![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 13, 2022, 9:19 AM IST
ಬಂಟ್ವಾಳ: ಪಟ್ಟಣವಾಗಿ ಬೆಳೆಯುತ್ತಿರುವ ಫರಂಗಿಪೇಟೆಯು ಪುದು ಗ್ರಾ.ಪಂ. ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿನ ಪೇಟೆಯ ಚರಂಡಿ ವ್ಯವಸ್ಥೆಯು ಸಂಪೂರ್ಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ವ್ಯಾಪ್ತಿಗೆ ಬರುತ್ತಿದ್ದರೂ ಅದರ ನಿರ್ವಹಣೆ ಮಾತ್ರ ಗ್ರಾ.ಪಂ.ನ ಹೆಗಲ ಮೇಲಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ.ನಿಂದಲೇ ಚರಂಡಿಯ ಹೂಳು ತೆಗೆಯುವ ಕಾರ್ಯ ಮಾಡಲಾಗಿದೆ.
ಫರಂಗಿಪೇಟೆಯು ಪುದು ಗ್ರಾಮದ ಮಾರಿಪಳ್ಳದಿಂದ ಮಂಗಳೂರಿನ ಅಡ್ಯಾರು ಗ್ರಾಮದ ಅರ್ಕುಳದವರೆಗೆ ವಿಸ್ತರಿಸಿ ಕೊಂಡಿದ್ದು, ಈ ಪ್ರದೇಶವು ಮಂಗಳೂರು- ಬೆಂಗಳೂರು ರಾ.ಹೆ. 75ರ ವ್ಯಾಪ್ತಿಗೆ ಬರುತ್ತದೆ. ಈ ಭಾಗದಲ್ಲಿ ಯಾವುದೇ ಚಟುವಟಿಕೆ ನಡೆಸಬೇಕಾದರೂ, ಎನ್ ಎಚ್‌ಎಐನ ಅನುಮತಿ ಅಗತ್ಯವಾಗಿದೆ. ಆದರೆ ಅಲ್ಲಿನ ಚರಂಡಿ ನಿರ್ವಹಣೆಯನ್ನು ಎನ್‌ಎಚ್‌ಎಐ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಗ್ರಾ.ಪಂ. ವತಿಯಿಂದ ಫರಂಗಿಪೇಟೆ ಸೇರಿದಂತೆ ಮಾರಿಪಳ್ಳ ಭಾಗದಲ್ಲಿ ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆದು ದುರಸ್ತಿ ಮಾಡಲಾಗಿದೆ. ಚರಂಡಿಯಲ್ಲಿ ಹೂಳು ತುಂಬಿದ್ದ ತತ್‌ಕ್ಷಣ ಗ್ರಾಮಸ್ಥರು ಗ್ರಾ.ಪಂ.ಗೆ ಒತ್ತಡ ಹೇರುತ್ತಿದ್ದು, ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಚರಂಡಿಯ ಹೂಳು ತೆಗೆದು ದುರಸ್ತಿ ಮಾಡಿ ಕೊಡುವುದು ಅನಿವಾರ್ಯ ಎಂದು ಗ್ರಾ.ಪಂ. ಪ್ರಮುಖರು ಹೇಳುತ್ತಾರೆ.
ನರೇಗಾದಿಂದ ಹೂಳು ತೆರವು
ಪುದು ಗ್ರಾಮದ ಇತರ ಭಾಗಗಳಲ್ಲೂ ಮಳೆಗಾಗಿ ಸಿದ್ಧತೆ ಕಾರ್ಯ ಮಾಡ ಲಾಗಿದ್ದು, ಮುಖ್ಯವಾಗಿ ನೀರು ಹರಿ ಯುವ ಬೃಹತ್ ತೋಡುಗಳನ್ನು ಸ್ಥಳೀಯ ಕೃಷಿಕರೇ ಉದ್ಯೋಗ ಖಾತರಿ ಯೋಜನೆಯ ಮೂಲಕ ಹೂಳು ತೆಗೆ ಯುವ ಕಾರ್ಯ ಮಾಡಿದ್ದಾರೆ. ಇತರ ಕಡೆ ಆದ್ಯತೆಯ ಮೇರೆಗೆ ಹೂಳು ತೆಗೆ ಯುವ ಕಾರ್ಯ ಮಾಡಲಾಗಿದೆ. ಉಳಿ ದಂತೆ ಇತರ ಭಾಗಗಳಲ್ಲಿ ಹೂಳು ತೆಗೆಯು ವುದು ಅನಿವಾರ್ಯವಾದರೆ ಆ ಕಾರ್ಯ ಮಾಡುವುದಾಗಿ ಗ್ರಾಮ ಪಂಚಾಯತ್ ಮೂಲಗಳು ತಿಳಿಸಿದೆ.
ದೂರು-ಮನವಿಗೂ ಸ್ಪಂದನೆ ಇಲ್ಲ
ಪುದು ಗ್ರಾ.ಪಂ.ನಿಂದ ನೀಡುವ ಮನವಿ, ಸೂಚನೆಗಳಿಗೆ ಎನ್‌ಎಚ್‌ಎಐ ಸ್ಪಂದನೆ ನೀಡುತ್ತಿಲ್ಲ ಎಂಬುದು ಗ್ರಾ.ಪಂ.ನ ಆರೋಪ. ಈ ಹಿಂದೆ ಅರ್ಧಂಬರ್ಧ ನಿರ್ಮಿಸಲ್ಪಟ್ಟಿದ್ದ ಚರಂಡಿಯ ಕುರಿತು ದೂರು ನೀಡಿದಾಗಲೂ ಸ್ಪಂದನೆ ಸಿಕ್ಕಿಲ್ಲ. ಜತೆಗೆ ಚರಂಡಿಯ ಹೂಳು ತೆಗೆಯಲು ಮನವಿ ಮಾಡಿ ಸ್ಪಂದನೆ ಸಿಗದೇ ಇರುವ ಕಾರಣ ನಾವೇ ಹೂಳು ತೆಗೆಯುತ್ತಿದ್ದೇವೆ ಎಂಬುದು ಗ್ರಾ.ಪಂ.ನ ವಾದ.
ಗ್ರಾ.ಪಂ.ನಿಂದ ನಿರ್ವಹಣೆ
ಫರಂಗಿಪೇಟೆ ಸೇರಿದಂತೆ ನಮ್ಮ ಗ್ರಾಮ ವ್ಯಾಪ್ತಿಯ ಚರಂಡಿ ದುರಸ್ತಿಯ ಕಾರ್ಯವನ್ನು ಪ್ರತಿವರ್ಷ ಗ್ರಾ.ಪಂ.ನಿಂದಲೇ ಮಾಡುತ್ತೇವೆ. ಎನ್‌ಎಚ್‌ಎಐನವರಿಗೆ ಸೂಚಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಫರಂಗಿಪೇಟೆಯ ಮಧ್ಯದ ಡಿವೈಡರ್ ಮುಚ್ಚಿ 2 ಕಡೆ ತೆರವು ಮಾಡುವ ಮನವಿಗೂ ಅವರು ಯಾವುದೇ ಸ್ಪಂದನೆ ನೀಡಿಲ್ಲ. ಇದೀಗ ಚರಂಡಿ ದುರಸ್ತಿ ಕಾರ್ಯ ಮಾಡಲಾಗಿದೆ. –ರಮ್ಲಾನ್ ಮಾರಿಪಳ್ಳ, ಅಧ್ಯಕ್ಷರು, ಗ್ರಾ.ಪಂ. ಪುದು
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.