11ರಂದು ಹಿರಣ್ಯಕೇಶಿ ನದಿಗೆ ಗಂಗಾರತಿ
ನದಿಯಲ್ಲಿ ವಾದ್ಯಮೇಳದೊಂದಿಗೆ ಮಂಗಳಾರತಿ
Team Udayavani, May 8, 2022, 12:37 PM IST
ಹುಕ್ಕೇರಿ: ಕಾಶಿ ಗಂಗಾರತಿ ಮಾದರಿಯಲ್ಲಿ ತಾಲೂಕಿನ ಬಡಕುಂದ್ರಿ ಹೊಳೆಮ್ಮ ದೇವಸ್ಥಾನದ ಪಕ್ಕದಲ್ಲಿರುವ ಹಿರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮವನ್ನು ಮೇ 11ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದಾಸ ಸಾಹಿತ್ಯ ಪರಿಷತ್ ಸಂಚಾಲಕರಾದ ವಿಜಯಿಂದ್ರಾಚಾರ್ಯ ಜೋಶಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಬಡಕುಂದ್ರಿ ಶ್ರೀ ಹೊಳೆಮ್ಮದೇವಿ ದೇವಸ್ಥಾನದ ರಾಜಗೋಪುರಕ್ಕೆ ಕಳಸಾರೋಹಣ ಹಾಗೂ ಹೊಳೆಮ್ಮದೇವಿಯ ನೂತನ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ಮತ್ತು ಗಂಗಾರತಿ ಕಾರ್ಯಕ್ರಮದ ಪೂರ್ವಸಿದ್ಧತೆಯ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಭಾಗದಲ್ಲಿ ಬುಧವಾರ 11ರಂದು ಸಂಜೆ 6 ಗಂಟೆಗೆ ಹಿರಣ್ಯಕೇಶಿ ನದಿಯ ದಡದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಶ್ರದ್ಧಾ ಭಕ್ತಿಯಿಂದ ನದಿಯಲ್ಲಿ ಗಂಗಾರತಿ ಸೇವೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾರ್ಗದರ್ಶನಲ್ಲಿ ಶಾಸ್ತ್ರ ಬದ್ಧವಾಗಿ ನದಿಯಲ್ಲಿ ವಾದ್ಯಮೇಳದೊಂದಿಗೆ ಮಂಗಳರಾತಿ ನಡೆಯಲಿದೆ. ದಾಸ ಸಾಹಿತ್ಯ ಭಜನಾ ಮಂಡಳದವರಿಂದ ಏಕ ಕಾಲಕ್ಕೆ ಸಹಸ್ರಕಂಠದಿಂದ ಸಮೂಹಗಾಯನ ಜರುಗಲಿದೆ ಎಂದರು.
ಜಿಪಂ ಸದಸ್ಯ ಹಾಗೂ ಯಾತ್ರಾ ಸಮಿತಿಯ ಸದಸ್ಯ ಪವನ ಕತ್ತಿ ಅವರು ಕಾರ್ಯಕ್ರಮದ ಭಿತ್ತಿಪತ್ರ ಬಿಡಗಡೆಗೊಳಿಸಿ ಮಾತನಾಡಿ, ಜಾಗೃತ ಹೊಳೆಮ್ಮ ದೇವಸ್ಥಾನದ ದೇವಸ್ಥಾನದಲ್ಲಿ ಮೇ 11ರಂದು 12ರಂದು ನಡೆಯುವ ರಾಜಗೋಪುರ ಕಳಾಸಾರೋಹನ ಹಾಗೂ ನೂತನ ಕಟ್ಟದ ಅಡಿಗಲ್ಲು ಹಾಗೂ ರಾಜಗೋಪುರಕ್ಕೆ ಹೆಲಿಕ್ಯಾಪ್ಟರ್ ಮೂಲಕ ತಾಲೂಕಿನ 12 ಮಠದ ಶ್ರೀಗಳು ಪುಷ್ಪಾರ್ಪಾಣೆ ಮಾಡಲಿದ್ದಾರೆ. ಸುಮಾರು ಸಾವಿರಾರು ಜನರು ಪಾಲ್ಗೊಳ್ಳುರುವುದರಿಂದ ಯಾವುದೇ ರೀತಿ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಂದರು.
ದೇವಸ್ಥಾನದ ಟ್ರಸ್ಟ್ ಕಮಿಟಿಯ ಎಚ್.ಎಲ್. ಪೂಜಾರಿ ಮಾತನಾಡಿ, ಭಕ್ತರ ದೇಣಿಗೆಯಿಂದ 11 ಲಕ್ಷ ರೂ. ವೆಚ್ಚದಲ್ಲಿ ರಾಜಗೋಪುರ ಹಾಗೂ ಮುಜರಾಯಿ ಇಲಾಖೆಯಿಂದ 25 ಲಕ್ಷ ಹಣ ಮಂಜೂರಾಗಿದೆ. ಕತ್ತಿ ಕುಟುಂಬದವರಿಂದ ಮಹಾದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಈ ಭಾಗದಲ್ಲಿ ಪ್ರಥಮವಾಗಿ ನಡೆವ ಗಂಗಾರತಿ ಹಿನ್ನೆಲೆಯಲ್ಲಿ ಹಿರಣ್ಯಕೇಶಿ ನದಿಯನ್ನು 500 ಜನರಿಂದ ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ನದಿಯ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಬಡಕುಂದ್ರಿ ಗ್ರಾಪಂ ಅಧ್ಯಕ್ಷ ಶಿವಶಂಕರ ಮಾನಗಾಂವಿ, ಪಿಕೆಪಿಎಸ್ ಅಧ್ಯಕ್ಷ ಸಿದ್ದು ಮಾನಗಾಂವಿ, ಟ್ರಸ್ಟ್ ಕಮಿಟಿ ಪರಪ್ಪ ಮಗದುಮ್ಮ, ಪರಪ್ಪ ವಾಸೇದಾರ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.