ಮಟಕರೆಯಲ್ಲಿ ಶವಗಳ ಸಂಸ್ಕಾರಕ್ಕಿಲ್ಲ ಸ್ಮಶಾನ!

Team Udayavani, May 7, 2022, 4:12 PM IST

ಮಟಕರೆಯಲ್ಲಿ ಶವಗಳ ಸಂಸ್ಕಾರಕ್ಕಿಲ್ಲ ಸ್ಮಶಾನ!

ಎಚ್‌.ಡಿ.ಕೋಟೆ: ಗುಂಡಿ ತೆಗೆದಾಗೆಲ್ಲಾ ಬಹುತೇಕ ಅಸ್ತಿಪಂಜರಗಳೇ ದೊರೆಯುತ್ತವೆ. ನದಿ ಪಾತ್ರದಲ್ಲಿ ಪ್ರವಾಹ ಬಂತೆಂದರೆ ಹೂತ್ತಿಟ್ಟ ಹೆಣಗಳೇ ಮೇಲೆದ್ದು ಬರುತ್ತವೆ. ಇದು ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 5 ಕಿ.ಮೀ. ಅಂತರದಲ್ಲಿರುವ ಎಚ್‌.ಮಟಕರೆ ಗ್ರಾಮದಲ್ಲಿ ಕಂಡು ಬರುವ ದೃಶ್ಯ.

ಎಚ್‌.ಮಟಕೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಸೂಕ್ತ ಸ್ಥಳವಿಲ್ಲದ ಕಾರಣ ಪ್ರತಿ ಬಾರಿ ಹೆಣಗಳನ್ನು ಹೂಳಬೇಕಾದರೆ ಕಪಿಲಾ ನದಿ ತೀರದಲ್ಲೇ ಹೂಳಬೇಕು. ನದಿಯಿಂದ ಪ್ರವಾಹ ಬಂದರೆ ಶವಸಂಸ್ಕಾರ ಮಾಡಿದ ಜಾಗದ ಗುರುತೇ ಸಿಗೋಲ್ಲ.

ಹಲವಾರು ಬಾರಿ ಶವಸಂಸ್ಕಾರಕ್ಕೆ ಗುಂಡಿ ತೆಗೆಯುವಾಗ ಮೊದಲೇ ಹೂತ್ತಿದ್ದ ಮೃತದೇಹಗಳ ಅಸ್ತಿಪಂಜರ ದೊರೆತಿರುವ ನಿದರ್ಶನಗಳು ಸಾಕಷ್ಟಿವೆ. ಮಳೆಗಾಲದಲ್ಲಿ ನದಿ ತೀರದಲ್ಲಿ ಶವ ಸಾಗಿಸುವುದು ಕಷ್ಟಕರವಾಗುತ್ತದೆ. ಇನ್ನು ನದಿಯಲ್ಲಿ ನೀರು ತುಂಬಿಕೊಂಡಾಗ ನದಿ ದಡದಲ್ಲಿಯೂ ಜಾಗ ಇಲ್ಲದೆ ಶವ ಸಂಸ್ಕಾರಕ್ಕೆ ಪ್ರಯಾಸ ಪಡಬೇಕಾದ ಅನಿವಾರ್ಯತೆ ಒದಗುತ್ತದೆ. ಸಂಬಂಧಪಟ್ಟ ತಾಲೂಕು ಆಡಳಿತ ಕೂಡಲೆ ಇತ್ತ ಗಮನ ಹರಿಸಿ ಸ್ಮಶಾನದ ಜಾಗಕ್ಕೆ ಕ್ರಮವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಮಶಾನ ಜಾಗದಲ್ಲಿವೇ ವಾಸದ ಮನೆಗಳು: ಗ್ರಾಮ ದಲ್ಲಿ ಸ್ಮಶಾನದ ಜಾಗವನ್ನು ತಾಲೂಕು ಆಡಳಿತ ಗುರುತಿಸಿಕೊಟ್ಟಿದೆ. ಆದರೆ ಸ್ಮಶಾನ ಜಾಗದಲ್ಲಿ ಬಹುವರ್ಷ ಗಳಿಂದ ವಾಸದ ಮನೆಗಳಿದ್ದು, ಜಾಗ ಅತಿಕ್ರಮಣ ವಾಗಿದೆಯೇ ಅಥವಾ ಜಾಗವೇ ಅದಲು ಬದಲಾಗಿ ದೆಯೇ ಅನ್ನುವ ಅನುಮಾನ ಗ್ರಾಮಸ್ತರನ್ನು ಕಾಡುತ್ತಿದೆ. ಗುಂಡಿಯಿಂದ ಮೇಲೆ ಬರುವ ಶವಗಳು: ಕೆರೆ ತೀರ ದಲ್ಲಿ ಮಳೆಗಾಲ ಹೊರತು ಪಡಿಸಿ ಇನ್ನುಳಿದ ಕಾಲದಲ್ಲಿ ಶವಗಳ ಸಂಸ್ಕಾರ ಮಾಡಲಾಗುತ್ತದೆ. ಮಳೆ ಆರಂಭ ಗೊಂಡು ನದಿಯಲ್ಲಿ ಹೆಚ್ಚಿನ ನೀರು ತುಂಬಿ ಹರಿದಾಗ ಹೂತ್ತಿಟ್ಟ ಶವಗಳು ಗುಂಡಿಯಿಂದ ಹೊರಬಂದಿರುವ ಸಾಕಷ್ಟು ನಿದರ್ಶನಗಳಿವೆ ಅನ್ನುವ ಮಾತುಗಳು ಗ್ರಾಮಸ್ಥರಿಂದ ವ್ಯಾಪಕವಾಗಿ ಕೇಳಿ ಬರುತ್ತವೆ.

