ಐಪಿಎಲ್ ಟೈ ಮ್ಯಾಚ್-02: ತವರಿನಂಗಳದಲ್ಲೇ ಚೆನ್ನೈಗೆ ಪಂಜಾಬ್ ಪಂಚ್
Team Udayavani, May 11, 2022, 5:21 PM IST
ಐಪಿಎಲ್ ಪಂದ್ಯಾವಳಿಯ ಎರಡನೇ ಟೈ ಮ್ಯಾಚ್‌ಗೆ ಸಾಕ್ಷಿಯಾದದ್ದು 2010ರ ಟೂರ್ನಿ. ಚೆನ್ನೈಯಲ್ಲಿ ನಡೆದ ಚೆನ್ನೈ-ಪಂಜಾಬ್ ನಡುವಿನ ಲೀಗ್ ಹಂತದ ಈ ಸಣ್ಣ ಮೊತ್ತದ ಹೋರಾಟ ಸಮಬಲದೊಂದಿಗೆ ಕೊನೆಗೊಂಡಿತ್ತು. ಸೂಪರ್ ಓವರ್‌ನಲ್ಲಿ ಪಂಜಾಬ್ ಜಯ ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಗಳಿಸಿದ್ದು 8 ವಿಕೆಟಿಗೆ 136 ರನ್ ಮಾತ್ರ. ಚೇಸಿಂಗ್ ವೇಳೆ ಆತಿಥೇಯ ಚೆನ್ನೈ ಆರಂಭ ಅಮೋಘವಾಗಿತ್ತು. 13ನೇ ಓವರ್ ಚಾಲ್ತಿಯಲ್ಲಿರುವಾಗ ಒಂದೇ ವಿಕೆಟಿಗೆ 96 ರನ್ ಬಾರಿಸಿ ಗೆಲುವಿನತ್ತ ಮುನ್ನುಗ್ಗುತ್ತಿತ್ತು. ಆದರೆ ಇಲ್ಲಿಂದ ಮುಂದೆ ನಾಟಕೀಯ ಕುಸಿತ, ಬ್ಯಾಟಿಂಗ್ ಪರದಾಟವೆಲ್ಲ ಕಂಡುಬಂತು.
ಇರ್ಫಾನ್ ಪಠಾಣ್ ಅಂತಿಮ ಓವರ್ ಎಸೆಯಲು ಬಂದಾಗ ಚೆನ್ನೈ ಜಯಕ್ಕೆ 10 ರನ್ ಅಗತ್ಯವಿತ್ತು. 4 ವಿಕೆಟ್ ಕೈಲಿತ್ತು. ಆಲ್ಬಿ ಮಾರ್ಕೆಲ್ ಮತ್ತು ಆರ್. ಅಶ್ವಿನ್ ಕ್ರೀಸ್‌ನಲ್ಲಿದ್ದರು.
ಮಾರ್ಕೆಲ್ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದರು. ಮುಂದಿನ ಎಸೆತಕ್ಕೆ 2 ಬೈ ಸಿಕ್ಕಿತು. 3ನೇ ಎಸೆತದಲ್ಲಿ ಪಠಾಣ್ ಸಿಂಗಲ್ ತೆಗೆದರೆ, ಅಶ್ವಿನ್ ಅನಂತರದ ಎಸೆತದಲ್ಲಿ 2 ರನ್ ಸಂಪಾದಿಸುವಲ್ಲಿ ಯಶಸ್ವಿಯಾದರು. ಸ್ಕೋರ್ ಸಮನಾಯಿತು. 2 ಎಸೆತಗಳಲ್ಲಿ ಒಂದು ರನ್ ತೆಗೆಯುವ ಸುಲಭ ಗುರಿ ಚೆನ್ನೈ ಮುಂದಿತ್ತು.ಆದರೆ ಇಲ್ಲಿ ಪಠಾಣ್ ಮ್ಯಾಜಿಕ್ ಮಾಡಿದರು. 5ನೇ ಎಸೆತದಲ್ಲಿ ಅಶ್ವಿನ್‌ಗೆ ರನ್ ಗಳಿಸಲಾಗಲಿಲ್ಲ. ಕೊನೆಯ ಎಸೆತವನ್ನು ಮಿಡ್ ಆಫ್ ನಲ್ಲಿದ್ದ ಕೈಫ್ ಕೈಗೆ ಕ್ಯಾಚ್ ಕೊಟ್ಟರು. ಪಂದ್ಯ ಸೂಪರ್ ಓವರ್‌ನತ್ತ ಮುಖ ಮಾಡಿತು. ಇಲ್ಲಿಯೂ ಧೋನಿ ಪಡೆಗೆ ಅದೃಷ್ಟ ಕೈಕೊಟ್ಟಿತು.
