ಕೋಲ್ಕತ್ತಾಗೆ ಮಣಿದ ಸನ್‌ರೈಸರ್ ಹೈದರಾಬಾದ್‌


Team Udayavani, May 15, 2022, 12:19 AM IST

ಕೋಲ್ಕತ್ತಾಗೆ ಮಣಿದ ಸನ್‌ರೈಸರ್ ಹೈದರಾಬಾದ್‌

ಮುಂಬಯಿ: ಪ್ಲೇ ಆಫ್ ಗೆ ತೇರ್ಗಡೆಯಾಗಬೇಕಾದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವು ಶನಿವಾರ ಕೋಲ್ಕತಾ ನೈಟ್‌ರೈಡರ್ ತಂಡದೆದುರು 54 ರನ್ನುಗಳಿಂದ ಸೋಲನ್ನು ಕಂಡಿದೆ.

ಈ ಸೋಲಿನಿಂದ ಹೈದರಾಬಾದ್‌ ತಂಡವು ಪ್ಲೇ ಆಫ್ ನಿಂದ ಬಹುತೇಕ ಹೊರಬಿದ್ದಿದೆ. ಕೋಲ್ಕತಾ ಈ ಪಂದ್ಯದಲ್ಲಿ ಗೆದ್ದರೂ ಪ್ಲೇ ಆಫ್ ಗೆ ತೇರ್ಗಡೆಯಾಗುವುದು ಕಷ್ಟ. ಸದ್ಯ 12 ಅಂಕ ಹೊಂದಿರುವ ಕೆಕೆಆರ್‌ಗೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ.

ಕೆಕೆಆರ್‌ನ ನಿಖರ ದಾಳಿಗೆ ಕುಸಿದ ಹೈದರಾಬಾದ್‌ ತಂಡವು 8 ವಿಕೆಟಿಗೆ 123 ರನ್‌ ಗಳಿಸ ಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು ಕೆಕೆಆರ್‌ ತಂಡವು ಆ್ಯಂಡ್ರೆ ರಸೆಲ್‌ ಅವರ ಬಿರುಸಿನ ಆಟದಿಂದಾಗಿ 6 ವಿಕೆಟಿಗೆ 177 ರನ್‌ ಗಳಿಸಿತ್ತು.

ಆರಂಭಿಕ ಕುಸಿತ, ಉಮ್ರಾನ್‌ ಮಲಿಕ್‌ ಅವರ ಘಾತಕ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಹೊರತಾಗಿಯೂ ಕೋಲ್ಕತಾ ಉತ್ತಮ ಮೊತ್ತ ಗಳಿಸಿತು. ಮೊದಲು ರಹಾನೆ-ರಾಣಾ, ನಡುವೆ ಬಿಲ್ಲಿಂಗ್ಸ್‌, ಕೊನೆಯಲ್ಲಿ ಆ್ಯಂಡ್ರೆ ರಸೆಲ್‌ ಬಿರುಸಿನ ಬ್ಯಾಟಿಂಗ್‌ ನಡೆಸಿ ಕೆಕೆಆರ್‌ ಹೋರಾಟವನ್ನು ಜಾರಿಯಲ್ಲಿರಿಸಿದರು.

28 ಎಸೆತಗಳಿಂದ ಅಜೇಯ 49 ರನ್‌ ಬಾರಿಸಿದ ಆ್ಯಂಡ್ರೆ ರಸೆಲ್‌ ಕೆಕೆಆರ್‌ ಸರದಿಯ ಟಾಪ್‌ ಸ್ಕೋರರ್‌. ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಅವರು 4 ಸಿಕ್ಸರ್‌, 3 ಬೌಂಡರಿ ಬಾರಿಸಿದರು. ಬಿಲ್ಲಿಂಗ್ಸ್‌-ರಸೆಲ್‌ ಜೋಡಿ 7.2 ಓವರ್‌ಗಳಿಂದ 63 ರನ್‌ ಪೇರಿಸಿತು. ಬಿಲ್ಲಿಂಗ್ಸ್‌ 29 ಎಸೆತಗಳಿಂದ 34 ರನ್‌ ಹೊಡೆದರು (3 ಫೋರ್‌, 1 ಸಿಕ್ಸರ್‌). ಕೊನೆಯ 5 ಓವರ್‌ಗಳಲ್ಲಿ 58 ರನ್‌ ಪೇರಿಸುವಲ್ಲಿ ಕೆಕೆಆರ್‌ ಯಶಸ್ವಿಯಾಯಿತು.

