ಶೇಷಗಿರಿಯಲ್ಲಿ ಗರಿಗೆದರಿದ ರಂಗ ಪ್ರೀತಿ

ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕಲಾ ತಂಡ

Team Udayavani, May 9, 2022, 3:15 PM IST

14

ಹಾನಗಲ್ಲ: ಶೇಷಗಿರಿ ಎಂಬ ಪುಟ್ಟ ಗ್ರಾಮದಲ್ಲಿ ರಂಗ ಪ್ರೀತಿ ಗರಿಗೆದರಿದ್ದು ಇಡೀ ಊರು ರಂಗ ಚಟುವಟಿಕೆಯಲ್ಲಿ ತೊಡಗಿದೆ. ಕಲಾವಿದರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಕಾರ್ಯ ಗಮನ ಸೆಳೆದಿದೆ.

ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಶೇಷಗಿರಿ ಕಲಾ ತಂಡ ನಿತ್ಯ ನಿರಂತರವಾಗಿ ರಂಗ ಧ್ಯಾನದಲ್ಲಿ ತೊಡಗಿ ಇಡೀ ಕರ್ನಾಟಕದ ಖ್ಯಾತ ರಂಗ ನಿರ್ದೇಶಕರು, ಕಲಾವಿದರನ್ನು ಸೆಳೆದಿದೆ. ಶೇಷಗಿರಿ ರಂಗ ಮಂದಿರದಲ್ಲಿ ರಂಗ ಪ್ರದರ್ಶನ ನೀಡುವುದೇ ಒಂದು ಹೆಮ್ಮೆ ಹಾಗೂ ಸಂಭ್ರಮ ಎಂಬ ಭಾವನೆ ನಾಡಿನ ಕಲಾವಿದರದ್ದಾಗಿದೆ.

ಗಜಾನನ ಯುವಕ ಮಂಡಳದ ಹೆಸರಿನಲ್ಲಿ ಕೂಡಿದ ಹುಡುಗರು ಕೇವಲ ತಮ್ಮ ರಂಗ ಪ್ರೀತಿಯನ್ನು ಅಭಿವ್ಯಕ್ತಿಸುವುದು ಮಾತ್ರವಲ್ಲ, ಮಕ್ಕಳನ್ನು ರಂಗಕ್ಕೆ ಆಕರ್ಷಿಸುವ ಮಹತ್ಕಾರ್ಯಕ್ಕೆ ಮುಂದಾಗಿ ಕಳೆದ 15 ವರ್ಷಗಳಿಂದ ರಂಗ ತರಬೇತಿ ಶಿಬಿರ ನಡೆಸುತ್ತ ಮಕ್ಕಳ ರಂಗಭೂಮಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೇವಲ ಹದಿನೈದು ದಿನಗಳಲ್ಲಿ ಮಕ್ಕಳು ನಾಟಕ ಪ್ರದರ್ಶನಕ್ಕೆ ಸಿದ್ಧರಾಗುವಂತೆ ಮಾಡುತ್ತಾರೆ.

ಖ್ಯಾತ ರಂಗ ನಿರ್ದೇಶಕರಾದ ಡಾ|ಶ್ರೀಪಾದ ಭಟ್‌, ಎಸ್‌.ಎಲ್‌.ಸಂತೋಷ, ಎಂ.ಗಣೇಶ, ರಾಘೂ ಶಿಕಾರಿಪುರ, ಕರಿಯಪ್ಪ ಕವಲೂರ ಸೇರಿದಂತೆ ಹತ್ತಾರು ನಿರ್ದೇಶಕರು ಪ್ರತಿ ವರ್ಷ ಇಲ್ಲಿ ಮಕ್ಕಳ ರಂಗ ತರಬೇತಿಯಲ್ಲಿ ಪಾಲ್ಗೊಂಡು ಮಕ್ಕಳ ರಂಗಕ್ಕೆ ಮೆರಗು ತಂದಿದ್ದಾರೆ. ಸೊರಬ, ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ವಿವಿಧ ಊರುಗಳಿಂದ ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಬರುತ್ತಾರೆ.

ಇದೇ ರಂಗಭೂಮಿಗೆ ಬಾಲ್ಯದಲ್ಲಿ ಪ್ರವೇಶಿಸಿದ ಪುನೀತ ಕಬ್ಬೂರ ಈಗ ಸಿನಿಮಾ ರಂಗದಲ್ಲಿ ಮಿಂಚುತ್ತಿರುವುದು ಶೇಷಗಿರಿಯ ಪೊÅಡೆಕ್ಟ್ ಎಂಬ ಹೆಮ್ಮೆ ಈ ಊರಿಗಿದೆ. ಗೌತಮ್‌ ಧಾರೇಶ್ವರ, ಸೋಮು ಗುರಪ್ಪನವರ, ಪ್ರಸನ್ನ ಕೋಮಾರ, ಸೇರಿದಂತೆ ಹತ್ತಾರು ರಂಗ ಪ್ರತಿಭೆಗಳು ಇಲ್ಲಿಂದ ಬೆಳೆದು ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರಶಸ್ತಿ ಗಳಿಸಿದ್ದಾರೆ.

