ಉರ್ವದಲ್ಲಿ ‘ಜಿಐ’ ಉಪಕೇಂದ್ರ ಸಿದ್ಧ!
ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಹೊಸ ತಂತ್ರ ಜ್ಞಾನ
Team Udayavani, May 9, 2022, 11:20 AM IST
ಉರ್ವ: ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ, ದ.ಕ. ಜಿಲ್ಲೆಯಲ್ಲೇ ಮೊದಲ ಅತ್ಯಾಧುನಿಕ ತಂತ್ರಜ್ಞಾನದ 33/11 ಕೆವಿ ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರ (ಜಿಐ) ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿದೆ.
ಮಣ್ಣಗುಡ್ಡೆಯ ಸಬ್‌ಸ್ಟೇಶನ್‌ನಲ್ಲಿ ಒತ್ತಡ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉರ್ವ ಮಾರ್ಕೆಟ್‌ನ ಪಕ್ಕದಲ್ಲಿ ಹೊಸ ಸಬ್ ಸ್ಟೇಶನ್ ತೆರೆಯಲಾಗಿದೆ. ಸಾಮಾನ್ಯವಾಗಿ ಸಬ್‌ಸ್ಟೇಶನ್‌ಗೆ ಹಲವು ಎಕರೆ ಭೂಮಿ ಅಗತ್ಯವಿರುವುದರಿಂದ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಲಭ್ಯವಿಲ್ಲದ ಕಾರಣದಿಂದ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಮಣ್ಣಗುಡ್ಡೆಯಲ್ಲಿ 10ಎಂವಿಎ ಸಾಮರ್ಥ್ಯದ ಸಬ್ ಸ್ಟೇಶನ್ ಕಾರ್ಯಾಚರಿಸುತ್ತಿದೆ.
ಸದ್ಯ ಕೊಟ್ಟಾರಚೌಕಿ, ಅಶೋಕನಗರ ವ್ಯಾಪ್ತಿಗೆ ಕಾವೂರು, ಪಣಂಬೂರು ಸಬ್ ಸ್ಟೇಶನ್ ನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಉರ್ವ ಸ್ಟೇಶನ್ ಕಾರ್ಯಾರಂಭಿಸಿದ ಬಳಿಕ ಇಲ್ಲಿಂದಲೇ ಅಲ್ಲಿಗೆ ವಿದ್ಯುತ್ ಸರಬರಾಜು ಮಾಡುವ ನಿರೀಕ್ಷೆಯಿದೆ.
ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ನಗರ ಪ್ರದೇಶಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಮೆಸ್ಕಾಂ ಉದ್ದೇಶಿಸಿತ್ತು. ಈ ಯೋಜನೆಯಲ್ಲಿ ಮಂಗಳೂರು, ಬಂಟ್ವಾಳ, ಉಡುಪಿ ಹಾಗೂ ಸಾಲಿಗ್ರಾಮ ಸೇರಿದಂತೆ ಜನನಿಬಿಡ ನಗರ ಪ್ರದೇಶದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಶನ್‌ಗಳನ್ನು ಒಟ್ಟು 39 ಕೋ.ರೂ. ವೆಚ್ಚದಲ್ಲಿ ಸ್ಥಾಪಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಭೂಗತ ಕೇಬಲ್
ಕೆಪಿಟಿಸಿಎಲ್‌ನ ಕಾವೂರಿನಲ್ಲಿರುವ 220 ಕೆ.ವಿ.ಶರಾವತಿ ವಿದ್ಯುತ್ ಸ್ವೀಕರಣೆ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್‌ಸ್ಟೇಶನ್‌ಗೆ ವಿದ್ಯುತ್ ಸರಬರಾಜಾಗುತ್ತದೆ. ಇದರಂತೆ ಮಣ್ಣಗುಡ್ಡೆ ಸಬ್‌ಸ್ಟೇಶನ್‌ಗೆ ವಿದ್ಯುತ್ ಸರಬರಾಜಾಗುತ್ತಿದೆ. ಇದೀಗ ಉರ್ವ ದಲ್ಲಿ ಜಿಐಎಸ್ ಸ್ಟೇಶನ್ ಆದ ಕಾರಣದಿಂದ ಮಣ್ಣಗುಡ್ಡೆದಿಂದ ಉರ್ವದವರೆಗೆ ಭೂಗತ ಕೇಬಲ್ ಅಳವಡಿಸಲಾಗಿದೆ.
ಕೆಪಿಟಿಸಿಎಲ್; ಇನ್ನಷ್ಟೇ ಅನುಷ್ಠಾನ!
ನೆಹರೂ ಮೈದಾನದ ಬಳಿ ಇರುವ ಮೆಸ್ಕಾಂನ 33 ಕೆ.ವಿ. ಸಾಮರ್ಥ್ಯದ ಸಬ್ ಸ್ಟೇಶನ್ ಅನ್ನು ಕೆಪಿಟಿಸಿಎಲ್ ವತಿಯಿಂದ 110 ಕೆ.ವಿ.ಯ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್ (ಗ್ಯಾಸ್ ಇನ್ಸುಲೇಟೆಡ್ ಸ್ಟೇಶನ್) ಆಗಿ ಮೇಲ್ದರ್ಜೆಗೇರಿಸುವ ಬಗ್ಗೆ ಒಂದೆರಡು ವರ್ಷದಿಂದ ಚರ್ಚೆ ನಡೆಯಿತಾದರೂ, ಅದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ. ಅದಕ್ಕಿಂತಲೂ ಮೊದಲು ಇದೀಗ ಮೆಸ್ಕಾಂನ ಜಿಐಎಸ್ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ.
ಕಾಮಗಾರಿ ಪೂರ್ಣ
ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ನಗರ ಪ್ರದೇಶಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಮೆಸ್ಕಾಂ ಉದ್ದೇಶಿಸಿದೆ. ಈ ಯೋಜನೆಯಂತೆ ಮಂಗಳೂರಿನ ಉರ್ವದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. -ಪ್ರಶಾಂತ್ ಕುಮಾರ್ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
ಕಾರ್ಯಕ್ರಮ ಮುಂದೂಡಿಕೆ!
ಉರ್ವದಲ್ಲಿ ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರ (ಜಿಐ) ಉದ್ಘಾಟನೆ ಮೇ 9ರಂದು ಬೆಳಗ್ಗೆ 11.30ಕ್ಕೆ ಎಂದು ನಿಗದಿಯಾಗಿತ್ತು. ಆದರೆ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ತುರ್ತು ಸಭೆ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉದ್ಘಾಟನ ಕಾರ್ಯಕ್ರಮವನ್ನು ದಿಢೀರ್ ಮುಂದೂಡಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.