![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 15, 2022, 2:47 PM IST
ದಾವಣಗೆರೆ: ಭಾರತದ ಸಂವಿಧಾನ ನಾಗರಿಕರಿಗೆ ನೀಡಿದ ಅಮೂಲ್ಯವಾದ ಮತದಾನದ ಹಕ್ಕು ಹೆಂಡದ ಹಾವಳಿಯಿಂದ ಯೋಗ್ಯ ರೀತಿಯಲ್ಲಿ ಚಲಾವಣೆಯಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಚುನಾವಣಾ ಆಯೋಗ, ಎಲ್ಲ ಮತಗಟ್ಟೆಗಳಲ್ಲಿ ಉಸಿರು ಪರೀಕ್ಷಾ ಯಂತ್ರ (Breath analyzer tester) ಅಳವಡಿಸಬೇಕು ಹಾಗೂ ಮದ್ಯ ಸೇವಿಸಿ ಬಂದವರಿಗೆ ಮತದಾನ ಹಕ್ಕು ನಿಷೇಧಿಸಬೇಕು ಎಂಬ ಸಲಹೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಪ್ರತಿಯೊಬ್ಬ ನಾಗರಿಕ ಸಾಕಷ್ಟು ಆಲೋಚಿಸಿ, ಪರಾಮರ್ಶಿಸಿ ತನ್ನ ಹಕ್ಕು ಚಲಾಯಿಸಬೇಕು. ಮತ ಚಲಾಯಿಸುವಾಗ ಮತದಾರ ಯಾವುದೇ ನಶೆಯಲ್ಲಿರದೇ ಸ್ವಚ್ಛ ಮನಸ್ಸಿನಿಂದ ಆಲೋಚಿಸಿ ಮತ ಚಲಾಯಿಸಬೇಕು. ಜತೆಗೆ ಮತದಾನ ಸಂದರ್ಭದಲ್ಲಿ ಮದ್ಯದ ಆಮಿಷಕ್ಕೆ ಯಾರೂ ಒಳಗಾಗಬಾರದು ಎಂದು ಚುನಾವಣಾ ಆಯೋಗ ಮತದಾನದ ಮುನ್ನ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡುತ್ತದೆ. ಆದರೂ ಹಲವೆಡೆ ಹಂಚಿಕೆಯಾದ ಉಚಿತ ಮದ್ಯ ಕುಡಿದು, ನಶೆಯಲ್ಲೇ ಮತ ಚಲಾಯಿಸುವುದು ಮಾಮೂಲು ಆಗಿರುವುದು ಕಟು ಸತ್ಯ.
ಮದ್ಯ ಕುಡಿದು ಮತಗಟ್ಟೆಗೆ ಬಂದು ಮತ ಚಲಾಯಿಸುವುದನ್ನು ತಡೆಯಲು ಎಲ್ಲ ಮತಗಟ್ಟೆಗಳಲ್ಲಿ ಉಸಿರು ತಪಾಸಣೆ ಮಾಡುವ (ಕುಡಿದು ವಾಹನ ಚಾಲನೆ ಮಾಡುವರನ್ನು ಪತ್ತೆ ಹಚ್ಚಲು ಪೊಲೀಸರು ಉಸಿರು ಪರೀಕ್ಷೆ ಮಾಡುವಂತೆ) ವ್ಯವಸ್ಥೆಯಾಗಬೇಕು. ತನ್ಮೂಲಕ ಮತದಾನದಲ್ಲಿ ಒಂದಿಷ್ಟು ಸುಧಾರಣೆ ತರಬಹುದು ಎಂಬುದು ಈ ಸಲಹೆಯ ಹಿಂದಿನ ಉದ್ದೇಶವಾಗಿದೆ.
ಆಯೋಗಕ್ಕೆ ಪತ್ರ
ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಚನ್ನಗಿರಿ ಅವರು ಈ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗವು ಮತದಾನದ ಹಿಂದಿನ 48 ಗಂಟೆ ಅವಧಿ ಎಲ್ಲ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದರೂ ಅಕ್ರಮವಾಗಿ ಮದ್ಯ ಶೇಖರಿಸಿ ಮತದಾರರಿಗೆ ಸರಬರಾಜು ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇರುವುದು ಗುಟ್ಟಾಗಿ ಉಳಿದಿಲ್ಲ.
ಆದ್ದರಿಂದ ಆಯೋಗ ಮತದಾನ ಮಾಡುವ ಸಂದರ್ಭದಲ್ಲಿ ವ್ಯಕ್ತಿ ಮದ್ಯಪಾನ ಮಾಡಿರಬಾರದು ಎಂಬ ನಿಯಮ ಜಾರಿಗೆ ತರಬೇಕು. ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಉಸಿರು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು. ಮದ್ಯ ಸೇವಿಸಿ ಬಂದವರಿಗೆ ಮತದಾನದ ಹಕ್ಕು ನಿರ್ಬಂಧಿಸಬೇಕು. ಇದರಿಂದ ಮತದಾನ ವಿವೇಚನೆಯಿಂದ ಮಾಡಲು ಸಾಧ್ಯವಾಗುತ್ತದೆ. ಕುಡಿದು ಗಲಾಟೆ ಮಾಡುವುದು ನಿಯಂತ್ರಣಕ್ಕೆ ಬರುತ್ತದೆ. ಮತದಾನ ಯೋಗ್ಯರೀತಿಯಲ್ಲಿ ನಡೆದು ಯೋಗ್ಯ ವ್ಯಕ್ತಿ ಆಯ್ಕೆಗೆ ಸಹಕಾರಿಯಾಗಬಹುದು ಎಂದು ಸಲಹೆ ನೀಡಿದ್ದಾರೆ. ಸಾರ್ವಜನಿಕರು ನೀಡುತ್ತಿರುವ ಈ ಸಲಹೆಯನ್ನು ಚುನಾವಣಾ ಆಯೋಗ ಕಾನೂನು ವ್ಯಾಪ್ತಿಯಲ್ಲಿ ಪರಿಶೀಲಿಸಿ, ಸ್ವೀಕರಿಸುತ್ತದೆಯೋ ನಿರಾಕರಿಸುತ್ತದೆಯೋ ಕಾದು ನೋಡಬೇಕಿದೆ.
ಮತದಾನ ಹಕ್ಕು ಮಹತ್ವದ್ದಾಗಿದ್ದು ಇದನ್ನು ಚಲಾಯಿಸುವಾಗ ವ್ಯಕ್ತಿ ಯಾವುದೇ ನಶೆಯಲ್ಲಿರಬಾರದು. ಪ್ರತಿ ಮತಗಟ್ಟೆ ದ್ವಾರದಲ್ಲಿ ಉಸಿರು ತಪಾಸಣೆ ಯಂತ್ರ ಅಳವಡಿಸುವ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದೇನೆ. ಆಯೋಗ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲ ಕೆರಳಿಸಿದೆ. -ಚಂದ್ರಶೇಖರ್ ಚನ್ನಗಿರಿ, ಸಾಮಾಜಿಕ ಕಾರ್ಯಕರ್ತ
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.