ಜನರಿಗೆ ಭರವಸೆ ಇರುವುದು ಬಿಜೆಪಿ ಮತ್ತು ಮೋದಿ ಮೇಲೆ ಮಾತ್ರ; ಸಚಿವ ಸುನಿಲ್ ಕುಮಾರ್
Team Udayavani, May 14, 2022, 12:31 PM IST
ದಾವಣಗೆರೆ: ಕಾಂಗ್ರೆಸ್ ನವರು ನಾಯಕರಿಲ್ಲದೆ ಅನಾಥವಾದ ಕೋಣೆಯಲ್ಲಿದ್ದಾರೆ. ಕಾರ್ಯಕರ್ತರು, ನಾಯಕರು ಕೂಡ ಅನಾಥರಾಗಿದ್ದಾರೆ. ಇವತ್ತು ರಾಜ್ಯದ ಜನರಿಗೆ ಭರವಸೆಯಿದ್ದರೆ ಅದು ಬಿಜೆಪಿ ಹಾಗೂ ಮೋದಿಯವರ ಮೇಲೆ ಮಾತ್ರ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಹತ್ತು ಸುಳ್ಳು ಹೇಳಿ ಅದನ್ನು ನಿಜವೆಂದು ಮಾಡಲು ಹೋಗುತ್ತಿದ್ದಾರೆ. ಕಾಂಗ್ರೆಸ್ ನಲ್ಲೇ ಎಲ್ಲಾ ಭ್ರಷ್ಟಾಚಾರಿಗಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು, ರಾಜ್ಯ ಅಧ್ಯಕ್ಷರವರೆಗೂ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ನಮ್ಮ ಮೇಲೆ ಅರೋಪ ಮಾಡುತ್ತಾರೆಂದರೆ ನೀವೇ ಯೋಚಿಸಿ. ಮೋದಿ ನವ ಭಾರತದ ನಿರ್ಮಾಣಕ್ಕೆ ಹೊರಟರೆ, ಬೊಮ್ಮಾಯಿ ನವ ಕರ್ನಾಟಕ ನಿರ್ಮಾಣಕ್ಕೆ ಹೊರಟಿದ್ದಾರೆ ಎಂದರು.
ಸಚಿವ ಸಂಪುಟದ ವಿಸ್ತರಣೆ ಪುನರಾಚನೆ ಮುಖ್ಯ ಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಒಳಿತಾಗುವ ನಿರ್ಣಯವನ್ನು ತೆಗೆದು ಕೊಳ್ಳುತ್ತಿದ್ದಾರೆ. ಕಳೆದ ಏಳು ತಿಂಗಳಲ್ಲಿ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ದೂರದೃಷ್ಟಿ ಇಟ್ಟುಕೊಂಡ ನಾಯಕರವರು, ಯಾವ ಸಮಯಕ್ಕೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿದೆ ಎಂದರು.
ಆರ್ ಎಸ್ಎಸ್ ಮೂಲದವರಿಗೆ ಸಚಿವ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ನನ್ನನ್ನು ಚುನಾವಣೆಗೆ ನಿಲ್ಲಿಸಿ ಸಚಿವರನ್ನಾಗಿ ಮಾಡಿದೆ. ಮುಂದೆ ಕೂಡ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಸಿದ್ದರಿದ್ದೇವೆ. ಇದರಲ್ಲಿ ಬೇರೆ ಬೇರೆ ವಿಚಾರ ಪ್ರಸ್ತಾಪವಿಲ್ಲ ಎಂದರು.
ಇದನ್ನೂ ಓದಿ:ವಲಸೆ ತಡೆಗೆ ‘ಕೈ’ಕಮಾಂಡ್ ಸೂಚನೆ; ಆತಂಕ ತಂದ ಕಮಲ ಪಕ್ಷದ ತಂತ್ರ
ಸಚಿವ ಸ್ಥಾನಕ್ಕೆ 60 ,100 ಕೋಟಿ ನೀಡುತ್ತಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪಕ್ಷ ನಮಗೆ ಕೊಟ್ಟಿದೆ ವಿನಃ ನಾವು ಪಕ್ಷಕ್ಕೆ ಏನು ಕೊಟ್ಟಿಲ್ಲ. ವಿಚಾರಕ್ಕೆ ಆದ್ಯತೆ ವಿನಃ ಹಣಕ್ಕೆ ಆದ್ಯತೆ ಇಲ್ಲ. ಬೊಮ್ಮಾಯಿ ನೇತೃತ್ವದಲ್ಲಿ ನಾವು ಮುಂದಿನ ಚುನಾವಣೆಗೆ ಹೋಗುತ್ತೇವೆ. ಒಳ್ಳೆಯ ಬಜೆಟ್ ನೀಡಿ, 180 ಯೋಜನೆಗಳಿಗೆ ಜೀವವನ್ನು ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ನಿರಂತರ ಜ್ಯೋತಿ ಅಕ್ರಮ ಪ್ರಕರಣ ಕುರಿತು ಮಾತನಾಡಿದ ಸಚಿವರು, ಹರಿಹರ ತಾಲೂಕಿನ ಎರಡು ಫೀಡರ್ ಗಳಲ್ಲಿ ತನಿಖೆ ನಡೆಸಿದ್ದೇವೆ. ಅದು ಸಮಾಧಾನ ತಂದಿಲ್ಲ. ಉಳಿದ 29 ಫೀಡರ್ ಗಳ ತನಿಖೆ ಮಾಡುವುದಕ್ಕೆ ಆದೇಶಿಸಿದ್ದೇನೆ. ನಿರಂತರ ಜ್ಯೋತಿ ಅಕ್ರಮ ಪ್ರಕರಣದಲ್ಲಿ ಯಾರನ್ನು ರಕ್ಷಿಸುವುದಿಲ್ಲ. ನಾನು ಇಲಾಖೆ ಸಚಿವನಾದ ಮೇಲೆ 100 ಕ್ಕೂ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇನೆ. ಅದೇ ರೀತಿ ಹರಿಹರದಲ್ಲೂ ಸಮಗ್ರ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.