ಐಪಿಎಲ್ ಟೈ ಮ್ಯಾಚ್-03: ಆರ್‌ಸಿಬಿ ವಿರುದ್ಧ ಮಿಂಚಿದ ಹೈದರಾಬಾದ್
Team Udayavani, May 12, 2022, 4:45 AM IST
2013ರ ಐಪಿಎಲ್ ಎರಡು ಟೈ ಪಂದ್ಯಗಳಿಗೆ ಸಾಕ್ಷಿಯಾಯಿತು. ಎರಡರಲ್ಲೂ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಕಾಣಿಸಿಕೊಂಡದ್ದೊಂದು ವಿಶೇಷ. ಮೊದಲ ಸೂಪರ್ ಓವರ್‌ನಲ್ಲಿ ಸೋತ ಬೆಂಗಳೂರು ತಂಡ, ಇನ್ನೊಂದರಲ್ಲಿ ಜಯ ಸಾಧಿಸಿತು.
2013ರ ಸಾಲಿನ ಮೊದಲ ಟೈ ಪಂದ್ಯ ನಡೆದದ್ದು ಆರ್‌ಸಿಬಿ-ಹೈದರಾಬಾದ್ ನಡುವೆ. ಸ್ಥಳ ಹೈದರಾಬಾದ್‌ನ “ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂ’. ಇದರಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಪಡೆ 8 ವಿಕೆಟಿಗೆ 130 ರನ್ ಗಳಿಸಿದರೆ, ಕುಮಾರ ಸಂಗಕ್ಕರ ಬಳಗ 7 ವಿಕೆಟಿಗೆ 130 ರನ್ ಮಾಡಿತು. ಬಳಿಕ ಸೂಪರ್ ಓವರ್‌ನಲ್ಲಿ ಅದೃಷ್ಟವನ್ನು ತೆರೆದಿಟ್ಟಿತು.
ಅಂತಿಮ ಓವರ್, 7 ರನ್
ಪಂದ್ಯ ಅಂತಿಮ ಓವರ್ ತಲಪುವಾಗ ಹೈದರಾಬಾದ್ ಜಯಕ್ಕೆ ಕೇವಲ 7 ರನ್ ಅಗತ್ಯವಿತ್ತು. ಬೌಲರ್ ವಿನಯ್ ಕುಮಾರ್. ಕ್ರೀಸ್‌ನಲ್ಲಿದ್ದವರು ಹನುಮ ವಿಹಾರಿ ಮತ್ತು ಆಶಿಷ್ ರೆಡ್ಡಿ. ವಿಹಾರಿ ಆಗಲೇ 44 ಎಸೆತಗಳಿಂದ 42 ರನ್ ಬಾರಿಸಿ ಸೆಟ್ಲ ಆಗಿದ್ದರು. ಹೀಗಾಗಿ ಹೈದರಾಬಾದ್ ಮುಂದೆ ಗೆಲುವಿನ ಅವಕಾಶ ಹೆಚ್ಚಿತ್ತು. ಆದರೆ ಕೊನೆಯಲ್ಲಿ ಸಂಭವಿಸಿದ್ದೇ ಬೇರೆ.
ವಿನಯ್ ಕುಮಾರ್ ಮೊದಲ ಎಸೆತದಲ್ಲೇ ಆಶಿಷ್ ರೆಡ್ಡಿ (14) ವಿಕೆಟ್ ಉಡಾಯಿಸಿದರು. ಅನಂತರ ಕ್ರೀಸ್ ಇಳಿದ ಡೇಲ್ ಸ್ಟೇನ್ ತಾನೆದುರಿಸಿದ ಮೊದಲ ಎಸೆತದಲ್ಲಿ 2 ರನ್ ತೆಗೆದರು. ಮೂರನೆಯದು ಡಾಟ್ ಬಾಲ್. 4ನೇ ಎಸೆತದಲ್ಲಿ ಸಿಂಗಲ್ ಸಿಕ್ಕಿತು.
