ಮತ್ತೆ ಆರ್.ಜೆ.ಆಗುತ್ತಿದ್ದಾರೆ ಶ್ರೀನಿ! ಸಸ್ಪೆನ್ಸ್ ಕಂ ಕ್ರೈಂ ಥ್ರಿಲ್ಲರ್ ಸಿನಿಮಾ
Team Udayavani, May 7, 2022, 12:58 PM IST
ಆರಂಭದಲ್ಲಿ ರೇಡಿಯೋ ಜಾಕಿ (ಆರ್.ಜೆ) ಆಗಿ ಎಫ್. ಎಂ ಕೇಳುಗರಿಗೆ ಪರಿಚಯವಾಗಿದ್ದ ಶ್ರೀನಿ, ಬಳಿಕ ಆರ್.ಜೆ ಕೆಲಸಕ್ಕೆ ಗುಡ್ ಬೈ ಹೇಳಿ, ಪೂರ್ಣ ಪ್ರಮಾಣದಲ್ಲಿ ನಟ ಮತ್ತು ನಿರ್ದೇಶಕನಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡವರು.
“ಶ್ರೀನಿವಾಸ ಕಲ್ಯಾಣ’, “ಬೀರ್‌ಬಲ್’ ಸಿನಿಮಾಗಳ ಮೂಲಕ ಸಿನಿ ಪ್ರಿಯರಿಗೆ ಚಿರಪರಿಚಿತವಾಗಿರುವ ಶ್ರೀನಿ ನಟನೆ ಮತ್ತು ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ತೆರೆಗೆ ಬಂದ “ಓಲ್ಡ್ ಮಾಂಕ್’ ಸಿನಿಮಾ ಕೂಡ ಥಿಯೇಟರ್ ಮತ್ತು ಓಟಿಟಿ ಎರಡರಲ್ಲೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. “ಓಲ್ಡ್ ಮಾಂಕ್’ ಸಕ್ಸಸ್ ಬಳಿಕ ಶ್ರೀನಿ ಸಂಪೂರ್ಣ ನಿರ್ದೇಶನದತ್ತ ಮುಖ ಮಾಡಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ “ಗೋಸ್ಟ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ “ಗೋಸ್ಟ್’ ಸಿನಿಮಾದ ಟೈಟಲ್ ಅನೌನ್ಸ್ ಆಗಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇವೆಲ್ಲದರ ನಡುವೆ ಶ್ರೀನಿ ಮತ್ತೆ ಆರ್.ಜೆ ಆಗುತ್ತಿದ್ದಾರೆ!
ಇದನ್ನೂ ಓದಿ:ಟಕ್ಕರ್ ಚಿತ್ರ ವಿಮರ್ಶೆ: ಸ್ಮಾರ್ಟ್ ಲೋಕದಲ್ಲೊಂದು ಕ್ರೈಂ-ಥ್ರಿಲ್ಲರ್ ಸ್ಟೋರಿ
ಹೌದು, ಸುಮಾರು ಹತ್ತು ವರ್ಷದ ಬಳಿಕ ಶ್ರೀನಿ, ಆರ್.ಜೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಶ್ರೀನಿ ಹೀಗೆ ಆರ್.ಜೆ ಆಗಿ ಕಾಣಿಸಿಕೊಳ್ಳುತ್ತಿರುವುದು ತಮ್ಮ ಹೊಸ ಸಿನಿಮಾಕ್ಕಾಗಿ. ಶ್ರೀನಿ “ಆನ್ ಏರ್’ ಸಿನಿಮಾದಲ್ಲಿ ಆರ್. ಜೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಸದ್ದಿಲ್ಲದೆ ತಮ್ಮ ಪಾತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಇತ್ತೀಚೆಗಷ್ಟೇ “ಆನ್ ಏರ್’ ಚಿತ್ರತಂಡ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು, ಅದರಲ್ಲಿ ಶ್ರೀನಿ ಅವರ ಆರ್.ಜೆ ಲುಕ್ ರಿವೀಲ್ ಆಗಿದೆ.
ಇನ್ನು “ಆನ್ ಏರ್’ ಒಂದು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರವಾಗಿದ್ದು, “ಬಾಹುಬಲಿ’ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಬಳಿ ಅಸೋಸಿಯೇಟ್ ಆಗಿದ್ದ ಪ್ರಶಾಂತ್ ಸಾಗರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. “ವಾಯುಪುತ್ರ ಎಂಟರ್‌ಟೈನ್ಮೆಂಟ್ಸ್’ ಮತ್ತು “ಎಸ್ ವರಿಜಿನಲ್ಸ್’ ಬ್ಯಾನರ್‌ನಲ್ಲಿ ರಘುವೀರ್ ಗೋರಿಪರ್ತಿ, ಸೃಜನ್ ಯರಬೋಲು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಸದ್ಯ ಸದ್ದಿಲ್ಲದೆ ತನ್ನ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ “ಆನ್ ಏರ್’ ಇದೇ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.