ರಸ್ಟಿ ಥೆರಾನ್ ಸಾಹಸ
ಸೂಪರ್ ಓವರ್‌ನಲ್ಲಿ ರಸ್ಟಿ ಥೆರಾನ್ ಉತ್ತಮ ನಿಯಂತ್ರಣ ಸಾಧಿಸಿದರು. ಚೆನ್ನೈ ಒಂದು ವಿಕೆಟಿಗೆ ಕೇವಲ 9 ರನ್ ಮಾಡಿತು. ಚೆನ್ನೈ ಪರ ಸೂಪರ್ ಓವರ್ ಎಸೆದವರು ಮುತ್ತಯ್ಯ ಮುರಳೀಧರನ್. ಅವರದೇ ನಾಡಿನ ಮಾಹೇಲ ಜಯವರ್ಧನೆ ಸಿಕ್ಸರ್ ಸಿಡಿಸಿ ಸ್ವಾಗತ ಕೋರಿದರು. ಆದರೆ ಮುಂದಿನ ಎಸೆತದಲ್ಲೇ ಮುರಳಿ ಸೇಡು ತೀರಿಸಿಕೊಂಡರು. ಪಂಜಾಬ್ ಸ್ಕೋರ್ ಒಂದಕ್ಕೆ 6 ರನ್. 3ನೇ ಎಸೆತದಲ್ಲಿ ಯುವರಾಜ್‌ಗೆ ರನ್ ಗಳಿಸಲಾಗಲಿಲ್ಲ. ಆದರೆ ಮುಂದಿನ ಎಸೆತವನ್ನು ರಿವರ್ಸ್ ಸ್ವೀಪ್ ಮೂಲಕ ಬೌಂಡರಿಗೆ ರವಾನಿಸಿ ಪಂಜಾಬ್ ಗೆಲುವನ್ನು ಸಾರಿದರು.
ರಸ್ಟಿ ಥೆರಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದು ಅವರ ಪದಾರ್ಪಣ ಪಂದ್ಯವೆಂಬುದನ್ನು ಮರೆಯುವಂತಿಲ್ಲ. 17 ರನ್ನಿಗೆ 2 ವಿಕೆಟ್ ಹಾಗೂ ಒಂದು ರನೌಟ್ ಮೂಲಕ ಅವರು ಪಂದ್ಯಕ್ಕೆ ತಿರುವು ಕೊಟ್ಟಿದ್ದರು.
