ಸಿಡಿಲಿಗೂ ಮುನ್ನ ಮೊಳಗಲಿದೆ ಸೈರನ್!
Team Udayavani, May 15, 2022, 7:10 AM IST
ಬೆಂಗಳೂರು: ಇನ್ನು ಮುಂದೆ ಗುಡುಗು-ಸಿಡಿಲು ಆರ್ಭ ಟಿಸುವ ಮುನ್ನವೇ ನಿಮಗೆ ಅದರ ಮಾಹಿತಿ ದೊರೆಯಲಿದೆ. ನಿಮ್ಮೂರಲ್ಲಿ ಸೈರನ್ ಮೊಳಗಿದರೆ, ಒಂದು ಗಂಟೆಯಲ್ಲೇ ಸಿಡಿಲು ಬಡಿಯುತ್ತದೆ ಎಂದರ್ಥ. ಕೂಡಲೇ ನೀವು ಸುರಕ್ಷಿತ ತಾಣವನ್ನು ತಲುಪಿ ಪ್ರಾಣರಕ್ಷಣೆ ಮಾಡಿಕೊಳ್ಳಬಹುದು!
ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣ ಕೇಂದ್ರವು ರಾಜ್ಯದಲ್ಲಿ ಸಂಭವಿಸುವ ಸಿಡಿಲಿನ ಮಾಹಿತಿ ಯನ್ನು ಜನರಿಗೆ ನೀಡುವ ಮೂಲಕ ಸಾವು-ನೋವುಗಳನ್ನು ತಡೆಯಲು ಮುಂದಾಗಿದೆ. ಅದರಂತೆ ಬೆಳಗಾವಿ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳ ಆಯ್ದ 105 ಗ್ರಾಮ ಪಂಚಾ ಯತ್‌ಗಳಲ್ಲಿ ಈ ವರ್ಷದಿಂದ ಸಿಡಿಲು ಮತ್ತು ಗುಡುಗು ಸಂಬಂಧಿಸಿದ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತಿದೆ.
ಇದು ಸಿಡಿಲು-ಗುಡುಗು ಸಂಭವಿ ಸುವ ಒಂದು ಗಂಟೆ ಮೊದಲು ಸಂಬಂಧಪಟ್ಟ ಪಂಚಾಯತ್‌ಗಳಲ್ಲಿ ಅಳವಡಿಸಿರುವ ಮೈಕ್‌ಗಳಲ್ಲಿ ಸೈರನ್ ಮೂಲಕ ಮುನ್ನೆಚ್ಚರಿಕೆ ನೀಡಲಾಗುವುದು. ಪ್ರಾಯೋಗಿಕ ವಾಗಿ ಈ ಜಿಲ್ಲೆಗಳಲ್ಲಿ ಜಾರಿಗೊಳಿ ಸಲಾಗಿದ್ದು, ಮುಂದೆ ರಾಜ್ಯಾದ್ಯಂತ ವಿಸ್ತರಿಸುವ ಯೋಚನೆ ಇದೆ.
ದಕ್ಷಿಣ ಕನ್ನಡದಲ್ಲಿ ಮಿಂಚು ಹೆಚ್ಚು
ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಿಂಚು ಸಂಚಾರವಾಗುತ್ತದೆ. ಆದರೆ ಅಲ್ಲಿ ಹೆಚ್ಚಿನ ಮರ ಗಿಡಗಳು ಇರುವುದರಿಂದ ಮನುಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುವುದಿಲ್ಲ. ಆದರೆ, ಉತ್ತರ ಕರ್ನಾಟಕ ಜಿಲ್ಲೆ ಗಳಲ್ಲಿ ಬಯಲು ಪ್ರದೇಶವೇ ಹೆಚ್ಚಿನ ಪ್ರಮಾಣದಲ್ಲಿದ್ದು, ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಇಲ್ಲ ದಿರುವ ಪರಿಣಾಮ, ಸಾವುಗಳು ಸಂಭವಿಸುತ್ತಿವೆ. ಸೈರನ್ ವ್ಯವಸ್ಥೆಯಿಂದ ಸಹಾಯವಾಗಲಿದೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ದಶಕದಲ್ಲಿ 812 ಮಂದಿ ಸಾವು
ರಾಜ್ಯದಲ್ಲಿ 2011-2021ರ ಅವಧಿಯಲ್ಲಿ ಸಿಡಿಲಿನಿಂದ 812 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ವಿಜಯಪುರ, ಬಾಗಲಕೋಟೆ, ರಾಯಚೂರು, ಗದಗ ಜಿಲ್ಲೆಗಳಲ್ಲಿಯೇ ಹೆಚ್ಚಿನ ಜನರು ಮೃತಪಟ್ಟಿದ್ದಾರೆ. 2022ರಲ್ಲಿ 49, 2021ರಲ್ಲಿ 108, 2020ರಲ್ಲಿ 79, 2019ರಲ್ಲಿ 101, 2018ರಲ್ಲಿ 117, 2017ರಲ್ಲಿ 108 ಜನರು ಮೃತಪಟ್ಟಿದ್ದಾರೆ.
ಸೈರನ್ ಮೊಳಗಿದಾಗ ಏನು ಮಾಡಬೇಕು?
– ಕೂಡಲೇ ಮನೆಗಳಿಗೆ ತೆರಳಿ
-ಕಾಂಕ್ರೀಟ್ ನೆಲದಲ್ಲಿ ನಿಂತು ಕೊಳ್ಳದಿರಿ, ಕಾಂಕ್ರೀಟ್ ಗೋಡೆಗೆ ಒರಗಬೇಡಿ
– ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ಗಳನ್ನು ಬಳಸದಿರಿ
– ತೆರೆದ ಪ್ರದೇಶಗಳಲ್ಲಿ, ಬೆಟ್ಟದ ಮೇಲೆ ಅಥವಾ ಮರಗಳ ಕೆಳಗೆ ನಿಲ್ಲದಿರಿ
– ಕಿಟಕಿ, ಬಾಗಿಲ ಬಳಿ ನಿಲ್ಲದಿರಿ.
ರಾಜ್ಯದಲ್ಲಿ ಸಿಡಿಲಿನಿಂದ ರೈತಾಪಿ ವರ್ಗ ಮೃತಪಡುವುದನ್ನು ತಡೆಗಟ್ಟಲು ಆಯ್ದ ಗ್ರಾ.ಪಂ.ಗಳಲ್ಲಿ ಸಿಡಿಲು ಅಲರ್ಟ್ ನೀಡಲಾಗುತ್ತಿದೆ. ಈ ಮೂಲಕ ಸಾಧ್ಯವಾದ ಮಟ್ಟಿಗೆ ಜನರನ್ನು ಜಾಗೃತಿಗೊಳಿಸುವ ಉದ್ದೇಶ ಹೊಂದಲಾಗಿದೆ.
–ಮನೋಜ್ ರಾಜನ್, ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ
– ಎನ್.ಎಲ್.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.