ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ
Team Udayavani, May 17, 2022, 2:18 PM IST
ತೀರ್ಥಹಳ್ಳಿ: ಭಾನುವಾರ ಸಂಜೆಯ ವೇಳೆ ಮರಳನ್ನು ಡಬ್ಲಿಂಗ್ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನು ಪೊಲೀಸರು ಕುಶಾವತಿ ಬಳಿ ಹಿಡಿದಿದ್ದಾರೆ. ತಾಲೂಕಿನ ಮಳಲೂರು, ಆಂದಿನಿ, ಬುಕ್ಲಾಪುರದಲ್ಲಿ ಪ್ರತಿದಿನ ಡಬ್ಲಿಂಗ್ ಮಾಡಲಾಗುತ್ತದೆ. ಆದರೆ ಇಲ್ಲಿ ಯಾವ ರೀತಿಯ ತಪಾಸಣೆಯೂ ನಡೆಯಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಕರೆಗೆ ಸ್ಪಂದಿಸುವುದಿಲ್ಲವೆಂಬುದು ಸ್ಥಳೀಯರ ಆರೋಪವಾಗಿದೆ.
ಮಾಮೂಲಿಯಾಗಿ ಮರಳು ಕ್ವಾರಿ ನಿಯಮದ ಪ್ರಕಾರ 8 ಟನ್ ಮರಳನ್ನು ಮಾತ್ರ ಲಾರಿಗೆ ತುಂಬಿಸಬೇಕೆಂಬ ನಿಯಮವಿದೆ. ಆದರೆ ಈ ನಿಯಮವನ್ನೆಲ್ಲಾ ಗಾಳಿಗೆ ತೂರಲಾಗಿದೆ. ಒಂದು ಲಾರಿಗೆ 25 ಟನ್ ಮರಳನ್ನು ತುಂಬಲಾಗುತ್ತದೆ. ಇದನ್ನೇ ಡಬ್ಲಿಂಗ್ ಎನ್ನಲಾಗುತ್ತದೆ. ಒಂದೇ ಬಿಲ್ಲು ಹಿಡಿದು 3 ಪಟ್ಟು ಲೋಡ್ ಹೆಚ್ಚಾಗುತ್ತದೆ. ಕ್ವಾರಿಗಳಲ್ಲಿ ಡಬ್ಲಿಂಗ್ ಮಾಡಿ ವಿಪರೀತ ಮರಳು ತುಂಬುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವುದು ಯಾವಾಗ?
ಭಾನುವಾರ ರಾತ್ರಿ ಮೂರು ಲಾರಿಗಳನ್ನು ಸೀಜ್ ಮಾಡಿದ್ದು ಸೀಜ್ ಆದ ಪ್ರತಿ ಲಾರಿಗಳಲ್ಲಿ ಪತ್ತೆಯಾದ ಮರಳು ಬರೋಬ್ಬರಿ 25 ಟನ್ ಲೋಡು ಇದೆ. ಹೀಗೆ ತುಂಬುವ ಲಾರಿಗಳನ್ನು ಮಾತ್ರ ಸೀಜ್ ಮಾಡುವುದು ಮಾತ್ರವಲ್ಲದೆ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು. ತಾಲೂಕಿನಾದ್ಯಂತ ಹೇರಳವಾಗಿರುವ ಅಕ್ರಮ ಮರಳು ಲೂಟಿಯಾಗುವುದನ್ನು ತಡೆಯುವುದು ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.