ಸತ್ತ ವ್ಯಕ್ತಿ ಆತ್ಮಕ್ಕೆ ಮುಕ್ತಿ ಹೇಗೆ: ಜೀವಿತದ ಅವಧಿಯಲ್ಲಿ ಇಡೀ ಜೀವನ ಗೊಂದಲದ ಗೂಡಾಗಿ ಜಂಜಾಟದಲ್ಲಿ ಸಿಲುಕುವ ಮುನುಷ್ಯ ಇಹಲೋಕ ತ್ಯಜಿಸಿದಾಗ ಆತನ ಆತ್ಮಕ್ಕೆ ಮುಕ್ತಿ ದೊರೆಯಬೇಕೆಂದರೆ ಸಂಪ್ರದಾಯ ಬದ್ಧವಾಗಿ ಶವಸಂಸ್ಕಾರ ನೆರವೇರಬೇಕು ಅನ್ನುವುದು ನಂಬಿಕೆ. ಚಿರನಿದ್ದೆಗೆ ಜಾರಿದ ಮೃತದೇಹ ಹೂಳುವುದಕ್ಕೂ ಜಾಗ ಇಲ್ಲದೆ ಅರೆಬರೆಯಾಗಿ ಮಣ್ಣಲ್ಲಿ ಮಣ್ಣು ಮಾಡಿದರೂ ಮೃತದೇಹ ಹೊರ ಬಂದು ಗೊಂದಲಕ್ಕೆ ಕಾರಣವಾಗುತ್ತಿದೆ ಅಂದಾಗ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಲಭಿಸೋಲ್ಲ ಅನ್ನುವುದು ಹಿಂದೂ ಸಂಪ್ರದಾಯ. ಕೂಡಲೇ ಸಂಬಂಧ ಪಟ್ಟ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಎಚ್‌.ಮಟಕೆರೆ ಗ್ರಾಮದಲ್ಲಿ ಸ್ಮಶಾನದ ಜಾಗ ಗುರುತಿಸಿ ಚಿರನಿದ್ದೆಗೆ ಜಾರುವ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಎಚ್‌.ಮಟಕೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಲ ವಿಲ್ಲದೇ ಕಪಿಲಾ ನದಿ ತೀರದಲ್ಲಿ ಶವಗಳ ಸಂಸ್ಕಾರ ನೆರವೇರಿಸುತ್ತಿದ್ದಾರೆ. ಕೂಡಲೆ ಒತ್ತುವರಿ ಯಾಗಿರುವ ಸರ್ಕಾರಿ ಜಾಗ ಗುರುತಿಸಿ ತುರ್ತಾಗಿ ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಮಶಾನದ ಜಾಗ ಮಂಜೂರು ಮಾಡಲು ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. -ರತ್ನಂಬಿಕಾ, ತಹಶೀಲ್ದಾರ್‌

ಗ್ರಾಮದಲ್ಲಿ ಸ್ಮಶಾನವಿಲ್ಲದೇ ಮಳೆಯಾಗಲಿ, ಬಿಸಿಲಾಗಲಿ ಶವಗಳನ್ನು ನದಿ ತೀರದಲ್ಲೇ ಸಂಸ್ಕಾರ ಮಾಡಬೇಕು. ಮಳೆಗಾಲದಲ್ಲಿ ಹಲವು ಬಾರಿ ಹೂತ ಹೆಣಗಳು ಮೇಲೆ ಬಂದಿರುವ ಮತ್ತು ಮೃತದೇಹಗಳ ಅಸ್ತಿಪಂಜರಗಳು ಕಾಣಿಸಿಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಕೂಡಲೆ ತಾಲೂಕು ಸ್ಮಶಾನಕ್ಕೆ ಜಾಗ ನೀಡಿ ಶಾಶ್ವತ ಪರಿಹಾರ ನೀಡಬೇಕು. -ಬೈರಾಜು, ಗ್ರಾಮಸ್ಥ

– ಎಚ್‌.ಬಿ.ಬಸವರಾಜು.

ಟಾಪ್ ನ್ಯೂಸ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.