![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 11, 2022, 11:36 AM IST
ಕುಷ್ಟಗಿ: ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಇಬ್ಬರು ಪುರಸಭೆ ಸದಸ್ಯರ ಸದಸ್ಯತ್ವವನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಲಾಗಿದೆ.
23 ಸದಸ್ಯ ಬಲದ ಕುಷ್ಟಗಿ ಪುರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 8 ಹಾಗೂ ಇಬ್ಬರು ಪಕ್ಷೇತರರು ಹಾಗೂ ಓರ್ವ ಅಭ್ಯರ್ಥಿ ಅವಿರೋಧ ಅಯ್ಕೆಯಾಗಿದ್ದರು. ಕಾಂಗ್ರೆಸ್ ಗೆ ಅಧಿಕಾರದ ಗದ್ದುಗೆಗೇರುವ ಅರ್ಹತೆ ಇದ್ದರೂ, ಕಾಂಗ್ರೆಸ್ ನ ಇಬ್ಬರು ಸದಸ್ಯರಾದ 17ನೇ ವಾರ್ಡ್ ಸದಸ್ಯ ವೀರೇಶಗೌಡ ಬೆದವಟ್ಟಿ ಹಾಗೂ 3ನೇ ವಾರ್ಡ್ ಸದಸ್ಯೆ ಗೀತಾ ತುರಕಾಣಿ ಬಿಜೆಪಿಗೆ ಬೆಂಬಲಿಸಿದ್ದರು.
ಈ ಬೆಳವಣಿಗೆಯಿಂದ ಎರಡನೇ ಸ್ಥಾನದಲ್ಲಿದ್ದ ಬಿಜೆಪಿ ತನ್ನ 8 ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಅವಿರೋಧ ಆಯ್ಕೆಯಾಗಿದ್ದ ಒಬ್ಬರು ಸೇರಿದಂತೆ ಮೂವರು ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತರೊಂದಿಗೆ 13 ಸದಸ್ಯ ಬಲದೊಂದಿಗೆ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಗಂಗಾಧರಸ್ವಾಮಿ ಹಿರೇಮಠ ಗದ್ದುಗೆ ಅಲಂಕರಿಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಸ್ವಪಕ್ಷೀಯರಿಗೆ ಮುಖ ಭಂಗ ಮಾಡಿದ್ದ ಇಬ್ಬರು ಪಕ್ಷಾಂತರಿ ಸದಸ್ಯರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆ ಅಡಿ, ಸದರಿ ಸದಸ್ಯರ ಸದಸ್ಯತ್ವ ರದ್ದತಿಗೆ ಅರ್ಜಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳು ಈ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿ ಪುರಸಭೆ ಸದಸ್ಯ ವೀರೇಶಗೌಡ ಬೆದವಟ್ಟಿ, ಗೀತಾ ತುರಕಾಣಿ ಸದಸ್ಯತ್ವನ್ನು ಅನರ್ಹಗೊಳಿಸಿದ್ದಾರೆ. ಈ ಬೆಳವಣಿಗೆಯಿಂದ ಬಿಜೆಪಿ ಸದಸ್ಯ ಬಲ 11ಕ್ಕೆ ಕುಗ್ಗಿದಂತಾಗಿದೆ.
ಇದನ್ನೂ ಓದಿ:ಸಂಪುಟ ವಿಸ್ತರಣೆ: ಅಮಿತ್ ಶಾ ಭೇಟಿಯಾಗಲು ಸಿಎಂಗೆ ಅವಕಾಶ
ಪುರಸಭೆ ಅನರ್ಹ ಸದಸ್ಯ ವೀರೇಶಗೌಡ ಬೆದವಟ್ಟಿ ಪ್ರತಿಕ್ರಿಯಿಸಿ ಸದಸ್ಯತ್ವ ರದ್ದತಿ ಆದೇಶ ಪ್ರಶ್ನಿಸಿ ತಡೆಯಾಜ್ಞೆಗೆ ಧಾರವಾಡದಲ್ಲಿರುವ ಹೈ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.