ಕೊನೇ ಕ್ಷಣದಲ್ಲಿ ಎಲ್‌ಐಸಿ ಐಪಿಒಗೆ ಮುಗಿಬಿದ್ದ ವಿದೇಶಿ ಹೂಡಿಕೆದಾರರು!
Team Udayavani, May 11, 2022, 12:34 AM IST
ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆ ಅನಿಶ್ಚಿತತೆ, ಕರೆನ್ಸಿ ರಿಸ್ಕ್ ಗೆ ಹೆದರಿ ಎಲ್‌ಐಸಿ ಐಪಿಒದಿಂದ ದೂರ ಉಳಿದಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು, ಇನ್ನೇನು ಬಿಡ್ಡಿಂಗ್ ಪ್ರಕ್ರಿಯೆ ಮುಗಿ ಯಲು ಒಂದೆರಡು ಗಂಟೆಗಳು ಬಾಕಿಯಿರು ವಂತೆ ಏಕಾಏಕಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ಒಟ್ಟಾರೆ 16.20 ಕೋಟಿ ಷೇರುಗಳ ಪೈಕಿ ಶೇ.60ರಷ್ಟನ್ನು ಸಾಗರೋತ್ತರ ಹೂಡಿಕೆ ದಾರರಿಗೆಂದೇ ಮೀಸಲಿಡಲಾಗಿತ್ತು. ಜಾಗತಿಕ ಆರ್ಥಿಕ ಸ್ಥಿತಿ ಡೋಲಾಯ ಮಾನವಾಗಿರುವ ಕಾರಣ ಆರಂಭದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಿಡ್ಡಿಂಗ್‌ನಲ್ಲಿ ಆಸಕ್ತಿ ತೋರಿರಲಿಲ್ಲ. ಆದರೆ ಪ್ರಕ್ರಿಯೆಯ ಕೊನೆಯ ದಿನವಾದ ಸೋಮವಾರ ಏಕಾಏಕಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದು, ನಿಗದಿಗಿಂತ 3 ಪಟ್ಟು ಅಧಿಕ ಬಿಡ್ಡಿಂಗ್ ನಡೆದಿದೆ ಎಂದು ಷೇರುಮಾರುಕಟ್ಟೆಯ ದತ್ತಾಂಶ ತಿಳಿಸಿದೆ.
ವಿಶೇಷವೆಂದರೆ ದೇಶೀಯ ರಿಟೇಲ್ ಖರೀದಿ ದಾರರು, ಪಾಲಿಸಿದಾರರು ಹಾಗೂ ಉದ್ಯೋಗಿಗಳು ಬಿಡ್ಡಿಂಗ್ ಆರಂಭವಾದಾಗಿ ನಿಂದಲೂ ಬಹಳ ಆಸಕ್ತಿಯಿಂದ ಭಾಗವಹಿಸಿ ದ್ದಾರೆ. ಎಲ್ಲ ವಿಭಾಗಗಳಲ್ಲೂ ನಿರೀಕ್ಷೆ ಮೀರಿ ಬಿಡ್ಡಿಂಗ್ ಆಗಿವೆ.
ಈ ಹಿನ್ನೆಲೆಯಲ್ಲಿ ಇದನ್ನು ಭಾರತದ “ಅರಾಮ್ಕೊ ಮೊಮೆಂಟ್’ ಎಂದು ಬಣ್ಣಿಸಲಾಗಿದೆ. 2019ರಲ್ಲಿ ಗಲ್ಫ್ ತೈಲ ದಿಗ್ಗಜ ಸೌದಿ ಅರೇಬಿಯಾದ ಅರಾಮ್ಕೊ ಐಪಿಒ ಬಿಡು ಗಡೆ ಯಾದಾಗಲೂ (29.4 ಶತಕೋಟಿ ಡಾಲರ್) ವಿದೇಶಿಯರಿಗಿಂತ ಹೆಚ್ಚು ಆಸಕ್ತಿಯಿಂದ ದೇಶೀಯ ಹೂಡಿಕೆದಾರರೇ ಬಿಡ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.