ಹಣದುಬ್ಬರ V/S ರೆಪೋ ದರ; ರೆಪೋ ದರ ಏರಿಕೆ ಮಾಡಿದರೆ, ಹಣದುಬ್ಬರ ಇಳಿಯುತ್ತಾ?
ಕಡಿಮೆ ರೆಪೋ ದರವಿದ್ದರೆ, ಹೆಚ್ಚು ಸಾಲಪಡೆದು, ಜನರಿಗೆ ಇದನ್ನು ವರ್ಗಾಯಿಸುತ್ತವೆ.
Team Udayavani, May 6, 2022, 10:33 AM IST
2018ರ ಆಗಸ್ಟ್ ನಲ್ಲಿ ರಿಯಲ್ ಎಸ್ಟೇಟ್ ಮತ್ತು ಆಟೋ ಮೊಬೈಲ್ ವಲಯಗಳ ಅಭಿವೃದ್ಧಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ.4ಕ್ಕೆ ಇಳಿಕೆ ಮಾಡಿತ್ತು. ಈ ಮೂಲಕ ಗೃಹ ಮತ್ತು ವಾಹನ ಬಳಕೆದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಮಾಡಿ, ಹೆಚ್ಚು ಖರೀದಿಗೂ ಉತ್ತೇಜನ ಮಾಡಲಾಗಿತ್ತು. ಆದರೆ, ಈಗ ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡಿದೆ. ಹಾಗಾದರೆ, ರೆಪೋ ದರ ಏರಿಕೆ ಮಾಡಿದರೆ, ಹಣದುಬ್ಬರ ಇಳಿಯುತ್ತಾ? ಈ ಕುರಿತ ಒಂದು ತಿಳಿ ಸಾರ ಇಲ್ಲಿದೆ…
ಏನಿದು ರೆಪೋ ದರ?
ಆರ್ ಬಿಐನಿಂದ ವಾಣಿಜ್ಯ ಬ್ಯಾಂಕುಗಳು ತೆಗೆದುಕೊಳ್ಳುವ ಸಾಲಕ್ಕೆ ನೀಡುವ ಬಡ್ಡಿ ದರವನ್ನೇ ರೆಪೋ ದರವೆಂದು ಕರೆಯುತ್ತಾರೆ. ಬ್ಯಾಂಕುಗಳು ತಮ್ಮಲ್ಲಿ ನಗದು ಕಡಿಮೆಯಾದಾಗ ಕೇಂದ್ರ ಬ್ಯಾಂಕ್ ನಿಂದ ಸಾಲ ಪಡೆಯುತ್ತವೆ. ಕಡಿಮೆ ರೆಪೋ ದರವಿದ್ದರೆ, ಹೆಚ್ಚು ಸಾಲಪಡೆದು, ಜನರಿಗೆ ಇದನ್ನು ವರ್ಗಾಯಿಸುತ್ತವೆ.
ರೆಪೋ ದರ ಏರಿಸಿದ್ದು ಏಕೆ?
ಹೆಚ್ಚುತ್ತಿರುವ ಹಣದುಬ್ಬರ, ರಷ್ಯಾ-ಉಕ್ರೇನ್ ಕಾಳಗ, ಕಚ್ಚಾತೈಲದ ದರ ಹೆಚ್ಚಳ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್ ಬಿಐ ರೆಪೋ ದರ ಏರಿಕೆ ಮಾಡಿದೆ.
ಈಗ ಹಣದುಬ್ಬರ ಕಡಿಮೆಯಾಗುತ್ತದೆಯೇ?
ಕಡಿಮೆಯಾಗಬಹುದು ಎಂಬುದು ಆರ್ ಬಿಐ ಆಶಾವಾದ. ಸದ್ಯ ಜಗತ್ತಿನಾದ್ಯಂತ ಕಾಡುತ್ತಿರು ವುದು ಪೂರೈಕೆ ಆಧರಿತ ಹಣದುಬ್ಬರ. ಅಂದರೆ, ನಮ್ಮ ಅಗತ್ಯಕ್ಕೆ ತಕ್ಕಂತೆ, ವಸ್ತುಗಳ ಪೂರೈ ಕೆಯಾಗುತ್ತಿಲ್ಲ. ರೆಪೋ ದರ ಹೆಚ್ಚಳ ಮಾಡಿ, ಬ್ಯಾಂಕುಗಳು ಬಡ್ಡಿ ದರ ಹೆಚ್ಚಿಸಿದರೆ, ಜನ ಬ್ಯಾಂಕುಗಳಿಂದ ಸಾಲ ಪಡೆಯುವುದಿಲ್ಲ. ಆಗ, ಖರೀದಿಸುವವರ ಸಂಖ್ಯೆ ಇಳಿಯುತ್ತದೆ. ಇಂಥ ವೇಳೆ, ಬೇಡಿಕೆ ಇಲ್ಲದ ಕಾರಣದಿಂದಾಗಿ ವಸ್ತುಗಳ ದರವೂ ಇಳಿಕೆಯಾಗುತ್ತದೆ. ಒಂದು ವೇಳೆ ರೆಪೋ ದರ ಹೆಚ್ಚಳ ಮಾಡದೇ ಹೋದರೆ, ಜನರ ಕಡೆ ಹಣದ ಹರಿವು ಹೆಚ್ಚಾಗಿ ವಸ್ತುಗಳಿಗೆ ಮತ್ತಷ್ಟು ಬೇಡಿಕೆ ಬರು ತ್ತದೆ. ಆಗ ಆ ವಸ್ತುಗಳ ದರ ಹೆಚ್ಚಾಗಿ ಹಣದುಬ್ಬರ ಉಂಟಾಗುತ್ತದೆ ಎಂದು ಹೇಳುತ್ತಾರೆ ಆರ್ಥಿಕ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.