ನಿರಾತಂಕವಾಗಿ ನಡೆದ ಸಮೀಕ್ಷೆ; ಇಂದು ಜ್ಞಾನವಾಪಿ 2ನೇ ಸುತ್ತಿನ ಸರ್ವೇ
ರವಿವಾರ ಬೆಳಗ್ಗೆಯಿಂದ 2ನೇ ಹಂತದ ಸರ್ವೇ ಆರಂಭ; ಮೇ 17ರೊಳಗೆ ಅಲಹಾಬಾದ್ ನ್ಯಾಯಾಲಯಕ್ಕೆ ವರದಿ
Team Udayavani, May 15, 2022, 7:30 AM IST
ವಾರಾಣಸಿ: ಭಾರೀ ವಿವಾದಕ್ಕೆ ಕಾರಣ ವಾಗಿರುವ ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಯು ಶನಿವಾರ ಬಿಗಿಭದ್ರತೆಯೊಂದಿಗೆ ನಿರಾತಂಕವಾಗಿ ನೆರವೇರಿದೆ.
ಬೆಳಗ್ಗೆ 8 ಗಂಟೆಗೆ ಆರಂಭವಾದ ಸರ್ವೇ ಮಧ್ಯಾಹ್ನ 12ರವರೆಗೆ ಅಂದರೆ ಒಟ್ಟು 4 ಗಂಟೆಗಳ ಕಾಲ ನಡೆದಿದೆ. ಒಟ್ಟು ಶೇ. 40ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ರವಿವಾರ ಮತ್ತೆ ಸಮೀಕ್ಷೆ ಕಾರ್ಯ ಮುಂದು ವರಿಯಲಿದೆ. ಮಂಗಳವಾರದೊಳಗೆ ವರದಿ ನೀಡುವಂತೆ ವಾರಾಣಸಿಯ ನ್ಯಾಯಾಲಯ ಸೂಚಿಸಿರುವ ಕಾರಣ, ಅಷ್ಟರಲ್ಲಿ ಸರ್ವೇ ಕಾರ್ಯ ಪೂರ್ಣಗೊ ಳ್ಳುವ ಸಾಧ್ಯತೆಯಿದೆ. “ಇಡೀ ಪ್ರಕ್ರಿಯೆಯು ಶಾಂತಿಯುತ ವಾಗಿ ನೆರವೇರಿದೆ. ಯಾರಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಎಲ್ಲವೂ ಸಹಜವಾ ಗಿತ್ತು, ಎಲ್ಲರೂ ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ’ ಎಂದು ವಾರಾಣಸಿ ಪೊಲೀಸ್ ಆಯುಕ್ತ ಎ.ಸತೀಶ್ ಗಣೇಶ್ ಹೇಳಿದ್ದಾರೆ.
ಶುಕ್ರವಾರವಷ್ಟೇ ವಿವಾದಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಕರೆದು ಸಭೆ ನಡೆಸಿ, ಆಯುಕ್ತರಿಗೆ ಸಮೀಕ್ಷೆ ಕೈಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗೆಂದು 1500ಕ್ಕೂ ಅಧಿಕ ಪೊಲೀಸರು ಮತ್ತು ಪಿಎಸಿ ಯೋಧರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
“ಯಥಾಸ್ಥಿತಿ ಬದಲಿಸುವುದು ಸರಿಯಲ್ಲ’: ಧಾರ್ಮಿಕ ಕಾರ್ಯಕ್ರಮ ನಡೆಯುವ ಯಾವುದೇ ಪ್ರಾರ್ಥನಾ ಸ್ಥಳಗಳ ಯಥಾಸ್ಥಿತಿ ಯನ್ನು ಬದಲಾಯಿಸುವುದು ಸರಿಯಲ್ಲ. ಅವುಗಳು ಹೇಗಿದೆಯೋ, ಎಲ್ಲಿದೆಯೋ ಹಾಗೆಯೇ ಅಲ್ಲೇ ಇರಲು ಬಿಡಬೇಕು. ಇಲ್ಲ ದಿ ದ್ದರೆ ಅದು ದೊಡ್ಡ ಮಟ್ಟದ ಸಂಘ ರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಸಂಘರ್ಷಗಳನ್ನು ತಡೆಯಲೆಂದೇ ನರಸಿಂಹರಾವ್ ಸರಕಾರ “ಧಾರ್ಮಿಕ ಸ್ಥಳಗಳ ಕಾಯ್ದೆ’ಯನ್ನು ಜಾರಿ ಮಾಡಿದ್ದರು ಎಂದೂ ಅವರು ಸ್ಮರಿಸಿದ್ದಾರೆ.
ರಾಜಕೀಯ ಬೇಡ ಮೌರ್ಯ ಮನವಿ
ನ್ಯಾಯಾಲಯದ ಆಣತಿಯ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಶಾಂತಿಗೆ ಯಾವುದೇ ಕಾರಣಕ್ಕೂ ಭಂಗವಾಗದಂತೆ ಬಿಗಿ ಬಂದೋಬರ್ಸ್ ಏರ್ಪಡಿಸಲಾಗಿದೆ. ಮತ್ತೂಂದೆಡೆ, ಮಥುರಾ ವಿಚಾರದಲ್ಲೂ ಇದೇ ರೀತಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲಾಗುತ್ತಿದೆ. ಹಾಗಿದ್ದರೂ, ವಿಪಕ್ಷಗಳು ಮಾತ್ರ ಈ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಬೆರೆಸುತ್ತಿವೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಕಟುವಾಗಿ ಟೀಕಿಸಿರುವ ಅವರು, “”ಜ್ಞಾನವಾಪಿ ವಿಚಾರದಲ್ಲಿ ಹಾಗೂ ಶ್ರೀ ಕೃಷ್ಣ ಜನ್ಮಭೂಮಿ ವಿಚಾರದಲ್ಲಿ ವಿಪಕ್ಷಗಳು ನಡೆಸುವ ಸಾಂಪ್ರದಾಯಿಕ ರಾಜಕಾರಣವನ್ನು ದಯವಿಟ್ಟು ನಿಲ್ಲಿಸಿ. ಇಂಥ ಧಾರ್ಮಿಕ ವಿವಾದಗಳು ಎಲ್ಲೇ ನಡೆಯಲಿ ಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಹಾಗೊಮ್ಮೆ ಕೋರ್ಟ್ ಆದೇಶ ಬಂದಾಗ ಅದನ್ನು ಎಲ್ಲರೂ ಪಾಲಿಸಬೇಕು” ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.