಮಿಷಗಳಿಗೆ ಹೊರಟ್ಟಿಯವರು ಹೋಗಿರುವುದು ಸ್ಪಷ್ಟವಾಗಿದೆ. ಸಂವಿಧಾನ ರಕ್ಷಣೆ ಮಾಡುವ ಪೀಠದಲ್ಲಿ ಕೂತು, ಸಂವಿಧಾನ ಬುಡಮೇಲು ಮಾಡುವ ಬಿಜೆಪಿ ಜೊತೆಗೆ ಸೇರಿದ್ದಾರೆ. ಆಪರೇಷನ್ ಕಮಲದ ಮೂಲಕವೇ ಹೊರಟ್ಟಿಯವರು ಬಿಜೆಪಿಗೆ ಸೇರಿದ್ದಾರೆ.
ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅಣ್ಣಾ ಹಜಾರೆ ಎಲ್ಲಿ ಮಲಗಿದ್ದಾರೆ ?
ರಾಜ್ಯದಲ್ಲಿ 300 ಕೋಟಿ ರೂ. ಪಿಎಸ್ ಐ ನೇಮಕ ಹಗರಣ ನಡೆದಿದೆ. ಆದರೆ ಅಣ್ಣಾ ಹಜಾರೆ ಎಲ್ಲಿ ಮಲಗಿದ್ದಾರೆ ? ಎಂದು ಹರಿಪ್ರಸಾದ್ ಕಿಡಿ ಕಾರಿದರು.
ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮವಾಗಿದೆ.ಅಕ್ರಮ ಸಂಬಂಧ ೨೭ ಜನರನ್ನ ಬಂಧಿಸಿದ್ದಾರೆ.ಅಕ್ರಮ ಆಗಿಲ್ಲದಿದ್ರೆ ಯಾಕೆ ಬಂಧಿಸುತ್ತಿದ್ರು.ದಿವ್ಯಾ ಹಾಗರಗಿ ಯಾರು,ಬಿಜೆಪಿ ನಾಯಕಿಯಲ್ಲವೇ?ಈಗ ಹಾಗರಗಿಯನ್ನ ಪೊಲೀಸರು ಬಂಧಿಸಿಲ್ಲವೇ? ಎಂದು ಪ್ರಶ್ನಿಸಿದರು.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಅವ್ಯವಹಾರ ಆಗಿಲ್ಲವೇ?ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ಆಗಿಲ್ವೇ ? ಯಾಕೆ ಇದರ ಬಗ್ಗೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದಲ್ಲಿ ಯಾವ ಸಿಎಂ ಜೈಲಿಗೆ ಹೋಗಿರಲಿಲ್ಲ. ಆದರೆ ಬಿಜೆಪಿ ಮುಖ್ಯಮಂತ್ರಿ ಹೋಗಿದ್ದರು. ಅಮಿತ್ ಶಾ ಯಾಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ ? ಅವರ ಮಗನ ಮೇಲೂ ಭ್ರಷ್ಟಾಚಾರ ಆರೋಪವಿದೆ. ಅದಕ್ಕಾಗಿ ಅವರು ಮಾತನಾಡುತ್ತಿಲ್ಲ. ಹಾವಿನಪುರದಲ್ಲಿಸುಳ್ಳು ಮ್ಯಾನ್ಯುಫ್ಯಾಕ್ಚರಿಂಗ್ ಫ್ಯಾಕ್ಟರಿಯಿದೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.