2 ಎಸೆತಗಳಿಂದ 4 ರನ್. ಇದು ಇಕ್ವೇಶನ್. 5ನೇ ಎಸೆತ ಎದುರಿಸಿದವರು ವಿಹಾರಿ. ಇದರಲ್ಲಿ 2 ರನ್ ಸಿಕ್ಕಿತು. ಕೊನೆಯ ಎಸೆತದಲ್ಲೂ 2 ರನ್ ಅಗತ್ಯ ಬಿತ್ತು. ಎಲ್ಲರೂ ಸೀಟಿನ ತುದಿಯಲ್ಲಿ ಕುಳಿತಿದ್ದರು!
ಇದೊಂದು ನಿಧಾನ ಗತಿಯ ಎಸೆತವಾಗಿತ್ತು. ಹನುಮ ವಿಹಾರಿ ಅವರನ್ನು ವಂಚಿಸಿತು. ಆದರೆ ಕಣ್ಮುಚ್ಚಿಕೊಂಡು ಒಂದು ರನ್ನಿಗಾಗಿ ಓಡಿದರು. ಬೈ ರನ್ ಸಿಕ್ಕಿಯೇ ಬಿಟ್ಟಿತು; ಪಂದ್ಯ ಟೈ ಆಯಿತು!
ಸೂಪರ್ ಓವರ್
ವಿನಯ್ ಕುಮಾರ್ ಅಲ್ಲೇನೋ ಯಶಸ್ವಿಯಾದರು. ಆದರೆ ಸೂಪರ್ ಓವರ್‌ನಲ್ಲಿ ದುಬಾರಿಯಾದರು. ಕ್ಯಾಮರಾನ್ ವೈಟ್ ಸಿಡಿದು ನಿಂತರು. ಹೈದರಾಬಾದ್ 20 ರನ್ ಬಾಚಿತು.
ಹೈದರಾಬಾದ್ ಪರ ಸೂಪರ್ ಓವರ್ ಎಸೆದವರು ಡೇಲ್ ಸ್ಟೇನ್. ಬ್ಯಾಟರ್ ಗೇಲ್ ಮತ್ತು ಕೊಹ್ಲಿ. 5 ಎಸೆತಗಳಿಂದ 14 ರನ್ ಬಂತು.
ಅಂತಿಮ ಎಸೆತದಲ್ಲಿ ಸಿಕ್ಸರ್ ಅನಿವಾರ್ಯವಾಯಿತು. ಆಗ ಸೂಪರ್ ಓವರ್ ಕೂಡ ಟೈ ಆಗುತ್ತಿತ್ತು. ಆದರೆ ಗೇಲ್ ವಿಫಲರಾದರು. ಅವರಿಗೆ ಗಳಿಸಲು ಸಾಧ್ಯವಾದದ್ದು ಒಂದೇ ರನ್. ಹೀಗೆ ಆತಿಥೇಯ ಸನ್‌ರೈಸರ್ ಹೈದರಾಬಾದ್ ಸೂಪರ್ ಪ್ರದರ್ಶನ ನೀಡಿ ಗೆದ್ದು ಬಂದಿತು.