ಮಲಿಕ್‌ ಅವಳಿ ದಾಳಿ
ಹಾರ್ಡ್‌ ಹಿಟ್ಟರ್‌ ವೆಂಕಟೇಶ್‌ ಅಯ್ಯರ್‌ ಮತ್ತೂಂದು ಫ್ಲಾಪ್‌ ಶೋ ಮೂಲಕ ನಿರಾಸೆ ಮೂಡಿಸಿದರು. ಕೇವಲ 7 ರನ್‌ ಮಾಡಿ ಜಾನ್ಸೆನ್‌ ಎಸೆತದಲ್ಲಿ ಬೌಲ್ಡ್‌ ಆದರು. ದ್ವಿತೀಯ ವಿಕೆಟಿಗೆ ಜತೆಗೂಡಿದ ಅಜಿಂಕ್ಯ ರಹಾನೆ-ನಿತೀಶ್‌ ರಾಣಾ ಉತ್ತಮ ಹೋರಾಟವೊಂದನ್ನು ಸಂಘಟಿಸಿದರು. 5.3 ಓವರ್‌ಗಳಿಂದ 48 ರನ್‌ ಒಟ್ಟುಗೂಡಿತು. ಆದರೆ ಇವರಿಬ್ಬರನ್ನೂ ಉಮ್ರಾನ್‌ ಮಲಿಕ್‌ ಒಂದೇ ಓವರ್‌ನಲ್ಲಿ ಉರುಳಿಸುವ ಮೂಲಕ ಹೈದರಾಬಾದ್‌ಗೆ ಮೇಲುಗೈ ಒದಗಿಸಿದರು.

ಇಬ್ಬರೂ ಶಶಾಂಕ್‌ ಅವರಿಗೇ ಕ್ಯಾಚ್‌ ನೀಡಿದರು. ಪವರ್‌ ಪ್ಲೇಯಲ್ಲಿ ಒಂದಕ್ಕೆ 55 ರನ್‌ ಮಾಡಿ ಸುಸ್ಥಿತಿಯಲ್ಲಿದ್ದ ಕೆಕೆಆರ್‌ಗೆ ಉಮ್ರಾನ್‌ ಬಿಸಿ ಮುಟ್ಟಿಸತೊಡಗಿದರು. ಇನ್ನೇನು 10 ಓವರ್‌ ಪೂರ್ತಿಗೊಳ್ಳಬೇಕು ಎನ್ನುವಷ್ಟರಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದರು. ಅರ್ಧ ಹಾದಿ ಮುಗಿಸುವಾಗ ಕೆಕೆಆರ್‌ 4 ವಿಕೆಟಿಗೆ 84 ರನ್‌ ಗಳಿಸಿತ್ತು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ ರೈಡರ್
ವೆಂಕಟೇಶ್‌ ಅಯ್ಯರ್‌ ಬಿ ಜಾನ್ಸೆನ್‌ 7
ಅಜಿಂಕ್ಯ ರಹಾನೆ ಸಿ ಶಶಾಂಕ್‌ ಬಿ ಮಲಿಕ್‌ 28
ನಿತೀಶ್‌ ರಾಣಾ ಸಿ ಶಶಾಂಕ್‌ ಬಿ ಮಲಿಕ್‌ 26
ಶ್ರೇಯಸ್‌ ಅಯ್ಯರ್‌ ಸಿ ತ್ರಿಪಾಠಿ ಬಿ ಮಲಿಕ್‌ 15
ಸ್ಯಾಮ್‌ ಬಿಲ್ಲಿಂಗ್ಸ್‌ ಸಿ ವಿಲಿಯಮ್ಸನ್‌ ಬಿ ಭುವಿ 34
ರಿಂಕು ಸಿಂಗ್‌ ಎಲ್‌ಬಿಡಬ್ಲ್ಯು ನಟರಾಜನ್‌ 5
ಆ್ಯಂಡ್ರೆ ರಸೆಲ್‌ ಔಟಾಗದೆ 49
ಸುನೀಲ್‌ ನಾರಾಯಣ್‌ ಔಟಾಗದೆ 1
ಇತರ 12
ಒಟ್ಟು (6 ವಿಕೆಟಿಗೆ) 177
ವಿಕೆಟ್‌ ಪತನ: 1-17, 2-65, 3-72, 4-83, 5-94, 6-157.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-27-1
ಮಾರ್ಕೊ ಜಾನ್ಸೆನ್‌ 4-0-30-1
ಟಿ. ನಟರಾಜನ್‌ 4-0-43-1
ವಾಷಿಂಗ್ಟನ್‌ ಸುಂದರ್‌ 4-0-40-0 ಉಮ್ರಾನ್‌ ಮಲಿಕ್‌ 4-0-33-3

