ಬೇಜಾರು ಮಾಡ್ಕೊಂಡ್ರು ಸಂಹಿತಾ!
Team Udayavani, May 20, 2022, 2:57 PM IST
ನಟಿ ಸಂಹಿತಾ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರಕ್ಕೆ “ಯಾಕೋ ಬೇಜಾರು’ ಎಂಬ ಟೈಟಲ್ ಇಡಲಾಗಿದೆ. ಗಾಲಿ ಲಕ್ಕಿ ಅವರ ನಿರ್ದೇಶನದ ಈ ಚಿತ್ರ.
ನಾಯಕಿ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಸಂಹಿತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಅಭಿರಾನವ್ ಚಿತ್ರದ ನಾಯಕ. “ಯಾಕೋ ಬೇಜಾರು’ ಒಂದು ಅಪ್ಪಟ ಲವ್ ಸ್ಟೋರಿಯಾಗಿದ್ದು ಇಲ್ಲಿ ಅನು ಎಂಬ ಪಾತ್ರದಲ್ಲಿ ಸಂಹಿತಾ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸವಾಲಿನ ಪಾತ್ರದಲ್ಲಿ ಮಯೂರಿ : ಅಂಧ ಪಾತ್ರದ ಮೇಲೆ ಚೆಂದದ ನಿರೀಕ್ಷೆ
ಪಾತ್ರದ ಬಗ್ಗೆ ಮಾತನಾಡುವ ಸಂಹಿತಾ, “ನಾನು ಈವರೆಗೆ ಅಭಿನಯಿಸಿದ ಚಿತ್ರಗಳಲ್ಲಿ ಹಳ್ಳಿ ಹುಡುಗಿ, ಕಾಲೇಜ್ ಗರ್ಲ್ ಹೀಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದರೂ ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರವಿದೆ. ಸೀತಮ್ಮ ಬಂದ್ಲು… ಚಿತ್ರದ ನಂತರ ನಾನು ಕಾಣಿಸಿಕೊಂಡಿರುವ ಮತ್ತೂಂದು ನಾಯಕಿ ಪ್ರಧಾನ ಚಿತ್ರ ಇದಾಗಿದೆ. ಯಾಕೋ ಬೇಜಾರಾಗಿದೆ ಅಂತಾನೇ ತನ್ನ ಮನೆ ಬಿಟ್ಟು ಬಂದ ಹುಡುಗಿಯೊಬ್ಬಳು ಪ್ರೀತಿಯ ಬಲೆಯಲ್ಲಿ ಬಿದ್ದು ಏನೆಲ್ಲ ತಾಪತ್ರಯ ಅನುಭವಿಸುತ್ತಾಳೆ ಅನ್ನೋದೇ ಈ ಚಿತ್ರದ ಕಥೆ. ನಿರ್ದೇಶಕರು ಕಥೆಗೇ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮಧ್ಯಮ ವರ್ಗದ ಹುಡುಗಿಯೊಬ್ಬಳು ಮೊದಲ ಬಾರಿಗೆ ಲವ್ ನಲ್ಲಿ ಬಿದ್ದಾಗ ಆಕೆಗಾದ ಅನುಭವಗಳೇನು ಎಂಬುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಈಗಾಗಲೇ ನನ್ನ ಪಾತ್ರದ ಡಬ್ಬಿಂಗ್ ಕೂಡ ಮುಗಿಸಿದ್ದು, ತುಂಬಾ ಚೆನ್ನಾಗಿ ಬಂದಿದೆ’ ಎನ್ನುತ್ತಾರೆ.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಡ್ಯಾನಿಯಲ್ ವಿ.ಕಮಟಂ ಸಂಗೀತ ನೀಡಿದ್ದಾರೆ. ಸುಬ್ಬು ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.