ದೇಶದ್ರೋಹ ಕಾಯ್ದೆಯೆಂದರೇನು? ಐಪಿಸಿ ವಿಧಿ 124ಎ ಏನು ಹೇಳುತ್ತೆ?
Team Udayavani, May 12, 2022, 7:10 AM IST
ಬ್ರಿಟಿಷರ ಕಾಲದ ದೇಶದ್ರೋಹ ಕಾನೂನಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಕಾನೂನನ್ನು ಕೇಂದ್ರದ ಪರಿಶೀಲನೆಗೆ ವಹಿಸಲಾಗಿದ್ದು, ಪರಿಶೀಲನೆ ಮುಗಿಯುವವ ರೆಗೂ ಕಾನೂನನ್ನು ತಡೆ ಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಐಪಿಸಿ ವಿಧಿ 124ಎ ಏನು ಹೇಳುತ್ತೆ?
ದೇಶದ್ರೋಹ ಕಾಯ್ದೆಯನ್ನು ವಿವರಿಸುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) 124 ಎ ಎಂಬ ವಿಧಿ. “ಯಾವುದೇ ವ್ಯಕ್ತಿ ತನ್ನ ಮಾತಿ ನಿಂದ, ಬರವಣಿಗೆಯಿಂದ, ಸನ್ನೆಗಳಿಂದ ಸರಕಾರೀ ವ್ಯವಸ್ಥೆಯನ್ನು ನಿಂದಿಸಿದರೆ, ಅದರ ವಿರುದ್ಧ ದ್ವೇಷ ಹುಟ್ಟಿಸಿದರೆ ಕಾನೂನು ಪ್ರಕಾರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು’ ಎಂದು ಆ ವಿಧಿ ಹೇಳುತ್ತದೆ. ಅದರ ಜತೆಗೆ, ದೇಶದ್ರೋಹವೆಂದು ಯಾವುದನ್ನು ಪರಿಗಣಿಸಬೇಕೆಂಬ ಉಲ್ಲೇಖವೂ ಇದೆ.
1. ವ್ಯಕ್ತಿಯೊಬ್ಬರು ತಮ್ಮ ನಡವಳಿಕೆಯಿಂದ ಸರಕಾರದ ವಿರುದ್ಧ ಅವಿಧೇಯತೆ ತೋರಿದರೆ, ದ್ವೇಷ ಹುಟ್ಟಿಸಿದರೆ ಅದು ದೇಶದ್ರೋಹ.
2. ವ್ಯಕ್ತಿಯೊಬ್ಬರು ಹಿಂಸೆಗೆ ಕಾರಣವಾಗದಂತೆ ಸರಕಾರದ ಅಸಮರ್ಪಕತೆಯನ್ನು ತಿದ್ದುವಂತಹ ಮಾತನಾಡಿದರೆ ಅದು ತಪ್ಪಲ್ಲ.
3. ಹಿಂಸೆಗೆ ಕಾರಣವಾಗದಂತೆ ಸರಕಾರದ ಆಡಳಿತ ವೈಫಲ್ಯವನ್ನು, ಇತರೆ ಕ್ರಮಗಳನ್ನು ಟೀಕಿಸಿದರೆ ಅದು ತಪ್ಪಲ್ಲ.
ಹಿಂದೆ ಶಿಕ್ಷೆ ಹೇಗಿತ್ತು, ಈಗ ಹೇಗಿದೆ?
ಬ್ರಿಟಿಷ್ ಕಾಲದಲ್ಲಿ ದೇಶದ್ರೋಹ ಕಾಯ್ದೆಯಡಿ ಬಂಧಿತನಾದ ವ್ಯಕ್ತಿಯನ್ನು, ಸಾಗರೋತ್ತರವಾಗಿ ಜೀವಮಾನಪರ್ಯಂತ ಗಡೀಪಾರು ಮಾಡಲಾಗು ತ್ತಿತ್ತು. 1955ರಲ್ಲಿ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು.
ಹೋರಾಟ ಹತ್ತಿಕ್ಕಲು ರೂಪಿಸಿದ್ದು!
ದೇಶದ್ರೋಹ ಕಾಯ್ದೆ ರೂಪಿಸಿದ್ದು ಥಾಮಸ್ ಮೆಕಾಲೆ ಎಂಬ ಬ್ರಿಟಿಷ್ ಅಧಿಕಾರಿ, 1860ರಲ್ಲಿ. ಆದರೆ ಅದು ಜಾರಿಯಾಗಿದ್ದು 1890ರಲ್ಲಿ. ಅಂದಿನ ಬ್ರಿಟಿಷ್ ಸರಕಾರ ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲೆಂದೇ ಇದನ್ನು ರೂಪಿಸಿತ್ತು. ದೊಡ್ಡದೊಡ್ಡ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಕಾಯ್ದೆಯಡಿ ಬಂಧಿಸಲಾಗಿತ್ತು. 1898ರಲ್ಲಿ ಬಾಲ ಗಂಗಾಧರ ತಿಲಕ್ ಮತ್ತು ಬ್ರಿಟನ್ ರಾಣಿ ನಡುವಿನ ಕಾನೂನು ಹೋರಾಟ ಇದರಲ್ಲಿ ಮಹತ್ವದ್ದು.
ಕೇದಾರನಾಥ ವರ್ಸಸ್ ಬಿಹಾರ ಸರಕಾರ: 1962ರಲ್ಲಿ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂತು. ಆಗ ಐಪಿಸಿ “124 ಎ’ ಕಾನೂನನ್ನು ನ್ಯಾಯಪೀಠ ಎತ್ತಿಹಿಡಿ ಯಿತು. ಅದರ ಜತೆಯಲ್ಲೇ ಹಿಂಸೆಗೆ ಪ್ರಚೋದನೆ ನೀಡದ ಪ್ರಕರಣಗಳು ದೇಶದ್ರೋಹ ಅಲ್ಲವೆಂದೂ ಸ್ಪಷ್ಟಪಡಿಸಿತು.
ಎಷ್ಟು ಪ್ರಕರಣ?
(2010 -2020)
ರಾಜ್ಯ ಸಂಖ್ಯೆ
ಬಿಹಾರ 168
ತ.ನಾಡು 139
ಉತ್ತರಪ್ರದೇಶ 115
ಜಾರ್ಖಂಡ್ 62
ಕರ್ನಾಟಕ 50
ಒಡಿಸ್ಸಾ 30
ಹರಿಯಾಣ 29
ಜಮ್ಮುಕಾಶ್ಮೀರ 26
ಪ.ಬಂಗಾಲ 22
ಪಂಜಾಬ್ 21
ಗುಜರಾತ್ 17
ಹಿಮಾಚಲ 15
ದಿಲ್ಲಿ 14
ಲಕ್ಷದ್ವೀಪ 14
ಕೇರಳ 14
326 ಪ್ರಕರಣ
2014ರಿಂದ 2019ರ ನಡುವೆ ಭಾರತದಲ್ಲಿ 326 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ
6 ಮಂದಿಗೆ ಶಿಕ್ಷೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.