ಮಲ್ಪೆ : ರೂಂನಲ್ಲಿಟ್ಟಿದ್ದ 10.30 ಲಕ್ಷ ರೂ.ನಲ್ಲಿ 8.90 ಲಕ್ಷ ರೂ. ಕಳ್ಳತನ
Team Udayavani, May 10, 2022, 9:33 PM IST
ಮಲ್ಪೆ: ವ್ಯಕ್ತಿಯೋರ್ವರು ರೂಂನಲ್ಲಿಟ್ಟಿದ್ದ 10.30 ಲಕ್ಷ ರೂ.ನಲ್ಲಿ 8.90 ಲಕ್ಷ ರೂ. ಕಳ್ಳತನವಾಗಿರುವ ಘಟನೆ ಮಲ್ಪೆ ಕೊಳದಲ್ಲಿ ನಡೆದಿದೆ.
ಮಲ್ಪೆ ಬಂದರಿನ ರೈಟರ್ ಆಗಿ ಕೆಲಸ ಮಾಡುತ್ತಿರುವ ಗದಗದ ಕಳಸಾಪುರ ಗ್ರಾಮದ ಸುರೇಶ ಲಮಾಣಿ ಅವರು ಕಳ್ಳತನದ ಬಗ್ಗೆ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುರೇಶ ಲಮಾಣಿ ಅವರು ವಾಮನ ಕಾಂಚನ್ ಅವರ ಪಾಲುದಾರಿಕೆಯ ಎಸ್‌ಡಿಡಿಕೆ ಮೀನು ಪಾರ್ಟಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಮೇ 7 ಮತ್ತು 8ರಂದು ನಡೆಸಿದ ಮೀನು ವ್ಯಾಪಾರದಿಂದ ಬಂದ 10.30 ಲಕ್ಷ ರೂ. ಹಣವನ್ನು ತಮ್ಮ ರೂಮಿನಲ್ಲಿ ಬಾಕ್ಸ್ ನ ಒಳಗಿಟ್ಟು ಬೀಗ ಹಾಕಿ, ಮರುದಿನ ಬೆಳಗ್ಗೆ 4.30ರ ಸುಮಾರಿಗೆ ಮೀನುಗಾರಿಕ ಬಂದರಿಗೆ ಹೋಗಿದ್ದರು.
ಮೇ 9ರಂದು ಬೆಳಗ್ಗೆ 9.30ರ ಸುಮಾರಿಗೆ ಮೀನುಗಾರಿಕೆ ಕೆಲಸ ಮುಗಿಸಿ ವಾಪಸು ರೂಮಿನ ಬಳಿ ಬಂದು ನೋಡಿದಾಗ ರೂಮಿನ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳ ಬಾಕ್ಸ್‌ನಲ್ಲಿಟ್ಟಿದ್ದ 10.30 ಲಕ್ಷ ರೂ. ನಲ್ಲಿ 8.90 ಲಕ್ಷ ರೂ. ಕಳ್ಳತನ ಮಾಡಿ ಉಳಿದ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವುದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.