![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 11, 2022, 1:24 PM IST
ಮುಂಬಯಿ: 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅಬುಧಾಬಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (IIFA ) ಕಾರ್ಯಕ್ರಮಕ್ಕಾಗಿ 15 ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಫ್ರಾನ್ಸ್ ಮತ್ತು ನೇಪಾಳಕ್ಕೆ ತೆರಳಲು ನ್ಯಾಯಾಲಯದ ಅನುಮತಿಯನ್ನೂ ಕೋರಿದ್ದಾರೆ.
ಕಾನ್ಮನ್ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ನಿರಂತರವಾಗಿ ಕೇಳಿಬರುತ್ತಿದ್ದು, ಜಾಕ್ವೆಲಿನ್ ಪ್ರಸ್ತುತ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ ಮತ್ತು ಅವರ ಸಾಕ್ಷ್ಯವನ್ನು ಸಹ ದಾಖಲಿಸಿದ್ದಾರೆ. ಅಗತ್ಯವಿದ್ದಾಗ ತನಿಖೆಗೆ ಲಭ್ಯವಿರಬೇಕು ಮತ್ತು ದೇಶದಿಂದ ಹೊರಗೆ ಹಾರಬಾರದು ಎಂದು ಆಕೆಗೆ ತಿಳಿಸಲಾಗಿದೆ. IIFA 2022 ಸಮೀಪಿಸುತ್ತಿರುವಾಗ, ಪ್ರಶಸ್ತಿ ಸಮಾರಂಭದ ಭಾಗವಾಗಲು ಜಾಕ್ವೆಲಿನ್ ಫರ್ನಾಂಡೀಸ್ ದುಬೈ, ಯಾಸ್ ದ್ವೀಪಕ್ಕೆ ಹೋಗುವ ಅಗತ್ಯವಿದೆ.
ಕಳೆದ ತಿಂಗಳು ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಮೂಲಗಳ ಪ್ರಕಾರ, 7.27 ಕೋಟಿ ಮೌಲ್ಯದ ಸ್ಥಿರ ಠೇವಣಿ ಮೌಲ್ಯದ ವಸ್ತುಗಳು ಮತ್ತು ಆಸ್ತಿಯನ್ನು ಏಜೆನ್ಸಿಯು ಜಪ್ತಿ ಮಾಡಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.