ಸನ್‌ರೈಸರ್ ಹೈದರಾಬಾದ್‌
ಅಭಿಷೇಕ್‌ ಶರ್ಮ ಸಿ ಬಿಲ್ಲಿಂಗ್ಸ್‌ ಬಿ ವರುಣ್‌ 43
ಕೇನ್‌ ವಿಲಿಯಮ್ಸನ್‌ ಬಿ ರಸೆಲ್‌ 9
ರಾಹುಲ್‌ ತ್ರಿಪಾಠಿ ಸಿ ಮತ್ತು ಬಿ ಸೌಥಿ 9
ಐಡೆನ್‌ ಮಾರ್ಕ್‌ರಮ್‌ ಬಿ ಯಾದವ್‌ 32
ನಿಕೋಲಾಸ್‌ ಪೂರಣ್‌ ಸಿ ಮತ್ತು ಬಿ ನಾರಾಯಣ್‌ 2
ವಾಷಿಂಗ್ಟನ್‌ ಸುಂದರ್‌ ಸಿ ಅಯ್ಯರ್‌ ಬಿ ರಸೆಲ್‌ 4
ಶಶಾಂಕ್‌ ಸಿಂಗ್‌ ಸಿ ಅಯ್ಯರ್‌ ಬಿ ಸೌಥಿ 11
ಮಾರ್ಕೊ ಜಾನ್ಸೆನ್‌ ಸಿ ಬಿಲ್ಲಿಂಗ್ಸ್‌ ಬಿ ರಸೆಲ್‌ 1
ಭುವನೇಶ್ವರ್‌ ಔಟಾಗದೆ 6
ಉಮ್ರಾನ್‌ ಮಲಿಕ್‌ ಔಟಾಗದೆ 3
ಇತರ: 3
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 123
ವಿಕೆಟ್‌ ಪತನ : 1-30, 2-54, 3-72, 4-76, 5-99, 6-107, 7-113, 8-113
ಬೌಲಿಂಗ್‌: ಉಮೇಶ್‌ ಯಾದವ್‌ 4-0-19-1
ಟಿಮ್‌ ಸೌಥಿ 4-0-23-2
ಸುನೀಲ್‌ ನಾರಾಯಣ್‌ 4-0-34-1
ಆ್ಯಂಡ್ರೆ ರಸೆಲ್‌ 4-0-22-3
ವರುಣ್‌ ಚಕ್ರವರ್ತಿ 4-0-25-1
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.