ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, May 11, 2022, 7:11 AM IST
ಮೇಷ:
ಸರಕಾರಿ ಕೆಲಸಗಳಲ್ಲಿ ಪ್ರಗತಿ. ಸಂಚಾರ ಶೀಲತೆ ಮುಂದಾಳುತ್ವ. ಕ್ರಯ ವಿಕ್ರಯ ನಿಪು ಣತೆ. ದೈಹಿಕ ಆರೋಗ್ಯದಲ್ಲಿ ಉದಾಸೀನತೆ ಸಲ್ಲದು. ಸಂದಭೋìಚಿತ ಗುಣಪ್ರವೃತ್ತಿ. ಅಧಿಕ ವಿಚಾರಗಳಲ್ಲಿ ಆಸಕ್ತಿ . ಗುರುಹಿರಿಯರೊಂದಿಗೆ ತಾಳ್ಮೆಯಿಂದಿರಿ.
ವೃಷಭ:
ಧಾರ್ಮಿಕ ಚಟುವಟಿಕಗಳಲ್ಲಿ ತತ್ಪರತೆ. ದೂರ ಪ್ರಯಾಣ. ಆರ್ಥಿಕ ಸದೃಢತೆ. ಉತ್ತಮ ವಾಕ್ಚತುರತೆಯಿಂದ ಜನ ಮನ್ನಣೆ. ವೈವಾಹಿಕ ಯೋಗ. ಗೃಹ ಸಂಬಂಧೀ ವಿಚಾರದಲ್ಲಿ ಖರ್ಚು ವೆಚ್ಚ ಅಧಿಕ .
ಮಿಥುನ:
ಪರರ ಕಾರ್ಯದಲ್ಲಿ ಆಸಕ್ತಿ. ಜವಾಬ್ದಾರಿಯಿಂದ ನಿರ್ವಹಿಸುವುದರಿಂದ ತೊಂದರೆಗೊಳಗಾದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಸಾಲಗಾರರ ಕೈಗೆ ಸಿಲುಕದಿರಿ. ಗುರು ಹಿರಿಯರ ಆಜ್ಞಾ ಪನೆಯಲ್ಲಿ ಆಸಕ್ತಿ. ಮಕ್ಕಳ ನಿಮಿತ್ತ ಶ್ರಮ.
ಕರ್ಕ:
ಸರ್ವರಲ್ಲಿ ದ್ವೇಷ ಸಾಧಿಸದಿರಿ. ಕೆಲಸ ಕಾರ್ಯಗಳಲ್ಲಿ ಉತ್ಸಾಹವಿರಲಿ, ಆಲಸ್ಯ ತೋರದಿರಿ. ಗುರು ಹಿರಿಯರ ಚಿಂತೆ ಕಾಡೀತು. ವಿದೇಶ ಮೂಲದ ಜನ ಸಂಪರ್ಕ. ಸಹೋದರ ಸಮಾನರೊಂದಿಗೆ ತಾಳ್ಮೆ ಅಗತ್ಯ. ಸತ್ಕರ್ಮಕ್ಕೆ ಧನ ವ್ಯಯ.
ಸಿಂಹ:
ಸಜ್ಜನರಿಂದ ಗೌರವ ಆದರ ಮನ್ನಣೆ. ಹಣಕಾಸಿನ ವಿಚಾರದಲ್ಲಿ ನಷ್ಟ ಸಂಭವ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸರಕಾರಿ ಕೆಲಸಗಳಲ್ಲಿ ಮಗ್ನತೆ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ಆರೋಗ್ಯದಲ್ಲಿ ಸುಧಾರಣೆ.
ಕನ್ಯಾ:
ವಿದ್ಯೆಯಲ್ಲಿ ತಲ್ಲೀನತೆ. ಮಕ್ಕಳಿಂದ ಸಂತೋಷ ವಾರ್ತೆ. ಸಂಶೋದನಾತ್ಮಕ ಕಾರ್ಯ ಗಳಲ್ಲಿ ಆಸಕ್ತಿ. ಪರರಿಗೆ ಸಹಾಯ ಮಾಡಿದುದರಿಂದ ಕೀರ್ತಿ ಯಶಸ್ಸು ಗೌರವ ಪ್ರಾಪ್ತಿ. ಉತ್ತಮ ನಿರೀಕ್ಷಿತ ಧನಾಗಮನ. ಗುರುಹಿರಿಯರ ಸಹಕಾರ.
ತುಲಾ:
ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಒತ್ತಡ. ಉತ್ತಮ ಧನಾರ್ಜನೆ ಇದ್ದರೂ ಖರ್ಚಿಗೆ ಹಲವಾರು ಮಾರ್ಗಗಳು ಎದುರಾಗುವುವು.
ವೃಶ್ಚಿಕ:
ನಿರೀಕ್ಷಿತ ಸ್ಥಾನ ಗೌರವ ಆದರಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ವಿಚಾರ ದಲ್ಲಿ ತೃಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನ ಸಂಪಾದನೆಯಿಂದ ಆತ್ಮಸ್ಥೆರ್ಯ ವೃದ್ಧಿ.
ಧನು:
ಆರೋಗ್ಯದಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಭೂಮಿ ಆಸ್ತಿ ವ್ಯವಹಾರ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸಹಾಯ ಒದಗಿ ಅಭಿವೃದ್ಧಿ. ದಾಂಪತ್ಯ ತೃಪ್ತಿದಾಯಕ. ಕುಟುಂಬಿ ಕರ ಉತ್ತಮ ಸಹಕಾರ ಪ್ರೋತ್ಸಾಹ.
ಮಕರ:
ಉತ್ತಮ ಆರೋಗ್ಯ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ದಾಯಕ ಬದಲಾವಣೆ. ಧನಾರ್ಜನೆಗೆ ಸರಿಯಾಗಿ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ದಾಂಪತ್ಯ ಸುಖ ಉತ್ತಮ. ನೂತನ ಮಿತ್ರರ ಭೇಟಿ.
ಕುಂಭ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಉತ್ತಮ ಧನಸಂಪತ್ತು ಪ್ರಾಪ್ತಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಗೃಹೋ ಪಯೋಗಿ ವಸ್ತುಗಳ ಸಂಗ್ರಹ. ದೀರ್ಘ ಪ್ರಯಾಣದಿಂದ ದೇಹಾಯಾಸ ತೋರಿತು. ವಿದ್ಯಾರ್ಥಿಗಳಿಗೆ ಸದವಕಾಶ.
ಮೀನ:
ಸುದೃಢ ಆರೋಗ್ಯ. ಮಾತಿನಲ್ಲಿ ತಾಳ್ಮೆ ಹಿಡಿತವಿರಲಿ. ಅನಗತ್ಯ ಚರ್ಚೆಗೆ ಒಳಗಾಗಿ ಆರ್ಥಿಕ ನಷ್ಟಕ್ಕೆ ಒಳಗಾಗದಿರಿ. ಪಾಲುದಾರಿಕಾ ಕ್ಷೇತ್ರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ ಪ್ರೋತ್ಸಾಹವಿರಲಿ. ವಿದ್ಯಾರ್ಥಿಗಳಿಗೆ ಅತ್ತುತ್ತಮ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
Horoscope: ದುಡಿಮೆಗೆ ತಕ್ಕ ಪ್ರತಿಫಲದ ಭರವಸೆ ನಿಮ್ಮದಾಗಲಿದೆ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.