ಮತ್ತೆ “ಎ’ ಗ್ರೇಡ್‌ಗೇರಿದ ದಕ್ಷಿಣ ಕನ್ನಡ, ಸಮತೋಲನ ಕಾಯ್ದುಕೊಂಡ ಉಡುಪಿ
ದ.ಕ.: 17 ವಿದ್ಯಾರ್ಥಿಗಳಿಗೆ 625 ಅಂಕ
Team Udayavani, May 19, 2022, 11:54 PM IST
ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು “ಎ’ (ಕಳೆದ ಬಾರಿ “ಬಿ’) ಗ್ರೇಡ್‌ನೊಂದಿಗೆ ಶೇ. 78.20 ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ತಲಾ 625 ಅಂಕ ಗಳಿಸಿದ್ದಾರೆ. ಜಿಲ್ಲೆಯ 75 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ.
ಜಿಲ್ಲೆಯಲ್ಲಿ ಒಟ್ಟು 28,638 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 25,052 ಮಂದಿ ಉತ್ತೀರ್ಣರಾಗಿದ್ದಾರೆ.
ಒಟ್ಟು 523 ಶಾಲೆಗಳ ಪೈಕಿ 322 ಶಾಲೆಗಳು (ಸರಕಾರಿ 89, ಅನುದಾನಿತ 51, ಅನುದಾನ ರಹಿತ 182) “ಎ’ ಗ್ರೇಡ್, 148 ಶಾಲೆಗಳು (ಸರಕಾರಿ 69, ಅನುದಾನಿತ 40, ಅನುದಾನ ರಹಿತ 39) “ಬಿ’ ಗ್ರೇಡ್ ಹಾಗೂ 53 ಶಾಲೆಗಳು (ಸರಕಾರಿ 31, ಅನುದಾನಿತ 13, ಅನುದಾನ ರಹಿತ 9) “ಸಿ’ ಗ್ರೇಡ್ ಗಳಿಸಿವೆ.
ಶಿಕ್ಷಣಾಧಿಕಾರಿ ವ್ಯಾಪ್ತಿಯ ಬಂಟ್ವಾಳ ತಾಲೂಕು ಶೇ. 75.27 (ಕಳೆದ ವರ್ಷ 80.90), ಬೆಳ್ತಂಗಡಿ ತಾಲೂಕು ಶೇ. 80.52 (ಶೇ. 82.77), ಮಂಗಳೂರು ಉತ್ತರ ಶೇ. 80.60 (ಶೇ. 81.12), ಮಂಗಳೂರು ದಕ್ಷಿಣ ಶೇ. 74.59 (78.78), ಮೂಡುಬಿದಿರೆ ಶೇ. 82.00 (ಶೇ. 81.59), ಪುತ್ತೂರು ಶೇ. 79.86 (ಶೇ. 79.64) ಹಾಗೂ ಸುಳ್ಯ ತಾಲೂಕು ಶೇ. 77.62 (ಶೇ. 80.64) ಫಲಿತಾಂಶ ದಾಖಲಿಸಿದೆ.
ಬಂಟ್ವಾಳದಲ್ಲಿ 11 ಶಾಲೆಗಳು (ಸರಕಾರಿ 3, ಅನುದಾನ ರಹಿತ 8) ಶೇ.100 ಫಲಿತಾಂಶವನ್ನು ದಾಖಲಿಸಿವೆ. ಬೆಳ್ತಂಗಡಿಯಲ್ಲಿ 14 (ಸರಕಾರಿ 5, ಅನುದಾನ ರಹಿತ 9), ಮಂಗಳೂರು ಉತ್ತರ 12 (ಸರಕಾರಿ 3, ಅನುದಾನಿತ 1, ಅನುದಾನ ರಹಿತ 8), ಮಂಗಳೂರು ದಕ್ಷಿಣ 10 (ಸರಕಾರಿ 4, ಅನುದಾನಿತ 2, ಅನುದಾನ ರಹಿತ 4), ಮೂಡುಬಿದಿರೆ 7 (ಸರಕಾರಿ 1, ಅನುದಾನ ರಹಿತ 6), ಪುತ್ತೂರು 15 (ಸರಕಾರಿ 5, ಅನುದಾನಿತ 1, ಅನುದಾನರಹಿತ 5), ಸುಳ್ಯ 6 (ಸರಕಾರಿ 1, ಅನುದಾನ ರಹಿತ 5) ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಉಡುಪಿ: ಐದು ವಿದ್ಯಾರ್ಥಿಗಳಿಗೆ 625 ಅಂಕ
ಉಡುಪಿ, ಮೇ 19: ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 14,016 ವಿದ್ಯಾರ್ಥಿಗಳಲ್ಲಿ 12,267 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 1,749 ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದಾರೆ.
