ಕಾರ್ಕಳ: ಯಕ್ಷರಂಗಾಯಣ ಕಾರ್ಯಾಲಯ ಉದ್ಘಾಟನೆ: ಪ್ರತೀ ವರ್ಷ ಚಿಣ್ಣರ ಮೇಳ: ಸುನಿಲ್
Team Udayavani, May 11, 2022, 11:57 PM IST
ಕಾರ್ಕಳ: ರಂಗಭೂಮಿ, ನಾಟಕ, ಕಲೆ, ತರಬೇತಿ, ಶಿಬಿರ ಹೀಗೆ ಹತ್ತಾರು ಚಟುವಟಿಕೆಗಳ ಕೇಂದ್ರವಾಗಿ ಯಕ್ಷ ರಂಗಾಯಣ ಕೇಂದ್ರ ಕಾರ್ಯಾ ಚರಿಸಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಬುಧವಾರ ಯಕ್ಷರಂಗಾಯಣ ಕೇಂದ್ರದ ಕಾರ್ಯಾಲಯ ಉದ್ಘಾಟಿಸಿ, ಮಕ್ಕಳ ಚಿಣ್ಣರ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಂಗಾಯಣ ಕೇಂದ್ರದಲ್ಲಿ ನಗರ ಮತ್ತು ಪರಿಸರದ ಮಕ್ಕಳ ಚಿಣ್ಣರ ಮೇಳವನ್ನು ಮೊದಲ ಕಾರ್ಯ ಕ್ರಮವಾಗಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಮಕ್ಕಳಿಗೂ ಮೇಳ, ತರಗತಿ ನಡೆಸ ಲಾಗುವುದು. ಹೊರಗಿನ ಮಕ್ಕಳನ್ನೂ ಸಾಂಸ್ಕೃತಿಕವಾಗಿ ಬೆಳೆಸುವ ಕಾರ್ಯ ಈ ಕೇಂದ್ರದಿಂದ ನಡೆಯಲಿದೆ.
ಯಕ್ಷ ರಂಗಾಯಣಕ್ಕೆ ಮೊದಲ ಹಂತದಲ್ಲಿ 2 ಕೋ.ರೂ. ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನುಳಿದ 3 ಕೋ.ರೂ. ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಯಕ್ಷರಂಗಾಯಣ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ರಂಗನಿರ್ದೇಶಕ ಜೀವನ್ ರಾಂ ಸುಳ್ಯ ವೇದಿಕೆಯಲ್ಲಿದ್ದರು.
ಜೂನ್ ಮೊದಲ ವಾರ 3 ಜಿಲ್ಲೆಗಳ ರಂಗಭೂಮಿ ಕಲಾವಿದರ ಸಭೆ
ರಾಜ್ಯದ ಆರನೇ ರಂಗಾಯಣ ಕೇಂದ್ರ ಉಡುಪಿ ಜಿಲ್ಲೆಯಲ್ಲಿ ಅಧಿಕೃತವಾಗಿ ಕಾರ್ಯಾರಂಭಿಸಿದೆ. ಮುಂದೆ ಯಕ್ಷರಂಗಾಯಣ ಕೇಂದ್ರವನ್ನು ಯಾವ ರೀತಿ ನಡೆಸಬೇಕು ಎನ್ನುವ ಕುರಿತು ದ.ಕ. ಉಡುಪಿ, ಉ.ಕ. ಜಿಲ್ಲೆಗಳ ಯಕ್ಷಗಾನ, ರಂಗಭೂಮಿಯ ಹಿರಿಯ ಕಿರಿಯ ಕಲಾವಿದರ ಸಮಾಲೋಚನೆ ಸಭೆಯನ್ನು ಜೂನ್ ಮೊದಲ ವಾರದಲ್ಲಿ ನಡೆಸಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಮೂರು ಜಿಲ್ಲೆಗಳ ಕಲಾ ಚಟುವಟಿಕೆ
ಯಕ್ಷರಂಗಾಯಣ ಕಾರ್ಯಾಲಯ ಉದ್ಘಾಟನೆಯ ಬಳಿಕ ಮಾತನಾ ಡಿದ ಅವರು, ಕಾರ್ಕಳದ ಯಕ್ಷರಂಗಾಯಣ ಕೇಂದ್ರವು 3 ಜಿಲ್ಲೆಗಳ ಕಲಾ ಚಟುವಟಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಯಕ್ಷಗಾನ, ನಾಟಕ ಸಹಿತ ಕಲೆ ಚಟುವಟಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯವೆಸಗಲಿದೆ. ವಿಶೇಷವಾಗಿ ಮಕ್ಕಳು, ಯುವ ಸಮೂಹವನ್ನು ಸಾಂಸ್ಕೃತಿಕವಾಗಿ ಬೆಳೆಸಿ, ಪ್ರೋತ್ಸಾಹಿಸುವ ಕಾರ್ಯ ಇಲ್ಲಿ ನಡೆಯಲಿದೆ ಎಂದರು.
ಸಚಿವರ ಪ್ರಶ್ನೆ, ಚಿಣ್ಣರ ಉತ್ತರ
ಚಿಣ್ಣರ ಮೇಳಕ್ಕೆ ಭೇಟಿ ನೀಡಿದ ಸಚಿವರು ಮಕ್ಕಳೊಂದಿಗೆ ಬೆರೆತರು. ನನ್ನ ಪರಿಚಯ ಇದೆಯಾ ಎಂದು ಪ್ರಶ್ನಿಸಿದಾಗ ಮಕ್ಕಳೆಲ್ಲರೂ “ಗೊತ್ತು ಸಾರ್ ನೀವು ಸುನಿಲ್ ಕುಮಾರ್ ಸಾರ್’ ಎಂದು ಸಾಮೂಹಿಕವಾಗಿ ಹೇಳಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.