ವಿದ್ಯಾರ್ಥಿಗಳ ಕೊರತೆ: ಮುಚ್ಚಿದ ಸರ್ಕಾರಿ ಶಾಲೆ

10 ವರ್ಷದಲ್ಲಿ 30ಕ್ಕೂ ಹೆಚ್ಚು ಶಾಲೆ ಬಂದ್‌

Team Udayavani, May 12, 2022, 2:06 PM IST

school

ಶೃಂಗೇರಿ: ತಾಲೂಕಿನ ಸರಕಾರಿ ಶಾಲೆಯಲ್ಲಿ ಕಟ್ಟಡಗಳು ಬಹುತೇಕ ಸುಸ್ಥಿತಿಯಲ್ಲಿದ್ದು, ಶಿಕ್ಷಕರ ಕೊರತೆ ಹಾಗೂ ಸಾರಿಗೆ ವ್ಯವಸ್ಥೆ ಪೋಷಕರನ್ನು ಚಿಂತೆಗೀಡುಮಾಡಿದೆ.

ಕಿರಿಯ ಪ್ರಾಥಮಿಕ ಪಾಠಶಾಲೆ 12 ಹಾಗೂ ಹಿರಿಯ ಪ್ರಾಥಮಿಕ ಶಾಲೆ 34 ಇದ್ದು, ಪ್ರಾಥಮಿಕ ಶಾಲೆಗೆ 35 ಹಾಗೂ ಮಾಧ್ಯಮಿಕ ಶಾಲೆಯಲ್ಲಿ 10 ಶಿಕ್ಷಕರ ಕೊರತೆ ಇದೆ. ಅನೇಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗಿದ್ದು, ಬೆರಳೆಣಿಕೆಯ ಮಕ್ಕಳು ಶಾಲೆಯಲ್ಲಿದ್ದಾರೆ. ಕಳೆದ 10 ವರ್ಷದಲ್ಲಿ 30ಕ್ಕೂ ಹೆಚ್ಚು ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದೆ.

ಶಾಲೆಗಳಲ್ಲಿ ಕೆಲ ಕೊಠಡಿಗಳ ದುರಸ್ತಿ ಇದ್ದರೂ, ಪಾಠ ಪ್ರವಚನಕ್ಕೆ ಅಡ್ಡಿಯಾಗುವಷ್ಟು ಸಮಸ್ಯೆ ಇಲ್ಲ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರ ಸಹಾಯ ಪಡೆದು, ಅವರ ವೇತನವನ್ನು ದಾನಿಗಳಿಂದ ಪಡೆದು ನೀಡಲಾಗುತ್ತಿದೆ. ಬಹುತೇಕ ಶಿಕ್ಷಕರು ಹೊರ ಜಿಲ್ಲೆಯವರಾಗಿದ್ದು, ಬಂದ ಕಲವೇ ವರ್ಷದಲ್ಲಿ ವರ್ಗಾವಣೆ ಮಾಡಿಸಿಕೊಂಡು ಊರಿನ ಸಮೀಪ ತೆರಳುವುದರಿಂದ ಮಲೆನಾಡು ಭಾಗಕ್ಕೆ ಶಿಕ್ಷಕರ ಕೊರತೆ ಸಾಮಾನ್ಯವಾಗಿದೆ. ಸರ್ವ ಶಿಕ್ಷಾ ಅಭಿಯಾನ ಮತ್ತು ಸರಕಾರದ ಅನುದಾನದಡಿ ಬಹುತೇಕ ಮೂಲಭೂತ ಸೌಲಭ್ಯವನ್ನು ಹೊಂದಿದೆ.

