ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚರಂಡಿ ಹೂಳೆತ್ತುವಿಕೆ ಆರಂಭ
Team Udayavani, May 17, 2022, 11:24 AM IST
ಕಿನ್ನಿಗೋಳಿ: ಕೆಲವು ವರ್ಷ ಗಳಿಂಂದ ಕಿನ್ನಿಗೋಳಿ ಬಸ್ ನಿಲ್ದಾಣದ ಸುತ್ತಲೂ ಇರುವ ಚರಂಡಿಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಈ ಬಗ್ಗೆ ಪ.ಪಂ. ಎಚ್ಚೆತ್ತು ಕಾಮಗಾರಿ ಆರಂಭಗೊಂಡಿದೆ. ಬಸ್ ನಿಲ್ದಾಣದ ಸೋಜಾ ಫರ್ನಿಚರ್ ಬಳಿಯಿಂದ ಕಾಮಗಾರಿ ಆರಂಭಗೊಂಡಿದ್ದು, ಬಸ್ ನಿಲ್ದಾಣದ ಸುತ್ತ ಚರಂಡಿಯ ಹೂಳು ತೆಗದೆ ನೀರು ಸರಾಗವಾಗಿ ಹರಿಯಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ಚರಂಡಿಯಲ್ಲಿ ಕುಡಿಯುವ ನೀರಿನ ಎರಡು ಪೈಪ್‌ಗಳನ್ನು ಹಾಕಿರುವುದು ಚರಂಡಿ ಹೂಳು ತೆಗೆಯಲು ತೊಡಕು ಉಂಟಾಗಿದೆ. ಚರಂಡಿಗೆ ಕಾಂಕ್ರೀಟ್ ಚಪ್ಪಡಿ ಕಲ್ಲು ಹಾಸಿರುವುದರಿಂದ ಕೆಲವು ಚಪ್ಪಡಿ ಕಾಂಕ್ರೀಟ್ ಕಲ್ಲುಗಳು ಒಡೆದು ಹೋಗಿದ್ದು ಅಪಾಯಕಾರಿಯಾಗಿ ಪಾದಚಾರಿಗಳಿಗೆ ನಡೆದಾಡಲು ಕಷ್ಟಕರವಾಗಿದೆ.
ಸಹಕಾರ ಅಗತ್ಯ
ಕೆಲವು ವರ್ಷಗಳಿಂದ ಸಮರ್ಪಕವಾದ ರೀತಿಯಲ್ಲಿ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಹೂಳು ತೆಗೆಯದೆ ಇರುವುದರಿಂದ ಕೆಲವೊಂದು ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಮೊದಲ ಹಂತದಲ್ಲಿ ಹೂಳು ತೆಗೆದು ಬಸ್ ನಿಲ್ದಾಣ ಭಾಗದಲ್ಲಿ ನೀರು ರಸ್ತೆಯಲ್ಲಿ ಹರಿಯದಂತೆ ವ್ಯವಸ್ಥೆ ಮಾಡಬೇಕಾಗಿದೆ. ಬಳಿಕ ಹಳೆಯ ಕಾಂಕ್ರೀಟ್ ಕಲ್ಲು ಚಪ್ಪಡಿಯನ್ನು ಬದಲಾಯಿಸಲಾಗುವುದು ಇದಕ್ಕೆ ಇಲ್ಲಿನ ಅಂಗಡಿ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ. -ಸಾಯೀಶ್ ಚೌಟ, ಮುಖ್ಯಾಧಿಕಾರಿ ಕಿನ್ನಿಗೋಳಿ ಪಟ್ಟಣ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.