ಚಂದ್ರನ ಮೇಲೆ ಕೃಷಿ ಸಾಧ್ಯ; ಫ್ಲೋರಿಡಾ ವಿವಿ ವಿಜ್ಞಾನಿಗಳಿಂದ ಹೊಸ ಸಾಧನೆ
Team Udayavani, May 14, 2022, 6:50 AM IST
ವಾಷಿಂಗ್ಟನ್: ಚಂದ್ರನ ಮೇಲೆ ಕೃಷಿ ಮಾಡಬಹುದೇ ಎನ್ನುವ ಪ್ರಶ್ನೆಗೆ ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಉತ್ತರ ಹುಡುಕಿದ್ದಾರೆ.
ಶತಮಾನಗಳ ಹಿಂದೆ ಚಂದ್ರನಿಂದ ಭೂಮಿಗೆ ತರಲಾಗಿದ್ದ ಮಣ್ಣಿನಲ್ಲಿ ಅವರು ಸಸಿಗಳನ್ನು ಬೆಳೆದು ತೋರಿಸಿದ್ದಾರೆ.
1969ರಲ್ಲಿ ನಡೆದ ಅಪೋಲೊ 11, 12 ಮಿಷನ್ ಹಾಗೂ 1972ರಲ್ಲಿ ನಡೆದ ಅಪೋಲೊ 17 ಮಿಷನ್‌ನಲ್ಲಿ ಚಂದ್ರನಿಂದ ಸಂಗ್ರಹಿಸಿಕೊಂಡು ಭೂಮಿಗೆ ತರಲಾಗಿದ್ದ ಚಂದ್ರನ ಮಣ್ಣು (ರೆಗೋಲಿತ್)ನಲ್ಲಿ ವಿಜ್ಞಾನಿಗಳು ಸಸಿ ಬೆಳೆಸಿದ್ದಾರೆ.
ಒಂದೊಂದು ಗ್ರಾಂ ರೆಗೋಲಿತ್‌ನ ಪ್ರತ್ಯೇಕ ವಿಭಾಗವನ್ನು ಮಾಡಿಕೊಂಡು ಅದಕ್ಕೆ ಹೂಕೋಸು ಮತ್ತು ಎಲೆಕೋಸಿನ ಜಾತಿಯದ್ದಾಗಿರುವ ಅರಬಿಡೋಪ್ಸಿಸ್ ಥಾಲಿಯಾನ ಗಿಡದ ಬೀಜಗಳನ್ನು ಹಾಕಲಾಯಿತು. ಬೀಜ ಮತ್ತು ರೆಗೋಲಿತ್ ಹೊತ್ತಿದ್ದ ತಟ್ಟೆಗಳನ್ನು ಸ್ವಚ್ಛ ಕೋಣೆಯೊಂದರಲ್ಲಿ ಇರಿಸಲಾಯಿತು. ಅದಕ್ಕೆ ನೀರಿನ ಜೊತೆ ಪೌಷ್ಠಿಕಾಂಶದ ದ್ರಾವಣವನ್ನು ಸೇರಿಸಲಾಯಿತು. ಎರಡೇ ದಿನಗಳಲ್ಲಿ ಬೀಜಗಳೊಡೆದು ಮೊಳಕೆಯಾಯಿತು.
ಕೇವಲ ಇಪತ್ತೇ ದಿನಗಳಲ್ಲಿ ಸಸಿಗಳನ್ನು ಕೊಯ್ದು ಅವುಗಳ ಆರ್‌ಎನ್‌ಎ ಅಧ್ಯಯನ ಮಾಡಲಾಗಿದೆ. ಅದರಲ್ಲಿ ಸಸಿಗಳು ಒತ್ತಡದ ವಾತಾವರಣದಲ್ಲಿ ಬೆಳೆದಿರುವುದು ಗೊತ್ತಾಗಿದೆ. ಭೂಮಿಯ ಮಣ್ಣಿನಷ್ಟು ಫಲವತ್ತಾದ ಮಣ್ಣು ಚಂದ್ರನದ್ದಲ್ಲವಾದ್ದರಿಂದ ಗಿಡಗಳ ಬೆಳವಣಿಗೆ ಕಷ್ಟವೇ.
ಆದರೆ ಚಂದ್ರನಲ್ಲೂ ಕೃಷಿ ಸಾಧ್ಯ ಎನ್ನುವುದು ಈ ಪ್ರಯೋಗದಿಂದ ತಿಳಿದುಬಂದಿದೆ ಎಂದಿದ್ದಾರೆ ಈ ಸಂಶೋಧನೆಯ ತಂಡದಲ್ಲಿದ್ದ ವಿಜ್ಞಾನಿ ಹಾಗೂ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಅನ್ನಾ ಲಿಸಾ ಪಾಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.