2ನೇ ಬಾರಿಗೆ ಡಿಡಿಜಿ ಕಮಾಂಡೇಶನ್ ಅವಾರ್ಡ್ ಗೆ ಪಾತ್ರರಾದ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ
Team Udayavani, May 7, 2022, 7:32 PM IST
ಹುನಗುಂದ: ಪಟ್ಟಣದ ವಿ.ಎಂ.ಎಸ್.ಆರ್. ವಸ್ತ್ರದ ಹಾಗೂ ವಿ.ಎಸ್. ಬೆಳ್ಳಿಹಾಳ ಪದವಿ ಮಹಾವಿದ್ಯಾಲಯದ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಅವರು 2ನೇ ಬಾರಿಗೆ ಕರ್ನಾಟಕ-ಗೋವಾ ಡೈರೆಕ್ಟರ್‌ರೇಟ್‌ನ ‘ಡೆಪ್ಯುಟಿ ಡೈರೆಕ್ಟರ್ ಜನರಲ್ ಕಮಾಂಡೇಶನ್ ಅವಾರ್ಡ’ಗೆ ಪಾತ್ರರಾಗಿದ್ದಾರೆ.
ಹುನಗುಂದದ ವಿಎಂಎಸ್‌ಆರ್‌ವಿ ಕಾಲೇಜಿನ ಎನ್‌ಸಿಸಿ ಘಟಕದಲ್ಲಿ ಎನ್‌ಸಿಸಿಯ ಧ್ಯೇಯ, ಉದ್ದೇಶಗಳು ಸಾಕಾರಗೊಂಡಿವೆ. ಕೆಡೆಟ್‌ಗಳ ಸಾಧನೆ, ಶಿಸ್ತು, ನೈಪುಣ್ಯತೆಗಳು ಉನ್ನತ ಮಟ್ಟದಲ್ಲಿರುವ ಕಾರಣ 2ನೇ ಬಾರಿಗೆ ಡಿಡಿಜಿ ಕಮಾಂಡೇಶನ್ ಅವಾರ್ಡ್ ಲಭಿಸಿರುವುದ್ದನ್ನು ಪ್ರಶಂಸಿಸುವ ಮೂಲಕ ಇತ್ತೀಚಗೆ ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಳಗೇರಿ ಅವರಿಗೆ ಕಮಾಂಡಿಂಗ್ ಆಫೀಸರ್ ಕರ್ನಲ್ ರವಿ ಖಾಸನೀಸ್ ಅವರು ಪ್ರಶಸ್ತಿ ಪತ್ರ,ಪದಕ ಪ್ರಧಾನ ಮಾಡಿದರು.
ಕರ್ನಲ್ ರವಿ ಖಾಸನೀಸ್ ಅವರು ಮಾತನಾಡಿ, ‘ಎನ್‌ಸಿಸಿ ಯುವಶಕ್ತಿಯಲ್ಲಿ ಶಿಸ್ತು,ಧೈರ್ಯ,ಸಮರ್ಪಣಾ ಮನೋಭಾವ ಬೆಳೆಸಿ, ಯುವಕರನ್ನು ದೇಶ ಸೇವೆಗೆ ಸಿದ್ದಗೊಳಿಸುತ್ತದೆ. ಚಳಗೇರಿ ಅವರು ಎನ್‌ಸಿಸಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಜೊತೆ ಬೇರೆ ಸಿನಿಮಾ ಮಾಡ್ದೇ ಇರೋಕೆ ಇದೇ ಕಾರಣ! Part -2
2019 ರಲ್ಲಿ ಎಸ್.ಬಿ. ಚಳಗೇರಿ ಅವರಿಗೆ ಡೈರೆಕ್ಟರ್ ಜನರಲ್ ಅಪ್ರಿಶಿಯೇಶನ್ ಅವಾರ್ಡ್ ಹಾಗೂ ವಿಎಂಎಸ್‌ಆರ್‌ವಿ ಕಾಲೇಜಿನ ಎನ್‌ಸಿಸಿ ಘಟಕಕ್ಕೆ ಬೆಸ್ಟ್ ಇನ್‌ಸ್ಟಿಟ್ಯೂಶನ್ ಅವಾರ್ಡ ಲಭಿಸಿತ್ತು.
2 ನೇ ಬಾರಿಗೆ ಡಿಡಿಜಿ ಕಮಾಂಡೇಶನ್ ಅವಾರ್ಡ್ಗೆ ಭಾಜನರಾದ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಅವರನ್ನು ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಹಾಗೂ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ಕಡಪಟ್ಟಿ, ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಪ್ರಾಚಾರ್ಯೆ ಪ್ರೊ.ಎಸ್.ಕೆ. ಮಠ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಎಸ್. ಬೊಳಿಶೆಟ್ಟಿ, ಕಾಲೇಜಿನ ಸಿಬ್ಭಂದಿ, ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.