ಸ್ಕೋರ್ ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ಕ್ರಿಸ್ ಗೇಲ್ ಸಿ ಪಟೇಲ್ ಬಿ ವಿಹಾರಿ 1
ತಿಲಕರತ್ನೆ ದಿಲ್ಶನ್ ಬಿ ಇಶಾಂತ್ 5
ವಿರಾಟ್ ಕೊಹ್ಲಿ ಸಿ ಮತ್ತು ಬಿ ರೆಡ್ಡಿ 46
ಕರುಣ್ ನಾಯರ್ ಎಲ್‌ಬಿಡಬ್ಲ್ಯು ಮಿಶ್ರಾ 9
ಮೊಸಸ್ ಹೆನ್ರಿಕ್ಸ್ ಸಿ ವೈಟ್ ಬಿ ಇಶಾಂತ್ 44
ಅಗರ್ವಾಲ್ ಸಿ ಅಂಕಿತ್ ಬಿ ಸ್ಟೇನ್ 7
ಅರುಣ್ ಕಾರ್ತಿಕ್ ಸಿ ರೆಡ್ಡಿ ಬಿ ಪೆರೆರ 0
ವಿನಯ್ ಕುಮಾರ್ ಸಿ ಸಂಗಕ್ಕರ ಬಿ ಇಶಾಂತ್ 7
ಮುರಳಿ ಕಾರ್ತಿಕ್ ಔಟಾಗದೆ 2
ಜೈದೇವ್ ಉನಾದ್ಕತ್ ಔಟಾಗದೆ 1
ಇತರ 8
ಒಟ್ಟು (8 ವಿಕೆಟಿಗೆ) 130
ವಿಕೆಟ್ ಪತನ: 1-8, 2-22, 3-42, 4-85, 5-108, 6-114, 7-125, 8-127.
ಬೌಲಿಂಗ್:
ಡೇಲ್ ಸ್ಟೇನ್ 4-0-37-1
ಹನುಮ ವಿಹಾರಿ 1-0-5-1
ಇಶಾಂತ್ ಶರ್ಮ 4-0-27-3
ಅಂಕಿತ್ ಶರ್ಮ 2-0-17-0
ತಿಸರ ಪೆರೆರ 4-0-21-1
ಅಮಿತ್ ಮಿಶ್ರಾ 4-0-15-1
ಆಶಿಷ್ ರೆಡ್ಡಿ 1-0-7-1
ಸನ್‌ರೈಸರ್ ಹೈದರಾಬಾದ್
ಅಕ್ಷತ್ ರೆಡ್ಡಿ ಬಿ ಮುರಳೀಧರನ್ 23
ಪಾರ್ಥಿವ್ ಪಟೇಲ್ ಸಿ ಕಾರ್ತಿಕ್ ಬಿ ಹೆನ್ರಿಕ್ಸ್ 2
ಕ್ಯಾಮರಾನ್ ವೈಟ್ ಸಿ ಮುರಳಿ ಬಿ ಹೆನ್ರಿಕ್ಸ್ 5
ಹನುಮ ವಿಹಾರಿ ಔಟಾಗದೆ 44
ಕುಮಾರ ಸಂಗಕ್ಕರ ಸಿ ಕಾರ್ತಿಕ್ ಬಿ ಉನಾದ್ಕತ್ 16
ತಿಸರ ಪೆರೆರ ಸಿ ಹೆನ್ರಿಕ್ಸ್ ಬಿ ಉನಾದ್ಕತ್ 7
ಅಮಿತ್ ಮಿಶ್ರಾ ರನೌಟ್ 0
ಆಶಿಷ್ ರೆಡ್ಡಿ ಸಿ ಕೊಹ್ಲಿ ಬಿ ವಿನಯ್ 14
ಡೇಲ್ ಸ್ಟೇನ್ ಔಟಾಗದೆ 3
ಇತರ 16
ಒಟ್ಟು (7 ವಿಕೆಟಿಗೆ) 130
ವಿಕೆಟ್ ಪತನ: 1-4, 2-20, 3-48, 4-81, 5-98, 6-101, 7-124.
ಬೌಲಿಂಗ್:
ಜೈದೇವ್ ಉನಾದ್ಕತ್ 4-0-24-2
ಮೊಸಸ್ ಹೆನ್ರಿಕ್ಸ್ 3-0-14-2
ಮುರಳಿ ಕಾರ್ತಿಕ್ 4-0-27-0
ವಿನಯ್ ಕುಮಾರ್ 4-0-27-1
ಮುತ್ತಯ್ಯ ಮುರಳೀಧನ್ 4-0-18-1
ತಿಲಕರತ್ನೆ ದಿಲ್ಶನ್ 1-0-10-0
ಪಂದ್ಯಶ್ರೇಷ್ಠ: ಹನುಮ ವಿಹಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.