ಚುನಾವಣಾ ಪ್ರಚಾರ ಆರಂಭ,ಇನ್ನು ಮುಂದೆ ಬಿಜೆಪಿಯ ಪರ್ವ: ಆರ್.ಅಶೋಕ್
ಎರಡನೇ ಹಂತದಲ್ಲಿ ಬೇರೆ ಭಾಗದಲ್ಲಿ ಪಕ್ಷ ಸೇರ್ಪಡೆ
Team Udayavani, May 7, 2022, 7:39 PM IST
ಬೆಂಗಳೂರು: ಕರ್ನಾಟಕದಲ್ಲಿ ಇನ್ನು ಮುಂದೆ ಬಿಜೆಪಿಯ ಪರ್ವ, ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಕೇಳುತ್ತಿದ್ದಾರೆ. ಡಬಲ್ ಇಂಜಿನ್ ಮತ್ತೆ ಕೆಲಸ ಮಾಡಲು ರಣತಂತ್ರ ಮಾಡಿದ್ದೇವೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಮುಖ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಅಮಿತ್ ಶಾ, ಬಿ.ಎಲ್. ಸಂತೋಷ್ ಅವರು ರಾಜ್ಯಕ್ಕೆ ಬಂದು ಚರ್ಚೆ ಮಾಡಿ ಹೋಗಿದ್ದಾರೆ. ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ನಾಯಕರನ್ನ ಬಿಜೆಪಿಗೆ ಬರಮಾಡಿಕೊಳ್ಳಲಾಗಿದೆ. ಯಾವುದೇ ಷರತ್ತುಗಳನ್ನು ಹಾಕದೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.ಬಿಜೆಪಿಯ ನಾಯಕರು ಮಾಡಿದ್ದಾರೆ.ಇದು ಪ್ರಾಥಮಿಕ ಹಂತ. ಇನ್ನೂ ಹಲವರನ್ನ ಗುರುತಿಸಿದ್ದೇವೆ. ಇದು ನಿನ್ನೆ, ಇಂದಿನ ಮಾತಲ್ಲ.ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಉಸ್ತುವಾರಿ ಅರುಣ್ ಸಿಂಗ್ ಅನುಮತಿ ಪಡೆದು ಕಾರ್ಯಕ್ರಮ ಮಾಡಿದ್ದೇವೆ. ಉಡುಪಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆ ಮೊದಲನೇ ಹಂತವಾಗಿದೆ. ಎರಡನೇ ಹಂತದಲ್ಲಿ ಬೇರೆ ಭಾಗದಲ್ಲಿ ನಡೆಯಲಿದೆ ಎಂದರು.
ನಮ್ಮ ಕೇಂದ್ರದ ನಾಯಕರು 150+ ಟಾಸ್ಕ್ ಕೊಟ್ಟಿದ್ದಾರೆ. ಯುಪಿ ಯಲ್ಲಿ ಹೇಳುತ್ತಿದ್ದಕ್ಕಿಂತ ಹೆಚ್ಚು ಸೀಟು ಪಡೆದಿದ್ದೇವೆ.ಎಲ್ಲಾ ಸಿಎಂಗಳಿಗೂ ಒಂದು ಹೆಸರು ಕೊಡಲಾಗಿದೆ. ನಮ್ಮ ಸಿಎಂಗೆ ಕಾಮನ್ ಸಿಎಂ ಅಂತ ಹೆಸರು ನೀಡಲಾಗಿದೆ. ಅವರು ಕಾಮನ್ ಬಜೆಟ್ ನೀಡಿದ್ದಾರೆ.ದಾರಿಯಲ್ಲಿ ಹೋಗೋರಿಗೂ ಬಜೆಟ್‌ನಲ್ಲಿ ಕೊಟ್ಟಿದ್ದಾರೆ ಎಂದರು.
ರಾಜ್ಯಾಧ್ಯಕ್ಷರು ಅಶ್ವಮೇಧ ಯಾಗ ಮಾಡಿದ್ದಾರೆ. ಏಳು ಬಾರಿ ಇಡೀ ಕರ್ನಾಟಕ ಸುತ್ತಿದ್ದಾರೆ. ಅಧ್ಯಕ್ಷರು ಹಾಗೂ ಸಿಎಂ ಪರ್ಮನೆಂಟ್ ಜೋಡಿ.ನಮ್ಮ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರುತ್ತಿದ್ದೀರಿ ಸ್ವಾಗತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.