ಇದೇ ರಂಗಭೂಮಿಯಲ್ಲಿ ತರಬೇತಿ ಪಡೆದ ಮಕ್ಕಳ ನಾಟಕ ಹಳ್ಳಿಯ ಸಿರಿ ಬೆಂಗಳೂರಿನಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿಗೆ ಪಾತ್ರವಾಗಿದೆ. ಪಂಜರ ಶಾಲೆ, ಬೆಟ್ಟಕ್ಕೆ ಚಳಿಯಾದರೆ, ಸತ್ರು ಅಂದ್ರೆ ಸಾಯ್ತಾರಾ, ನಾನೂ ಗಾಂಧಿ ಆಗ್ತೀನೆ, ಓ ಮಗು ನೀ ನಗು, ಪುಷ್ಪರಾಣಿ, ನಕ್ಕಳಾ ರಾಜಕುಮಾರಿ, ಮಾಯಾ ಕನ್ನಡಿ, ಬೆಳಕು ಹಂಚಿದ ಬಾಲಕ, ನಾಯಿ ತಿಪ್ಪ, ಬೆಳಕಿನೆಡೆಗೆ, ಪುಣ್ಯಕೋಟಿ ಸೇರಿದಂತೆ ಹತ್ತು ಹಲವು ನಾಟಕಗಳು ಮಕ್ಕಳಿಂದ ಪ್ರದರ್ಶನಗೊಂಡಿದ್ದು ಮೆಚ್ಚುಗೆ ಪಡೆದಿವೆ. ಈಗ ಶಂಭು ಬಳಿಗಾರ ಅವರ ತೊಗರಿತಿಪ್ಪ ನಾಟಕ ನಿರ್ದೇಶಕ ಕರಿಯಪ್ಪ ಕವಲೂರ ಅವರ ನಿರ್ದೇಶನದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಕೊಡುಗೆ ಇಲ್ಲಿಯ ರಂಗಮಂದಿರಕ್ಕೆ ಹೆಚ್ಚಿರುವುದರಿಂದ ಸಿ.ಎಂ.ಉದಾಸಿ ಕಲಾಕ್ಷೇತ್ರ ಎಂದು ಹೆಸರಿಡಲಾಗಿದೆ. ಇಷ್ಟೆಲ್ಲ ಪ್ರಖ್ಯಾತಿಯ ಹಿಂದೆ ಸಮಯ, ಹಣ, ಕ್ರಿಯಾಶೀಲತೆಯನ್ನು ಒಗ್ಗೂಡಿಸಿ ಒಂದು ಪುಟ್ಟ ಗ್ರಾಮವನ್ನು ರಂಗ ಗ್ರಾಮವನ್ನಾಗಿ ರಾಷ್ಟ್ರಮಟ್ಟದಲ್ಲಿ ಹೆಸರಾಗುವಂತೆ ಮಾಡಿರುವುದು ಒಬ್ಬ ಪೋಸ್ಟ್‌ ಮಾಸ್ಟರ್‌ ಪ್ರಭು ಗುರಪ್ಪನವರ ಎಂಬುದನ್ನು ಹೇಳಲೇಬೇಕು. ಇವರೊಂದಿಗಿರುವ ಹುಡುಗರು ಕಲಾವಿದರಾಗಿ, ಸಂಘಟಕರಾಗಿ, ಸ್ವಯಂ ಸೇವಕರಾಗಿ, ಮಕ್ಕಳ ರಂಗಭೂಮಿಯ ಮೂಲಕವೂ ಕೆಲವರು ಬಂದು ಈಗ ಶೇಷಗಿರಿಯ ರಂಗ ಕಲೆಯನ್ನು ಜೀವಂತವಾಗಿಡಲು ಜೀವ ಸವೆಸುತ್ತಿದ್ದಾರೆ.

ದಿ.ಸಿ.ಎಂ.ಉದಾಸಿ ಅವರು ಹಳ್ಳಿ ಹುಡುಗರ ನಾಟಕ ನೋಡಿ ಒಳ್ಳೆಯದು ಅಂದು ಒಂದು ಕೋಟಿ ರೂ ಖರ್ಚಿನಲ್ಲಿ ರಂಗ ಮಂದಿರ ಕೊಟ್ಟರು. ಈಗ ಮತ್ತೆ ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣ ನಡೀತಿದೆ. –ಪ್ರಭು ಗುರಪ್ಪನವರ, ಶೇಷಗಿರಿ ಕಲಾ ತಂಡದ ಅಧ್ಯಕ್ಷರು.

-ರವಿ ಲಕ್ಷ್ಮೇಶ್ವರ

ಟಾಪ್ ನ್ಯೂಸ್

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.