ನಗರ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಆಗಿಲ್ಲ ಸರಳ
Team Udayavani, May 15, 2022, 10:12 AM IST
ಕುಂದಾಪುರ: ನಗರ ಯೋಜನ ಪ್ರದೇಶದ ಹೊರ ವ್ಯಾಪ್ತಿಯಲ್ಲಿ ಕುಟುಂಬ ದೊಳಗೆ ಪಾಲು ಆದರೆ ಭೂಮಿಯನ್ನು ವಿಂಗಡಿಸಿ ನೋಂದಣಿ ಮಾಡಲು ಸಾಧ್ಯವಾಗು ತ್ತಿಲ್ಲ ಎನ್ನುವ ಸಮಸ್ಯೆಗೆ ಪರಿಹಾರ ದೊರೆತಿದೆ.
ಸರಕಾರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡಿದ್ದು ಇಲಾಖಾ ಆದೇಶ ಇನ್ನಷ್ಟೇ ಜಾರಿಯಾಗಬೇಕಿದೆ. ಇದರಿಂದ ತುಂಡುಭೂಮಿ ಹೊಂದಿದ್ದು ಭೂ ಪರಿವರ್ತನೆ ಮಾಡಲು ಪ್ರಾಧಿಕಾರದಿಂದಲೇ ಅನುಮತಿ ಬೇಕೆಂಬ ನಿಯಮ ಬದಲಾಗಲಿದೆ. ಇದು ಗ್ರಾ.ಪಂ., ಪ.ಪಂ. ಜನರಿಗೆ ಅನ್ವಯವಾಗುತ್ತದೆ. ಆದರೆ ನಗರ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇನ್ನೂ ಹಾಗೆಯೇ ಇದೆ.
ಸಚಿವರ ಪತ್ರ
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಈ ಕುರಿತು ಸರಕಾರಿ ಆದೇಶ ಹೊರಡಿಸುವಂತೆ ಪತ್ರ ಬರೆದಿದ್ದಾರೆ. ಕೆ.ಎಸ್ ಈಶ್ವರಪ್ಪ ಅವರು ಸಂಪುಟ ಉಪ ಸಮಿತಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವರಾಗಿದ್ದಾಗ ಅವರ ಅಧ್ಯಕ್ಷತೆಯಲ್ಲಿ ಮಾ. 4ರಂದು ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದ ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶ ವಸತಿ/ವಸತಿಯೇತರ ಉದ್ದೇಶದ ಭೂಪರಿವರ್ತನೆ ಜಮೀನಿನಲ್ಲಿನ ವಿನ್ಯಾಸ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನೆ ಪ್ರಾಧಿಕಾರದ ಅನುಮೋದನೆ ಪಡೆಯುವ ಬಗ್ಗೆ ಹೊರಡಿಸಿದ ಆದೇಶದಿಂದ ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಅನನುಕೂಲವಾಗಿರುವ ಬಗ್ಗೆ ಮನವಿಗಳನ್ನು ಸ್ವೀಕರಿಸಲಾಗಿದೆ. ಭೌಗೋಳಿಕವಾಗಿ ಹೆಚ್ಚಾಗಿ ತುಂಡು ಭೂಮಿಗಳನ್ನು ಹೊಂದಿರುವಂತಹ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಈ ತಿದ್ದುಪಡಿ ಕಾಯ್ದೆಯಿಂದ ವಿನಾಯಿತಿ ನೀಡಿ ಆದೇಶಿಸಲು ಸೂಚಿಸಿದ್ದಾರೆ.
ಆದೇಶ ಬಾಕಿಯಾಗಿತ್ತು
ಸಚಿವರಿಂದ ಪತ್ರ ಹೋಗಿದ್ದು, ಸಭೆಯಲ್ಲಿ ನಿರ್ಣಯ ಆಗಿದ್ದರೂ ಇಲಾಖೆಯಿಂದ ಇನ್ನೂ ಸರಕಾರಿ ಆದೇಶ ಬಂದಿಲ್ಲ. ಇದಕ್ಕಾಗಿ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರು. ಮೇ 12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಪಟ್ಟಣ ಪಂಚಾಯತ್, ಪುರಸಭೆ ವ್ಯಾಪ್ತಿ ಸೇರಿದಂತೆ ಪ್ರತ್ಯೇಕ ನಗರ ಯೋಜನೆ ಪ್ರಾಧಿಕಾರಗಳಿಲ್ಲದ ಕಡೆ ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ನಿಂದ ವಿನಾಯಿತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಇದೂ ಬಾಕಿ
ಯೋಜನಾ ಪ್ರಾಧಿಕಾರದಿಂದ ಸರಕಾರಕ್ಕೆ ಕಳುಹಿಸಿದ ಮಹಾಯೋಜನೆ ಇನ್ನೂ ಅನುಮೋದನೆ ಆಗದೇ ಭೂ ವಿಂಗಡಣೆ ಕೂಡ ಮಾಡುವಂತಿಲ್ಲ. ನಗರ ಯೋಜನ ಪ್ರಾಧಿಕಾರ ಆರಂಭವಾದ ಬಳಿಕದಿಂದ ಇರುವ ಈ ಸಮಸ್ಯೆಗೆ ಕಳೆದ 13 ವರ್ಷಗಳಿಂದ ಪರಿಹಾರ ದೊರೆತಿಲ್ಲ. ಮಾಸ್ಟರ್ ಪ್ಲಾನ್ ಮಂಜೂರಾಗದ ಎಲ್ಲ ನಗರ ಯೋಜನ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದೆ. ಸಾರ್ವಜನಿಕರಿಗೆ ಆಗುವ ಅನನುಕೂಲತೆಯನ್ನು ತಡೆಯಲು ಆದ್ಯತೆ ಮೇಲೆ ಸ್ಥಳೀಯ ಯೋಜನ ಪ್ರದೇಶಗಳು ಮಹಾಯೋಜನೆ ತಯಾರಿಸಿ ಯೋಜನ ಪ್ರಾಧಿಕಾರ ರಚನೆಯಾದ ವರ್ಷಗಳೊಳಗೆ ಸರಕಾರದ ಅನುಮೋದನೆಗೆ ಸಲ್ಲಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ನಿಯಮ ಇದೆ. ಆದರೆ ಪಾಲನೆ ಆಗುತ್ತಿಲ್ಲ.
ಆದೇಶವಾಗಿಲ್ಲ
ನಗರ ಯೋಜನಾ ಪ್ರದೇಶದ ಹೊರ ಗ್ರಾಮದವರಿಗೆ ಅನುಕೂಲವಾಗುವ ತೀರ್ಮಾನ ಸರಕಾರದಿಂದ ಆಗಿದ್ದು ಯೋಜನಾ ಪ್ರಾಧಿಕಾರಗಳು ಇರುವಲ್ಲಿ ಮಹಾಯೋಜನೆ ಅನುಮೋದನೆಯಾಗದೇ, ಅನುಮತಿಗೂ ಶಾಶ್ವತ ವ್ಯವಸ್ಥೆಯಾಗದೇ ಸಮಸ್ಯೆ ಮುಂದುವರಿದಿದೆ. -ವಿಜಯ್ ಎಸ್. ಪೂಜಾರಿ, ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.