ಕುಣಿಗಲ್: ಸಿಡಿಲು ಬಡಿದು ವೃದ್ದೆ ಸ್ಥಳದಲ್ಲೇ ಸಾವು
Team Udayavani, May 5, 2022, 7:09 PM IST
ಕುಣಿಗಲ್: ದನ ಮೇಯಿಸಲು ಹೋಗಿದ್ದ ವೃದ್ದೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೂದಾನಹಳ್ಳಿ ಗ್ರಾಮದಲ್ಲಿ ಗುರವಾರ ಸಂಜೆ ನಡೆದಿದೆ.
ಗ್ರಾಮದ ಲಕ್ಕವ್ವ (60) ಸಿಡಿಲಿಗೆ ಬಲಿಯಾದ ಮಹಿಳೆ.
ಎಂದಿನಂತೆ ಲಕ್ಕವ್ವ ತಮ್ಮ ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದ ವೇಳೆ ಗಾಳಿ ಮಳೆಯಿಂದಾಗಿ ಮರದ ಕೆಳಗಡೆ ನಿಂತಿದ್ದರು, ಆದರೆ ಭಯಕರವಾದ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಚೇತನ್, ಮುಖ್ಯ ಪೇದೆ ಜೀಲಾನಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಮರ ಉರುಳಿ, ಬೈಕ್ ಜಖಂ : ಗಾಳಿ ಸಹಿತ ಮಳೆಗೆ ಮರ ಉರುಳಿ ಮರದ ಕೆಳಗೆ ನಿಲ್ಲಿಸಿದ ಬೈಕ್‌ಗಳು ಹಾನಿಗೆ ಒಳಗಾದ ಘಟನೆ ಪಟ್ಟಣದ ತಾಲೂಕು ಪಂಚಾಯ್ತಿ ಎದುರು ಗುರುವಾರ ನಡೆದಿದೆ. ಮದ್ಯಾಹ್ನ 3: 30 ರಲ್ಲಿ ಪ್ರಾರಂಭಗೊಂಡ ಗಾಳಿ ಸಹಿತ ಮಳೆಗೆ ಇಲ್ಲಿನ ಹಳೇಯ ರಾಷ್ಟ್ರೀಯ ಹೆದ್ದಾರಿ ಬಿ.ಎಂ ರಸ್ತೆಯ ತಾಲೂಕು ಪಂಚಾಯ್ತಿ ಎದುರು ಕತ್ತಿ ಮರ ಬುಡ ಸಮೇತ ಉರುಳಿ ಬಿದ್ದು ಮರದ ಕೆಳಗೆ ನಿಲ್ಲಿಸಿದ ನಾಗರಾಜು ಎಂಬುವರಿಗೆ ಸೇರಿದ ಬೈಕ್ ಸೇರಿದಂತೆ ಹಲವು ಬೈಕ್‌ಗಳು ಜಖಂ ಗೊಂಡಿವೆ. ಮಾರ್ಗದಲ್ಲಿ ನಿತ್ಯದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದವು ಅದೃಷ್ಟವಶತ್ ಯಾರಿಗೂ ತೊಂದರೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.