ಸ್ಕೋರ್ ಪಟ್ಟಿ
ಕಿಂಗ್ಸ್ ಇಲೆವೆನ್ ಪಂಜಾಬ್
ರವಿ ಬೋಪಾರ ಸಿ ಬಾಲಾಜಿ ಬಿ ಮಾರ್ಕೆಲ್ 1
ಇರ್ಫಾನ್ ಪಠಾಣ್ ಬಿ ಬಾಲಾಜಿ 39
ಕುಮಾರ ಸಂಗಕ್ಕರ ಸ್ಟಂಪ್ಡ್ ಪಟೇಲ್ ಬಿ ಮುರಳಿ 15
ಮಾಹೇಲ ಜಯವರ್ಧನೆ ಎಲ್‌ಬಿಡಬ್ಲ್ಯು ಮುರಳಿ 3
ಯುವರಾಜ್ ಸಿಂಗ್ ಸಿ ಬೈಲಿ ಬಿ ಮಾರ್ಕೆಲ್ 43
ಮೊಹಮ್ಮದ್ ಕೈಫ್ ಸಿ ಮಾರ್ಕೆಲ್ ಬಿ ಮುರಳಿ 14
ಮಾನ್ವಿಂದರ್ ಬಿಸ್ಲಾ ರನೌಟ್ 7
ಪೀಯೂಷ್ ಚಾವ್ಲಾ ಔಟಾಗದೆ 8
ರಸ್ಟಿ ಥೆರಾನ್ ರನೌಟ್ 0
ರಮೇಶ್ ಪೊವಾರ್ ಔಟಾಗದೆ 2
ಇತರ 4
ಒಟ್ಟು (8 ವಿಕೆಟಿಗೆ) 136
ವಿಕೆಟ್ ಪತನ: 1-18, 2-54, 3-58, 4-64, 5-109, 6-124, 7-124, 8-125.
ಬೌಲಿಂಗ್:
ಆಲ್ಬಿ ಮಾರ್ಕೆಲ್ 4-0-23-2
ಮನ್‌ಪ್ರೀತ್ ಗೋನಿ 2-0-20-0
ಆರ್. ಅಶ್ವಿನ್ 4-0-32-0
ಲಕ್ಷ್ಮೀಪತಿ ಬಾಲಾಜಿ 4-0-29-1
ಮುತ್ತಯ್ಯ ಮುರಳೀಧರನ್ 4-0-16-3
ಜಸ್ಟಿನ್ ಕೆಂಪ್ 0.1-0-1-0
ಸುರೇಶ್ ರೈನಾ 1.5-0-13-0
ಚೆನ್ನೈ ಸೂಪರ್ ಕಿಂಗ್ಸ್
ಪಾರ್ಥಿವ್ ಪಟೇಲ್ ಸ್ಟಂಪ್ಡ್ ಸಂಗಕ್ಕರ ಬಿ ಚಾವ್ಲಾ 57
ಮ್ಯಾಥ್ಯೂ ಹೇಡನ್ ಬಿ ಪೊವಾರ್ 33
ಸುರೇಶ್ ರೈನಾ ರನೌಟ್ 15
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಥೆರಾನ್ 0
ಎಸ್. ಬದರೀನಾಥ್ ಸಿ ಸಂಗಕ್ಕರ ಬಿ ಯುವರಾಜ್ 2
ಆಲ್ಬಿ ಮಾರ್ಕೆಲ್ ಔಟಾಗದೆ 12
ಮನ್‌ಪ್ರೀತ್ ಗೋನಿ ಬಿ ಥೆರಾನ್ 2
ಆರ್. ಅಶ್ವಿನ್ ಸಿ ಕೈಫ್ ಬಿ ಪಠಾಣ್ 2
ಇತರ 13
ಒಟ್ಟು (7 ವಿಕೆಟಿಗೆ) 136
ವಿಕೆಟ್ ಪತನ: 1-65, 2-96, 3-97, 4-104, 5-121, 6-127, 7-136.
ಬೌಲಿಂಗ್:
ಇರ್ಫಾನ್ ಪಠಾಣ್ 3-0-22-1
ರಮೇಶ್ ಪೊವಾರ್ 4-0-22-1
ಶಲಭ್ ಶ್ರೀವಾಸ್ತವ 3-0-25-0
ರಸ್ಟಿ ಥೆರಾನ್ 4-0-17-2
ಪೀಯೂಷ್ ಚಾವ್ಲಾ 4-0-27-1
ಯುವರಾಜ್ ಸಿಂಗ್ 2-0-18-1
ಪಂದ್ಯಶ್ರೇಷ್ಠ: ರಸ್ಟಿ ಥೆರಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.