13,672 ಶಾಲಾ ವಿದ್ಯಾರ್ಥಿಗಳಲ್ಲಿ (ರೆಗ್ಯೂಲರ್) 12,231 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 89.46ರಷ್ಟು ಫಲಿತಾಂಶ ಬಂದಿದೆ. 297 ಖಾಸಗಿ ವಿದ್ಯಾರ್ಥಿಗಳಲ್ಲಿ 27 ಮಂದಿ ತೇರ್ಗಡೆ ಯಾಗಿದ್ದು, ಶೇ. 9.09ರಷ್ಟು ಫಲಿತಾಂಶ ದಾಖಲಾಗಿದೆ. 31 ರೆಗ್ಯೂಲರ್ ಪುನರಾವರ್ತಿ ವಿದ್ಯಾರ್ಥಿಗಳಲ್ಲಿ 8 (ಶೇ. 25.81) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 16 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದು ಶೇ. 6.25ರಷ್ಟು ಫಲಿತಾಂಶ ಬಂದಿದೆ.
ಈ ವರ್ಷವೂ ಎ ಶ್ರೇಣಿ
ಕಳೆದ ಎರಡು ವರ್ಷದಿಂದ ಜಿಲ್ಲಾವಾರು ರ್‍ಯಾಂಕ್ ಘೋಷಣೆ ಮಾಡದೆ ಶ್ರೇಣಿ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯು ಕಳೆದ ವರ್ಷದಂತೆ ಈ ವರ್ಷವೂ ಎ ಶ್ರೇಣಿ ಪಡೆದುಕೊಂಡಿದೆ. 2018-19ರಲ್ಲಿ 2ನೇ ಸ್ಥಾನ, 2017-18, 2016-17ರಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತ್ತು. ಕಳೆದ ಐದು ವರ್ಷದಲ್ಲಿ ಜಿಲ್ಲೆಯು ಎಸೆಸೆಲ್ಸಿ ಫಲಿತಾಂಶದಲ್ಲಿ ಸಮಾತೋಲನ ಕಾಯ್ದುಕೊಂಡು ಬರುತ್ತಿದೆ. 2015-16ರಿಂದ ಈಚೆಗೆ ಕ್ರಮವಾಗಿ ಶೇ. 89.64, ಶೇ. 84.23, ಶೇ. 88.18, ಶೇ. 89.49, ಶೇ. 89.98, ಶೇ. 100 (ಕೊರೊನಾದಿಂದ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು), ಶೇ. 89.46ರಷ್ಟು ಫಲಿತಾಂಶ ದಾಖಲಾಗಿದೆ.
ಶಾಲಾವಾರು ಫಲಿತಾಂಶ
13 ಸರಕಾರಿ, 2 ಅನುದಾನಿತ ಹಾಗೂ 26 ಅನುದಾನ ರಹಿತ ಪ್ರೌಢಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ. 38 ಶಾಲೆಗಳು ಶೇ. 95ಕ್ಕಿಂತ ಹೆಚ್ಚು, 65 ಶಾಲೆಗಳು ಶೇ. 90ಕ್ಕಿಂತ ಅಧಿಕ, 66 ಶಾಲೆಗಳು ಶೇ. 80ಕ್ಕಿಂತ ಹೆಚ್ಚು, 32 ಶಾಲೆಗಳು ಶೇ. 70ಕ್ಕಿಂತ ಅಧಿಕ, 14 ಶಾಲೆಗಳು ಶೇ. 60ಕ್ಕಿಂತ ಹೆಚ್ಚು, 8 ಶಾಲೆಗಳು ಶೇ. 50ಕ್ಕಿಂತ ಅಧಿಕ ಹಾಗೂ 2 ಶಾಲೆಗಳು ಮಾತ್ರ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ. ಶೂನ್ಯ ಫಲಿತಾಂಶದ ಯಾವುದೇ ಶಾಲೆ ಜಿಲ್ಲೆಯಲ್ಲಿ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.