ಸಾರಿಗೆ ವ್ಯವಸ್ಥೆ-ತಾಲೂಕಿನ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾಗಿದೆ. ಖಾಸಗಿ ಶಾಲೆಯಂತೆ ಮೆಣಸೆ ಸರಕಾರಿ ಶಾಲೆಯು ಸರಕಾರಿ ಬಸ್‌ ಸೇವೆ ನೀಡುತ್ತಿದ್ದು, ಇದರಿಂದ ಶಾಲೆಯಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಖಾಸಗಿ ಶಾಲೆಯ ಸಾರಿಗೆ ವ್ಯವಸ್ಥೆ-ತಾಲೂಕಿನ ಖಾಸಗಿ ಶಾಲೆಗಳು ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಂಡಿದ್ದು, ಮಕ್ಕಳನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿಕೊಂಡಿದೆ. ಇದಲ್ಲದೇ ಕೊಪ್ಪದ ಖಾಸಗಿ ಶಾಲಾ ಬಸ್‌ ತಾಲೂಕಿನಿಂದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದೆ. ಖಾಸಗಿ ಶಾಲೆಯತ್ತ ಮನಸ್ಸು ಮಾಡುತ್ತಿರುವ ಪೋಷಕರು ಸಾರಿಗೆ ವ್ಯವಸ್ಥೆಯೂ ಇರುವತ್ತ ಹೆಚ್ಚು ಗಮನ ಹರಿಸಿದ್ದಾರೆ.

ಮುಚ್ಚಿರುವ ಶಾಲೆಗಳ ದುಸ್ಥಿತಿ

ಈಗಾಗಲೇ 30 ಕ್ಕೂ ಹೆಚ್ಚು ಶಾಲೆ ಮುಚ್ಚಿದ್ದರೆ, ಇನ್ನಷ್ಟು ಶಾಲೆ ಮುಚ್ಚುವ ಹಂತ ತಲುಪಿದೆ. ಶಾಲೆ ಮುಚ್ಚಿದ ನಂತರ ನಿರ್ವಹಣೆಯನ್ನು ಗ್ರಾಪಂಗೆ ನೀಡುತ್ತಿದೆ. ಮುಚ್ಚಿದ ಶಾಲೆ ನಿರ್ವಹಣೆ ಮಾಡದೇ ಮೇಲ್ಛಾವಣಿ ಕುಸಿಯುತ್ತಿದ್ದು, ಕಿಟಕಿ ಬಾಗಿಲು ಗೆದ್ದಲು ಹಿಡಿಯುತ್ತಿದೆ.

ಸರಕಾರದ ಆದೇಶದಂತೆ ಶಾಲೆಯನ್ನು ಆರಂಭಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ತಾಲೂಕಿನ ಎಲ್ಲಾ ಶಾಲೆ ಬಹುತೇಕ ಸುಸ್ಥಿತಿಯಲ್ಲಿದ್ದು, ಸಣ್ಣಪುಟ್ಟ ರಿಪೇರಿಯನ್ನು ಶಾಲೆಯ ಸಮಿತಿ ನಿರ್ವಹಣೆ ಮಾಡಲಿದೆ. 45 ಶಿಕ್ಷಕರ ಕೊರತೆ ಇದೆ. -ಎನ್‌.ಜಿ. ರಾಘವೇಂದ್ರ, ಬಿಇಒ, ಶೃಂಗೇರಿ.

ಗ್ರಾಮೀಣ ಪ್ರದೇಶದಿಂದ ಶಾಲಾ, ಕಾಲೇಜಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಕಲಿಕೆಗೆ ಹಿನ್ನಡೆಯಾಗಿದೆ. ಸೀಮಿತವಾಗಿರುವ ಬಸ್‌ ಅಥವಾ ಸಮಯಕ್ಕೆ ಸರಿಯಾದ ಬಸ್‌ ಇಲ್ಲದೇ, ಖಾಸಗಿ ವಾಹನವನ್ನು ಅವಲಂಬಿಸಬೇಕಾಗಿದೆ. ಗ್ರಾಮೀಣ ಪ್ರದೇಶಕ್ಕೆ ಸರಕಾರ ಸಾರಿಗೆ ವವ್ಯಸ್ಥೆ ಕಲ್ಪಿಸಬೇಕು. -ರಾಜಕುಮಾರ್‌, ಕೆಲವಳ್ಳಿ ಶೃಂಗೇರಿ

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

13-kudremukh-1

Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ

1-ckm

Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

12

Mudigere: ನೇಣು ಬಿಗಿದುಕೊಂಡು‌ ಆತ್ಮಹ*ತ್ಯೆಗೆ ಶರಣಾದ ಸರ್ವೇ ಅಧಿಕಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.